ಅವಳ ನೆನಪು

ಅವಳ ನೆನಪು

ಬಣ್ಣಗಳು ಕರಗಿ ಮಬ್ಬಾದ
ಅವಳ ಚಿತ್ರವೊಂದು
ನೆನಪಿನ ಪುಟದೊಳಗಿಂದ
ನನ್ನನು ಕಾಡುತ್ತಿತ್ತು
ಮೊದಲ ನೋಟದಲ್ಲೇ
ಅಚ್ಚೊತ್ತಿದ ಚಿತ್ರದ;
ಭಾವಗಳು ಅಯೋಮಯವಾಗಿ
ಅವಳ ನಗು ಅಸ್ಪಷ್ಟವಾಗಿತ್ತು
ನಿನ್ನ ದಟ್ಟ ಹೆರಳ ವರ್ಣದ 
ವರ್ಣನೆ ನಾ ಮಾಡಲೇ?
ಬೆಂಡೋಲೆ ಕಳಿಸಿದ ಪ್ರೇಮದೋಲೆಯ
ನಿನ್ನ ಮುಂದೆಯೇ ಓದಲೇ?
ಬೊಗಸೆ ಕಣ್ಗಳ ಹಾದಿಯಿಂದ
ನಿನ್ನ ಕನಸ ಸೇರಲೇ?
ತುಟಿಯಂಚಲಿ ಬಂದ ನಗುವಿಗೆ 
ಬಿದ್ದ ಕೆನ್ನೆ ಗುಳಿಯಲಿ ನಾ ಬೀಳಲೇ?
ವರ್ಣಹೀನ ಚಿತ್ತಾರದೊಂದಿಗೆ
ನನ್ನ ವರ್ಣರಂಜಿತ ಸಲ್ಲಾಪವು...
ನೋಡಿ ವರುಷಗಳು ಕಳೆದರೂ
ಮನದ ಪೇಚಾಟಕ್ಕೆ ಎಲ್ಲಿ ಕೊನೆ...
ಅವಳೊಮ್ಮೆ ಸಿಕ್ಕರೆ? ಒಮ್ಮೆ ನಕ್ಕರೆ?
ಮಾಸಿದ ಚಿತ್ರಕೆ 
ರಂಗಿನೋಕುಳಿ ಚೆಲ್ಲಿ ಹೋದರೆ...!!
"ಫೇಸ್ ಬುಕ್ಕಿನಲ್ಲಿ ಅವಳಿರಬಹುದು
ತಡಕಾಡಿ ನೋಡೊಮ್ಮೆ"
ನನ್ನ ಪಾಡು ನೋಡಿ 
ಗೆಳೆಯನ ಸಲಹೆ ಬಂತು.
ಕಣ್ಣಂಚಿಗೆ ಆಸೆಯ ನೀರನೆರಚಿ
ತಡರಾತ್ರಿಯ ತಡಕಾಟದಲ್ಲಿ
ಸಿಕ್ಕಿ ಬಿಟ್ಟಿತು ಅವಳ ಮುಖ!!
ಹುಡುಗನೊಬ್ಬನ ಕೆನ್ನೆಗೆ
ಗುಳಿಬಿದ್ದ ಕೆನ್ನೆ ಅಂಟಿಸಿ
ತನ್ನ ಕೈಯ್ಯಾರೆ ತಗೆದ ಚಿತ್ರಕೆ
"ನಾನೂ-ನನ್ನವನೂ" ಶೀರ್ಷಿಕೆ
"ಮುಖ ಪುಸ್ತಕ" ನಾಶವಾಗಲಿ,
ಕ್ರುದ್ಧ ಮನಸು ಹಾಕಿತು ಶಾಪ 
ನೆನಪಿನ ಪುಟಕೆ ಕಿಡಿ ಸೋಕಿ
ಮಾಸಿದ ಚಿತ್ರವೀಗ ಕಪ್ಪು ಮಸಿ!
-ಶಫಿ

