ಹಸಿರು, ಬಿಳಿ, ಕೇಸರಿ
ನಮ್ಮ ಹೆಮ್ಮೆಯ ಧ್ವಜದ ವರ್ಣಗಳು ಕೇಸರಿ ಬಿಳಿ ಹಸಿರು. ಈ ವರ್ಣಗಳು ತನ್ನೊಡಲಲ್ಲಿ ಕಾಣುವಂತೆ ಇಟ್ಟುಕೊಂಡ ನೀಲಿ ಚಕ್ರ ನಮ್ಮ ಪ್ರಗತಿಗೆ ಸಾಕ್ಷಿ. ಹೀಗೆ ಕೇಸರಿ ಬಿಳಿ ಹಸಿರು ತಲೆಕೆಳಗಾಗಿ ಹಸಿರು ಬಿಳಿ ಕೇಸರಿಯಾದಾಗ ವರ್ಣಗಳು ಕಂಗೆಡದಿದ್ದರೂ ನಾವಂತೂ ಖಂಡಿತಾ ಒಂದು ಕ್ಷಣ ಗರ ಬಡಿ ದವರಂತೆ ನಿಂತು ಬಿಡುತ್ತೇವೆ ಲೆಕ್ಕಾಚಾರ ಹಾಕುತ್ತಾ ಇದು ಶತ್ರುವಿನ ಹುನ್ನಾರವೋ, ಕುಹಕವೋ ಅಥವಾ ಎಂದಿಗೂ ಆಗಬಾರದ ಪ್ರಮಾದವೋ ಎಂದು. ಮೊನ್ನೆ ನಮ್ಮ ಗೃಹ ಮಂತ್ರಿಗಳು ಪಾಕಿಸ್ತಾನಕ್ಕೆ ಹೋಗಿ ಬಂದರು. ನಮ್ಮ ಆಂತರಿಕ ವಿಷಯಗಳಲ್ಲಿ ತಲೆ ಹಾಕಬೇಡಿ, ನಮ್ಮ ಬೀದಿ, ಹೋಟೆಲ್, ರೈಲು ನಿಲ್ದಾಣಗಳಲ್ಲಿ ನೆತ್ತರ ಹರಿಸಬೇಡಿ ಎಂದು ಎಷ್ಟೇ ಕೂಗಿಕೊಂಡರೂ ಕೇಳಿಸದಂತೆ ನಟಿಸುವ ಪಾಕಿಗೆ ಅವರಿರುವ ಅಡ್ಡಾ ಕ್ಕೆ ಹೋಗಿ ಬುದ್ಧಿವಾದ ಹೇಳಲು ಚಿದಂಬರಮ್ ಸಾಹೇಬರು ಇಸ್ಲಾಮಾಬಾದ್ ತಲುಪಿದರು ಅಲ್ಲಿನ ಗೃಹ ಮಂತ್ರಿ ರೆಹಮಾನ್ ಮಲಿಕ್ ರೊಂದಿಗೆ ಮಾತುಕತೆಗೆಂದು. ಮಾತುಕತೆಗೆ ಕೂತ ಕೂಡಲೇ ಪತಾಕೆ ಉಲ್ಟಾ ಆದದ್ದನ್ನು ಗಮನಿಸಿದ ಚಿದಂಬರಮ್ ಅದನ್ನು ಸರಿಪಡಿಸಿದರು. ಆದರೆ ಮಾಧ್ಯಮಗಳ ಕಣ್ಣಿಗೆ ಅದಾಗಲೇ ಬಿದ್ದಾಗಿತ್ತು. ಮಾಧ್ಯಮಗಳಿಗೂ ಬೇಕಿದ್ದು ಇಂಥ ಎಡವಟ್ಟು ಗಳೇ. ಪಾಕ್ ಏನು ಮಾಡಿದರೂ ಸುದ್ದಿಯೇ. ಅದರಲ್ಲೂ ಭಾರತೀಯರು ಒಳಗೊಂಡ ಯಾವುದೇ ವಿಷಯಾದರೂ, ಭೇಟಿಯಾದರೂ ಹೆಚ್ಚು ಹೇಳುವುದು ಬೇಕಿಲ್ಲ. ಅಷ್ಟು ಚೆಂದ ನಮ್ಮೀರ್ವರ ಸಂಬಂಧ. ಮೂರು ದಶಕಗಳ ನಂತರ ಭಾರತದ ಗೃಹ ಮಂತ್ರಿ ಪಾಕ್ ನೆಲದ ಮೇಲೆ ಎಂದಾಗಲೇ ತಿಳಿಯುತ್ತದೆ ಸಂಬಂಧ ಎಷ್ಟು ತಿಳಿಯಾಗಿದೆ ಎಂದು. ಪಾಕ್ ಅದೇನು ಮಾಡಿದರೂ ತಪ್ಪೇ ಏಕಾಗುತ್ತದೆ ಎನ್ನುವುದೇ ಕಾಡುವ ಪ್ರಶ್ನೆ.
