ಮಳೆ ಬರೆಯಿಸಿದ ಹನಿಗಳು.....

ಮಳೆ ಬರೆಯಿಸಿದ ಹನಿಗಳು.....

೧) ಬಿರಿದು ನಿಂತ ಭುವಿ ಬಾಯಾರಿಸಿಕೊಂಡು
ತಂಪಾಗಿದೆ..ನಕ್ಕಿದೆ...
ಅದೇ ಸೋನೆ ಮಳೆ ಜಿನುಗು ಎದೆಯಲ್ಲಿ
ಕಡ್ಡಿ ಗೀರಿ...ನಿನ್ನ ನೆನಪ ತಡಕಿದೆ...
ಮನ ಮಳೆಯಲ್ಲೂ ಅಳುತಿದೆ....!

೨) ಬಸವಳಿದ ಅವನಿಗೆ ಮಳೆಯ ಸ್ಪರ್ಶ
ಕೋಮಲ ಸಾಂತ್ವನ..ಪುಳಕ..
ಹರ್ಷ ಧಾರೆಯ...ಝಳಕ..
ಮಳೆಯ ಜೊತೆ ನಿನ್ನ ನೆನಪೂ ರಚ್ಚೆ
ಹಿಡಿಯಲೇಕೆ....ಇದಾರ ಕುಹಕ...?

೩) ಹಳೆ ಸಾಲ ತೀರಿಸಿದ ಮಳೆ..
ಈ ಭೂಮಿಯ ಮುಖಕೆಲ್ಲ ಕೆಸರು..ಹಸಿರು
ಹೊದ್ದು ಮೆದ್ದು ತೇಗಿ ತಂಪಾಗಿದೆ....
ನಿನ್ನ ನೆನಪು ಹಳೆಯದೇ....ಚಿಪ್ಪಲ್ಲಡಗಿತ್ತು..
ಮಳೆಯ ಸದ್ದಿಗೆ ಎದ್ದು ಕುಣಿದಾಡುತಿದೆ.....!

Rating
No votes yet

Comments