ಹೊಯ್ ಇದು ಎಂತ್ ಅಂದೇಳಿ ಗೊತಿತ್ತಾ ಕಾಣಿ

ಹೊಯ್ ಇದು ಎಂತ್ ಅಂದೇಳಿ ಗೊತಿತ್ತಾ ಕಾಣಿ



ಹೊನ್ನಾವರದಿಂದ ಕುಮುಟಾಕ್ಕೆ ಹೋಗುವ ಹೈವೆ ಪಕ್ಕದಲ್ಲಿ ಈ ಚಿತ್ರದಲ್ಲಿರುವ ದೃಶ್ಯ ಕಾಣಸಿಗುತ್ತದೆ. ಸಣ್ಣ ಸಣ್ಣ ಕೆರೆಗಳು ಅದರ ಮದ್ಯೆ ತಿರುಗುವ ಚಕ್ರಗಳು. ಇದೇನಿರಬಹುದು ಎಂಬ ಕುತೂಹಲಕ್ಕೆ ನಮ್ಮಲೊಬ್ಬ "ಓ ಅದಾ,,,ಉಪ್ಪು ತೆಗೆಯುವ ಹೊಂಡಗಳು" ಎಂದ. "ಉಪ್ಪು ತೆಗೆವ ಹೊಂಡಕ್ಕೆ ಫ್ಯಾನ್ ಗಿರಿಗಿಟ್ಟಿ ಯಾಕೆ?. ಮತ್ತೊಬ್ಬನ ಪ್ರಶ್ನೆ. "ಅಯ್ಯೋ ಇದು ಕೆಂಪನೆಯ ಕಲ್ಲುಪ್ಪು ತೆಗವ ಜಾಗ ಅಲ್ಲ ಮಾರಾಯ, ಬಿಳಿಯ ಪುಡಿ ಉಪ್ಪು ತೆಗೆವ ಜಾಗ. ಅಕೋ ಅಲ್ಲಿ ಕಾಣುತ್ತಲ್ಲ ಅದೇ ಫಿಲ್ಟರ್ ಹೌಸ್, ಇದು ಸ್ಟಾರ್ ಉಪ್ಪು ಕಂಪನಿಯದು". ಹೀಗೆ ಮುಂದುವರೆದಿತ್ತು ಆತನ ವಿವರಣೆ. ನನಗಂತೂ ಅದು ಉಪ್ಪು ತೆಗೆವ ಕ್ರಿಯೆ ಅಲ್ಲ ಎಂಬ ಅನುಮಾನ, ಆದರೆ ಪರಿಹರಿಸಿಕೊಳ್ಳಲು ಜಾಗ ದಾಟಿ ಗೋಕರ್ಣದತ್ತ ಹೊರಟಾಗಿದೆ. ನೋಡೋಣ ವಾಪಾಸು ಬರುವಾಗ ಕಂಡರೆ ಆಯಿತು ಎಂದು ಸುಮ್ಮನುಳಿದೆ. ಗೋಕರ್ಣದಿಂದ ವಾಪಾಸು ಬರುವುದು ನಾಳೆಯಾಗುತ್ತದೆ. ಉತ್ತರಕ್ಕೆ ಅಷ್ಟರತನಕ ಕಾಯಲಾಗದಿದ್ದರೆ ಗೊತ್ತಿದ್ದವರು ಹೇಳಿ. ಇಲ್ಲದಿದ್ದರೆ ನಾನು ನಾಡಿದ್ದು ಹೇಳುತ್ತೇನೆ, ಇದು ಉಪ್ಪಿನ ಫ್ಯಾಕ್ಟರಿಯೋ ಅಲ್ಲವೋ ಅಂತ. ಅಲ್ಲಿವರೆಗೆ ಹ್ಯಾಪಿ ಡೆ.
Rating
No votes yet

Comments