ಸರಿ ರಾಜಕೀಯ ಬದಿಗಿಟ್ಟು ಬಾವುಟಕ್ಕೆ ಬರೋಣ. ಬಾವುಟ ಲಾಗ ಹಾಕಿ ಉಲ್ಟಾ ಆಗುವ ಪರಿಸ್ಥಿತಿ ಇದೇ ಮೊದಲಲ್ಲ. ಶಿಕಾಗೋ ನಗರದ ಡೇಲಿ ಪ್ಲಾಜ ದಲ್ಲೂ ಒಮ್ಮೆ ಇದು ಸಂಭವಿಸಿತು.
೨೦೦೮ ರಲ್ಲಿ ಭಾರತ ಆಸ್ಟ್ರೇಲಿಯಾ ನಡುವಿನ ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆಯೂ ಇದೇ ತೆರನಾದ ಪ್ರಮಾದ.
ಭಯೋತ್ಪಾದನೆಯ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ತಾರೆ ಕಿಂ ಶರ್ಮಾ ಉಲ್ಟಾ ಆದ ಬಾವುಟದ ಚಿತ್ರ ತನ್ನ ಅಂಗಿ ಮೇಲೆ ಪ್ರದರ್ಶಿಸಿದ್ದರು.
ದಿಲ್ಲಿ ಪಬ್ಲಿಕ್ ಶಾಲೆಯಲ್ಲೂ ಇಂಥದ್ದೇ ಒಂದು ಘಟನೆ ನಡೆದು ಗಮನಕ್ಕೆ ತಂದವನ ಮೇಲೆಯೇ ಹರಿಹಾಯ್ದರು ಅಲ್ಲಿನ ಪ್ರಾಂಶುಪಾಲೆ. ನಿನ್ನಂಥ ದೇಶಭಕ್ತರನ್ನು ಬಹಳ ಕಂಡಿದ್ದೇನೆ ಎಂದು ತಮ್ಮ ಕಛೇರಿಯಿಂದ ಅಟ್ಟಿದರು ಬಡಪಾಯಿಯನ್ನು. ಆತ ಕೋರ್ಟು ಕಛೇರಿ ಎಂದು ಒಂದೆರಡು ದಿನ ಅಲೆದಾಡಿ ಸುಮ್ಮನಾದ.
ನನ್ನ ನೆನಪು ಸರಿಯಿದ್ದರೆ ೧೯೮೮ ರಲ್ಲಿ ಇಂಥದ್ದೇ ಒಂದು ಘಟನೆ ನಮ್ಮ ದೇಶದಲ್ಲೂ, ಅದರಲ್ಲೂ ಕರ್ನಾಟಕದಲ್ಲಿ. ನಮ್ಮ ಖಾದಿ ಪ್ರಭುಗಳು ಕೂರುವ, ರಾಜ್ಯದ ಹಿತಾಸಕ್ತಿಗೆಂದು ಪರಸ್ಪರ ಕಚ್ಚಾಡುವ ವಿಧಾನ ಸೌಧದ ಮೇಲೆ ಸ್ವಾತಂತ್ರ್ಯ ದಿನಾಚರಣೆ ದಿನ ಏರಿತು, ಹಾರಿತು ನೋಡು ನಮ್ಮ ಬಾವುಟ, ಅದೂ ತಲೆಕೆಳಗಾಗಿ. ತಮಾಷೆಯಲ್ಲ, ಸತ್ಯ ಘಟನೆ ಇದು. ಇದನ್ನು ಗಮನಿಸಿದ ಯಾರೋ ಒಬ್ಬರು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಫೋನಾಯಿಸಿ ನಿಮಗೊಂದು ಬಿಸಿ ಬಿಸಿ ಮಸಾಲೆ ದೋಸೆಯಂಥ ಸುದ್ದಿ ಇದೆ ಬನ್ನಿ ಕ್ಯಾಮರಾದೊಂದಿಗೆ ಎಂದು ಆಹ್ವಾನ ಕಳಿಸಿದರು. ದೌಡಾಯಿಸಿ ಬಂದ ಪತ್ರಕರ್ತನಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಪ್ರಭುಗಳು