ಬಣ್ಣಗಳು ಕರಗಿ ಮಬ್ಬಾದ

ಅವಳ ಚಿತ್ರವೊಂದು

ನೆನಪಿನ ಪುಟದೊಳಗಿಂದ

ನನ್ನನು ಕಾಡುತ್ತಿತ್ತು

 

ಮೊದಲ ನೋಟದಲ್ಲೇ

ಅಚ್ಚೊತ್ತಿದ ಚಿತ್ರದ

ಭಾವಗಳು ಅಯೋಮಯವಾಗಿ

ಅವಳ ನಗು ಅಸ್ಪಷ್ಟವಾಗಿತ್ತು

 

ನಿನ್ನ ದಟ್ಟ ಹೆರಳ ವರ್ಣದ 

ವರ್ಣನೆ ನಾ ಮಾಡಲೇ?

ಬೆಂಡೋಲೆ ಕಳಿಸಿದ ಪ್ರೇಮದೋಲೆಯ

ನಿನ್ನ ಮುಂದೆಯೇ ಓದಲೇ?

ಬೊಗಸೆ ಕಣ್ಗಳ ಹಾದಿಯಿಂದ

ನಿನ್ನ ಕನಸ ಸೇರಲೇ?

ತುಟಿಯಂಚಲಿ ಬಂದ ನಗುವಿಗೆ

ಬಿದ್ದ ಕೆನ್ನೆ ಗುಳಿಯಲಿ ನಾ ಬೀಳಲೇ?

ವರ್ಣಹೀನ ಚಿತ್ತಾರದೊಂದಿಗೆ

ನನ್ನ ವರ್ಣರಂಜಿತ ಸಲ್ಲಾಪವು...

 

ನೋಡಿ ವರುಷಗಳು ಕಳೆದರೂ

ಮನದ ಪೇಚಾಟಕ್ಕೆ ಎಲ್ಲಿ ಕೊನೆ...

ಅವಳೊಮ್ಮೆ ಸಿಕ್ಕರೆ? ಒಮ್ಮೆ ನಕ್ಕರೆ?

ಮಾಸಿದ ಚಿತ್ರಕೆ 

ರಂಗಿನೋಕುಳಿ ಚೆಲ್ಲಿ ಹೋದರೆ...!!

 

"ಫೇಸ್ ಬುಕ್ಕಿನಲ್ಲಿ ಅವಳಿರಬಹುದು

ಹುಡುಕಿ ನೋಡೊಮ್ಮೆ"

ನನ್ನ ಪಾಡಿಗೆ ಕೊರಗಿದ  

ಗೆಳೆಯನ ಸಲಹೆ ಬಂತು.

ಕಣ್ಣಂಚಿಗೆ ಆಸೆಯ ನೀರನೆರಚಿ

ನಡೆಸಿದ ತಡರಾತ್ರಿಯ ತಡಕಾಟದಲ್ಲಿ

ಸಿಕ್ಕಿ ಬಿಟ್ಟಿತು ಅವಳ ಮುಖ!!


ಹುಡುಗನೊಬ್ಬನ ಕೆನ್ನೆಗೆ

ಗುಳಿಬಿದ್ದ ಕೆನ್ನೆ ಅಂಟಿಸಿ

ತನ್ನ ಕೈಯ್ಯಾರೆ ತಗೆದ ಚಿತ್ರಕೆ

"ನಾನೂ-ನನ್ನವನೂ" ಶೀರ್ಷಿಕೆ


"ಮುಖ ಪುಸ್ತಕ" ನಾಶವಾಗಲಿ,

ಕ್ರುದ್ಧ ಮನಸು ಹಾಕಿತು ಶಾಪ 

ನೆನಪಿನ ಪುಟಕೆ ಕಿಡಿ ಸೋಕಿ

ಮಾಸಿದ ಚಿತ್ರವೀಗ ಕಪ್ಪು ಮಸಿ!

  -ಶಫಿ

Rating
No votes yet

Comments