ನಾನು ನೋಡಿದ ಇನ್ನೂ ಒಂದು ಬ್ಲಾಗ್ - ಕವಿಸಮಯ

ನಾನು ನೋಡಿದ ಇನ್ನೂ ಒಂದು ಬ್ಲಾಗ್ - ಕವಿಸಮಯ

ಕಾಳನ್ನೆಲ್ಲವ ಪಡೆದು ಜಳ್ಳನ್ನೆಲ್ಲವ ತೂರಿಬಿಡಿ, ಇದು kavisamaya.blogspot.com ನ  ಶೀರ್ಷಿಕೆಯ ಅಡಿಬರಹ.

 

 

ಇಲ್ಲಿರುವ ಕೆಲವೇ ಬರಹಗಳು ಚೆನ್ನಾಗಿವೆ.  ಎರಡು ಐತಿಹಾಸಿಕ ಕತೆಗಳು , Life of Pi  ಪುಸ್ತಕದ ಓದಿನ ಅನುಭವ , ಒಂದು  ಪ್ರವಾಸ ಕಥನ , ಒಂದೆರಡು ಪ್ರಬಂಧ , ಹರಟೆಇಲ್ಲಿವೆ .  

 
ಇಲ್ಲಿಂದ  ಆಯ್ದ ಕೆಲವು ಕಾಳುಗಳು ನಿಮಗಾಗಿ ..


ಅಲ್ಲಿಯವರೆಗೆ ಎಲ್ಲ ಮಂತ್ರಗಳನ್ನು ಕಾಟಾಚಾರಕ್ಕೆಂಬಂತೆ ಉಚ್ಚರಿಸುತ್ತಿದ್ದವನು “ಧಿಯೋ ಯೋನಃ ಪ್ರಚೋದಯಾತ್” ಕೂಡಿರುವ ಗಾಯತ್ರಿ ಮಂತ್ರ ಉಚ್ಚರಿಸುವಾಗ , ಎಲ್ಲೆಲ್ಲೊ ಹರಿದಾಡುತ್ತಿದ್ದ ಮನಸ್ಸು ಒಂದೆಡೆ ಕೇಂದ್ರೀಕೃತವಾದಂತಾಯಿತು.ಜೀವನೋಪಾಯಕ್ಕೆ ಬುದ್ಧಿಯನ್ನು ಅವಲಂಬಿಸಿರುವುದರಿಂದಲೇನೋ, ಆ ಮಂತ್ರದ ಬಗ್ಗೆ ವಿಶೇಷ ಗೌರವವಿರುವುದು.
 
IST ಎಂಬುದಕ್ಕೆ “Indian Streachable Time” ಎಂಬ ವಿಸ್ತೀರ್ಣ , ತುಂಬಾ ಅರ್ಥಪೂರ್ಣವಾಗಿ ತೋರುತ್ತಿತ್ತು
 
ಮೈದಾನ ಹಾಗು ಸ್ಮಶಾನ ಎರಡೂ ಮನೆಯ ಎದುರು ಇರುವ ವಿಚಾರ ಗಮನಕ್ಕೆ ಬಂತು. ಸ್ಮಶಾನದಲ್ಲಿ ಮೃತದ ಸಂಭಂಧಿಕರ ಗೋಳಾಟ ಹಾಗು ಮೈದಾನದಲ್ಲಿ ಆಡುತ್ತಿರುವ ಹುಡುಗರ ನಗು, ಕೇಕೆಗಳನ್ನು ಒಟ್ಟಿಗೆ ಕೇಳಿ-ಕಾಣುವ ವಿಚಿತ್ರ ಪ್ರಸಂಗ ಆ ಮನೆಯಲ್ಲಿ ವಾಸಿಸುವವರಿಗೆ ಎದುರಾಗಬಹುದೆಂಬ ಯೋಚನೆ ಬಂದು ನಗು ಬಂತು.
 
ಮೊನ್ನೆ ಅನಿಮಲ್ ಪ್ಲಾನೆಟ್ ನಲ್ಲಿ ಕೊಕ್ಕರೆಗಳ ಬಗ್ಗೆ ಡಾಕ್ಯೂಮೆಂಟ್ರಿಯೊಂದನ್ನು ತೊರಿಸ್ತಿದ್ರು , ಜೋಡಿ ಕೊಕ್ಕರೆಗಳು ಜೀವನವಿಡಿ ಒಟ್ಟಿಗೆ ಇರುತ್ವಂತೆ, ಅವುಗಳ ಮಧ್ಯವಿರುವ ಅನುಬಂಧವನ್ನು ಗಟ್ಟಿಮಾಡಿಕೊಳ್ಳೋಕ್ಕೆ ಆಗಾಗ್ಗೆ ಕುಣಿಯುತ್ವಂತೆ.
 

ಇಂತಹ “ಪುಣ್ಯಕ್ಷೇತ್ರ”ಗಳಿಗೆ ಬರುವವರಲ್ಲಿ ಭಕ್ತರೂ, ಭಕ್ತಿ ಬಿಟ್ಟು ಬೇರೆ ಕಾರಣಗಳಿಗೆ ಬರುವ ಜನರನ್ನು ಸೇರಿರುವದರಿಂದಲೇನೋ “ಭಕ್ತಾದಿಗಳು” ಎಂಬ ಪದ ರೂಢಿಗೆ ಬಂದಿರುವುದು.
೨೦೦೬ ಇಸವಿ ವರ್ಷದ ನಂತರ ಇತ್ತೀಚೆಗೆ ತಾನೇ ಅಪ್ಡೇಟ್  ಆಗಿದೆ.
ನನಗೆ ತೋಚಿದಂತೆ ನಾನು ಕೊಡುವ ರೇಟಿಂಗ್ - ****

Rating
No votes yet

Comments