ಇವನೆಂತ ಗೆಳೆಯ? ಇವನು ಕಲಿಸಿದ ಪಾಠ ಎಂಥದು?
ಚಂದ್ರು ನನ್ನ ಜೀವದ ಗೆಳೆಯ. ನಾನು ನೋಡಿದ ಜನರ ಪೈಕಿ ಪರಿಪೂರ್ಣತೆಗೆ
ಅತ್ಯಂತ ಹತ್ತಿರವಿರುವ ವ್ಯಕ್ತಿ. ಇವನು ತೆಗೆದುಕೊಳ್ಳುವ ನಿರ್ದಾರಗಳೂ
ಬಹುತೇಕ ಸರಿಯಾಗಿರುತ್ತವೆ, ಸಲಹೆಗಳೂ ಸಹ! ಇವನ ಸಲಹೆ ಮತ್ತು ನಿರ್ಧಾರಗಳು
ಅತ್ಯಂತ practical ಆಗಿರುತ್ತವೆ. ಅಂದರೆ ನಿಜಜೀವನದಲ್ಲಿ
ಪಾಲಿಸಬಹುದಾದದ್ದನ್ನು! ಪ್ಲಾನಿಂಗ್ ಕಮೀಷನ್ನಿನಲ್ಲಿ ಇಂಥವರು ಇರಬೇಕು
ಅಂಥ ನನ್ನ ಅನಿಸಿಕೆ. ಭಾವನಾತ್ಮಕವಾಗಿ ನಿರ್ಧಾರಗಳಿಗೆ ಬರದೇ
ಪ್ರಾಯೊಗಿಕತೆಗೆ ಹೆಚ್ಚು ಮಹತ್ವ ಕೊಡುವ ಇಂಥವರು ಸರಿಯಾದ ಆಡಳಿತ
ನಡೆಸಬಲ್ಲರು!
ಇವನದೊಂದು ವಿಚಿತ್ರ ಚಾಳಿಯಿದೆ. ಗೆಳೆಯರು ಕಷ್ಟದ ವೇಳೆಯಲ್ಲಿ ಸಹಾಯ
ಕೇಳಿದಾಗ ಎಂದೂ ಇಲ್ಲ ಎಂದಿಲ್ಲ. ಎಂಥ ಕೆಲಸವಿದ್ದರೂ ಕೈಬಿಟ್ಟು
ಬರುತ್ತಾನೆ. ಈ ಸಮಯದಲ್ಲಿ ಕೆಲಸ,ಕಸುಬುಗಳು, ಸಂಸಾರಗಳು
ನೆನಪಾಗುವುದಿಲ್ಲ. ಇದರ ಬಗ್ಗೆ ಬಹಳ ಜನರು ಅವನಿಗೆ ಋಣಿಯಾಗಿದ್ದಾರೆ. ಅದೇ
ಗೆಳೆಯರು ಮದುವೆಗೆ ಕರೆದಾಗ, ಶುಭ ಸಮಾರಂಭಕ್ಕೆ, ಪೂಜೆ ಇತ್ಯಾದಿಗಳಿಗೆ
ಕರೆದಾಗ ಕಾರ್ಯ ನಡೆಯುವ ಮನೆಯಲ್ಲಿ "ಯಾವುದೇ ತೊಂದರೆ ಇಲ್ಲದಿದ್ದರೆ"
ಸರಿಯಾಗಿ ಊಟದ ಸಮಯಕ್ಕೆ ಬಂದು ಊಟ ಮಾಡಿ ಹೋಗುತ್ತನೆ. ಇಲ್ಲವೇ ಯಾವುದೋ
ಕೆಲಸದ ನೆವ ಹೇಳಿ ತಪ್ಪಿಸಿಕೊಳ್ಳುತ್ತಾನೆ. ಇವನಿಗೆ ಇಂಥಹ ವೇಳೆಗೆ
ಸರಿಯಾಗಿ ಹೇಗೆ ಕೆಲಸಗಳು ವಕ್ಕರಿಸುತ್ತವೋ ಗೊತ್ತಿಲ್ಲ. ಅನೇಕ ಬಾರಿ
ನಾನು ಇವನ ಮೇಲೆ ಸಿಟ್ಟಾದದ್ದಿದೆ.ಒಂದು ಶುಭ ಸಮಾರಂಭಕ್ಕೆ ಬರದ ಇವನೆಂಥ
ಗೆಳೆಯ? ಅನ್ನಿಸಿದ್ದಿದೆ. ಕಾರ್ಯಕ್ರಮಗಳಲ್ಲಿ ಜೊತೆಗೆ
ಓಡಾಡಿಕೊಂಡಿರಬಾರದೇ ಎನ್ನಿಸಿದ್ದಿದೆ! ಇದಕ್ಕೆಲ್ಲಾ ಚಂದ್ರು ಡೋಂಟ್
ಕೇರ್!
ಇತ್ತೀಚೆಗೆ ನನಗೂ ಕಸುಬಿನ ಒತ್ತಡ ಹೆಚ್ಚು. ಹೊತ್ತಗೆ ಓದುವ ಅಭ್ಯಾಸವೂ
ಕಡಿಮೆಯಾಗಿದೆ. ಕುಟುಂಬದವರಿಗೂ ವೇಳೆ ಕೊಡಲಾಗುತ್ತಿಲ್ಲ! ಹಾಗಂಥ
ಗೆಳೆಯರನ್ನು, ಬಂಧುಗಳನ್ನು ಬಿಡಲಾಗುವುದಿಲ್ಲ.ಹಾಗಾಗಿ ವೇಳೆಯನ್ನು
ನಿಭಾಯಿಸಲು ಮತ್ತು ಕಸುಬನ್ನು ತೂಗಿಸಲು ನಾನು ಇತ್ತೀಚೆಗೆ ಒಂದು
ನಿರ್ಧಾರ ಕೈಗೊಂಡೆ!
