ನಿನ್ನೊಲಿಸಲು ಏನು ಮಾಡಲಿ ?

ನಿನ್ನೊಲಿಸಲು ಏನು ಮಾಡಲಿ ?

ಬರಹ
ಮನೆಯ ಕರೆಗಂಟೆ ಆರಿಸಿ ಫೋನ್ ರಿಸೀವರ್ ಕೆಳಗಿಟ್ಟು ಮೊಬೈಲ್ 'ಮೌನ'ಕ್ಕೆ ತಳ್ಳಿ ಸೊಳ್ಳೆ ಕೊಲ್ಲುವ ಯಂತ್ರ ಹಾಕಿ ನಳಗಳನ್ನೆಲ್ಲ ಸರಿ ತಿರುವಿ ಟೇಬಲ್ ತುದಿಗಿದ್ದ ವಸ್ತುಗಳ -ನೆಲ್ಲ ಅಲ್ಲೇ ಕೆಳಗಿಟ್ಟು ಕಿಟಕಿಗಳನು ಭದ್ರಮಾಡಿ ಮೆತ್ತನೆಯ ಹಾಸಿಗೆಯ ತಯಾರಿಸಿ ಧಪ್ಪದೊಂದು ರಜಾಯಿ ಹೊದ್ದು ಕಿರಣಗಳು ಇಣುಕದಿರಲೆಂದು ಪರದೆ ಮುಚ್ಚಿ ನಿದ್ರಿಸಿದರೂ ರವಿವಾರ ಸಹ ಆರಕ್ಕೇ ಎಚ್ಚರ :( ತಾಯೇ,ನಿದ್ರಾ ದೇವಿಯೇ ನನ್ನ ಮೇಲೇಕೆ ಈ ಕಠೋರ ಮುನಿಸು ? ಏನು ಮಾಡಲಿ ನಿನ್ನೊಲಿಸಲು ?