ಕೂರುವ ಸ್ಥಳದಲ್ಲಿ ಪ್ರಮಾದವೇ, ಹ ಹಾ ಎನ್ನುತ್ತ ಮನ ಬಂದಂತೆ ಕ್ಲಿಕ್ಕಿಸಿ ಹಾಕಿ ಬಿಟ್ಟ ಮಾರನೆ ದಿನದ ಪತ್ರಿಕೆಯ ಮುಖ ಪುಟದಲ್ಲಿ. ಅದರ ಕೆಳಗೆ ಒಂದು ಶೀರ್ಷಿಕೆ. ಇದು ನಮ್ಮ ಬಾವುಟವೇ, ಸಂಶಯ ಬೇಡ, ಸ್ವಲ್ಪ ಉಲ್ಟಾ ಆಗಿದೆ ಅಷ್ಟೇ ಎಂದು. ಸರಕಾರೀ ನೌಕರನ ಕಛೇರಿಯಲ್ಲಿ ಇಂಥದ್ದು ನಡೆದಿದ್ದರೆ ಸಂಬಂಧಿಸಿದವನನ್ನು ಎತ್ತಂಗಡಿ ಮಾಡಬಹುದಿತ್ತು, ಎತ್ತಂಗಡಿ ಮಾಡುವವನ ಕಛೇರಿಯಲ್ಲೇ ಇಂಥ ಘಟನೆ ನಡೆದರೆ ಏನು ಶಿಕ್ಷೆ? ಭಾರತ ಖಂಡದ ಚಕ್ರವರ್ತಿ ಅಕ್ಬರನ ಗಡ್ಡ ಎಳೆದವನಿಗೆ ಸಿಕ್ಕ ಶಿಕ್ಷೆಯೇ? ಬಾವುಟ ಹಾರಿಸುವ ಬಗ್ಗೆ ಹೀಗೆಂದು ನಮ್ಮ ನಿಯಮ. "the flag shall not be intentionally displayed with the 'saffron' down."
ಚಿತ್ರ ಕೃಪೆ: ಶಿಕಾಗೋ ಟ್ರಿಬ್ಯೂನ್ ಮತ್ತು "ಫ್ರೆಶ್ ನ್ಯೂಸ್" ವೆಬ್ ತಾಣ ದಿಂದ
Comments
ಉ: ಹಸಿರು, ಬಿಳಿ, ಕೇಸರಿ
ಉ: ಹಸಿರು, ಬಿಳಿ, ಕೇಸರಿ
ಉ: ಹಸಿರು, ಬಿಳಿ, ಕೇಸರಿ
In reply to ಉ: ಹಸಿರು, ಬಿಳಿ, ಕೇಸರಿ by mpneerkaje
ಉ: ಹಸಿರು, ಬಿಳಿ, ಕೇಸರಿ
In reply to ಉ: ಹಸಿರು, ಬಿಳಿ, ಕೇಸರಿ by mpneerkaje
ಉ: ಹಸಿರು, ಬಿಳಿ, ಕೇಸರಿ
In reply to ಉ: ಹಸಿರು, ಬಿಳಿ, ಕೇಸರಿ by abdul
ಉ: ಹಸಿರು, ಬಿಳಿ, ಕೇಸರಿ
In reply to ಉ: ಹಸಿರು, ಬಿಳಿ, ಕೇಸರಿ by bhasip
ಉ: ಹಸಿರು, ಬಿಳಿ, ಕೇಸರಿ
In reply to ಉ: ಹಸಿರು, ಬಿಳಿ, ಕೇಸರಿ by abdul
ಉ: ಹಸಿರು, ಬಿಳಿ, ಕೇಸರಿ
In reply to ಉ: ಹಸಿರು, ಬಿಳಿ, ಕೇಸರಿ by abdul
ಉ: ಹಸಿರು, ಬಿಳಿ, ಕೇಸರಿ
In reply to ಉ: ಹಸಿರು, ಬಿಳಿ, ಕೇಸರಿ by mannu
ಉ: ಹಸಿರು, ಬಿಳಿ, ಕೇಸರಿ
ಉ: ಹಸಿರು, ಬಿಳಿ, ಕೇಸರಿ