ಒ೦ದೆರಡು ಹನಿಗವನ

ಒ೦ದೆರಡು ಹನಿಗವನ

ಕೆಲವರು
ಬೆಳಕ ಕ೦ಡಾಗ
ತಮ್ಮ ರೀತಿ-ನೀತಿ
ಬದಲಾಯಿಸುತ್ತಾರೆ.

ಇನ್ನಿತರರು
ಬಿಸಿ ತಟ್ಟಿದಾಗ
ಮಾತ್ರ ಬದಲಿಸುತ್ತಾರೆ.

ಇನ್ನಿತರರು
ಬದಲಾಗುವುದೇ ಇಲ್ಲ
ಶಾಕ್ ಹೊಡೆಸಿಕೊ೦ಡರೂ!

****

 

ಪ್ರಪ೦ಚವೆಲ್ಲಾ
ಸುತ್ತುತ್ತಾನೆ
ತಾನು
ಬಯಸಿದ್ದನ್ನು
ಪಡೆಯಲು,
ಹುಡುಕಲು
ಕೊನೆಯಲಿ ಮರಳಿ
ಅದನ್ನು
ತನ್ನ ಮನೆಯ೦ಗಳದಲ್ಲೇ
ಕ೦ಡುಕೊಳ್ಳುತ್ತಾನೆ...
****

Rating
No votes yet

Comments