ನಿರ್ಧಾರ:- ಇನ್ನು ಮುಂದೆ ಮದುವೆ ಇತ್ಯಾದಿ ಶುಭ ಸಮಾರಂಭಗಳಿಗೆ
ಹೋಗುವುದಿಲ್ಲ. ಪೂಜೆ ವ್ರತ ಇತ್ಯಾದಿಗಳಿಗೆ ಪುಲಿಸ್ಟಾಪು. ಗೆಳೆಯರಿಗೆ
ನನ್ನಿಂದ ಏನಾದರೂ ಸಹಾಯವಾಗುವುದಾದರೆ ಮಾತ್ರ ಹೊರಡುವುದು. ಸಂತೋಷ
ಹಂಚಿಕೊಳ್ಳಲು ನೂರಾರು ಜನ ಇರುತ್ತಾರೆ. ಕಷ್ಟಗಳಿಗೆ ಕೆಲವರು ಮಾತ್ರ! ಅವರ
ಸಹಾಯಕ್ಕಾಗಿ ಕಳೆದ ವೇಳೆಯನ್ನು ಅವರದೇ ಸಂತಸದ ಕಾರ್ಯಕ್ರಮಕ್ಕೆ
ಹೋಗದಿರುವ ಮೂಲಕ ಸರಿದೂಗಿಸಿದರಾಯಿತು. ಇದು practically implementable!
ಉದಾಹರಣೆಗೆ.. ಗೆಳೆಯನೊಬ್ಬನ ತಂಗಿಗೆ ಒಳ್ಳೆಯ ವರ ಗೊತ್ತಾಯಿತು. ವರನ
ಹುಡುಕಾಟ, ನಡುವೆ ಓಡಾಟಕ್ಕೆ, ಮಾತುಕತೆಗೆ ಕೊಂಚ ವೇಳೆ ಕಳೆಯಿತು. ನನ್ನ
ಹೊಟ್ಟೆಪಾಡಿನ ಕಸುಬು ಇಲ್ಲಿ ಕೊಂಚ ಹಿಂದುಳಿಯಿತು. ಮದುವೆಗೆ ಗೈರಾದೆ.
ಕಸುಬು ಸರಿದೂಗಿತು.
ಗೆಳೆತಿಯೊಬ್ಬಳು ರನ್ನಿಂಗ್ ರೇಸಿನಲ್ಲಿ ಮದುವೆಯಾದಳು. ( ಡಿಸೆಂಟ್
ಶಬ್ದಕೋಶ: ರನ್ನಿಂಗ್ ರೇಸ್ ಮದುವೆ = ಅಪ್ಪ ಅಮ್ಮನ ಒಪ್ಪಿಗೆಯಿಲ್ಲದೇ
ಮದುವೆಯಾಗುವುದು. ಸಮಾಜ ಹೇಳುವಂತೆ "ಓಡಿಹೋಗಿ ಮದುವೆಯಾಗುವುದು" ಎಂದರೆ
ಅಸಹ್ಯವೆನಿಸುತ್ತೆ ನೋಡಿ!) ಸಾಕಷ್ಟು ತೊಂದರೆಗಳಿದ್ದ ಮದುವೆಗೆ
ಹೋಗಿದ್ದಾಯಿತು. ಧಾರೆ ಎರೆದದ್ದಾಯಿತು. ಮಗುವಿನ ನಾಮಕರಣಕ್ಕೆ
ಆಬ್ಸೆಂಟು!
ಇಬ್ಬರೂ ಸಿಟ್ಟಾದರು.. ಆದರೇನಂತೆ ಯಾವತ್ತೋ ಸಿಕ್ಕಾಗ ಕ್ಷಮೆ ಕೇಳಿ
ಜೊತೆಗೆ ಕಾಫಿ ಕುಡಿದರಾಯಿತು...
ಹೆಂಗನಿಸ್ತು ಐಡೀರಿಯಾ???
ಸಲಹೆಗಳು ಬರಲಿ!
Comments
ಉ: ಇವನೆಂತ ಗೆಳೆಯ? ಇವನು ಕಲಿಸಿದ ಪಾಠ ಎಂಥದು?
In reply to ಉ: ಇವನೆಂತ ಗೆಳೆಯ? ಇವನು ಕಲಿಸಿದ ಪಾಠ ಎಂಥದು? by Shrikantkalkoti
ಉ: ಇವನೆಂತ ಗೆಳೆಯ? ಇವನು ಕಲಿಸಿದ ಪಾಠ ಎಂಥದು?
In reply to ಉ: ಇವನೆಂತ ಗೆಳೆಯ? ಇವನು ಕಲಿಸಿದ ಪಾಠ ಎಂಥದು? by Shrikantkalkoti
ಉ: ಇವನೆಂತ ಗೆಳೆಯ? ಇವನು ಕಲಿಸಿದ ಪಾಠ ಎಂಥದು?
ಉ: ಇವನೆಂತ ಗೆಳೆಯ? ಇವನು ಕಲಿಸಿದ ಪಾಠ ಎಂಥದು?
ಉ: ಇವನೆಂತ ಗೆಳೆಯ? ಇವನು ಕಲಿಸಿದ ಪಾಠ ಎಂಥದು?
ಉ: ಇವನೆಂತ ಗೆಳೆಯ? ಇವನು ಕಲಿಸಿದ ಪಾಠ ಎಂಥದು?