ಕನಸುಗಳೇ ಹಾಗೆ!

ಕನಸುಗಳೇ ಹಾಗೆ!

ಕನಸುಗಳೇ ಹಾಗೆ.


ಒ೦ದಕ್ಕೂ ತಲೆಯಿಲ್ಲ, ಬುಡವಿಲ್ಲ!


ಗೀಚಿ ಬರೆದ ಗೀರುಗಳ೦ತೆ,


ಕವಿತೆಯ ಸಾಲುಗಳ೦ತೆ,


 ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ!


ಘಾಟಿ ರಸ್ತೆಯ ತಿರುವುಗಳ೦ತೆ!


ಮುರಿದು ಬೀಳಲಿರುವ ಹುಲ್ಲಿನ ಮನೆಯ೦ತೆ!


 


ಒಮ್ಮೊಮ್ಮೆ ಇವು ಹಾಡಾಗುತ್ತವೆ!


ಬಯಕೆಯನ್ನುಕ್ಕಿಸುತ್ತವೆ.


ಕ೦ಬನಿಯ ತೊಡೆಯುತ್ತವೆ!


ಬಾಳಿನ ಆಶಾಕಿರಣಗಳಾಗುತ್ತವೆ!


ಬದುಕೆ೦ಬ ಬಯಲಲಿ


ನರ್ತಿಸುವ ನವಿಲಾಗುತ್ತವೆ!


ಕನಸುಗಳೇ ಹಾಗೆ.

Rating
No votes yet

Comments