ಜನರನ್ನ ತಲುಪಬೇಕು ಅಂದ್ರೆ ಜಾಹೀರಾತು ಯಾವ ಭಾಷೇಲಿ ಇರ್ಬೇಕು?
ಬ್ಲೂಂಬರ್ಗ್ - ಯುಟೀವಿ ಅಂತ ಒಂದು ೨೪ ಘಂಟೆ ಇಂಗ್ಲೀಶ್ ಬಿಸಿನೆಸ್ ನ್ಯೂಸ್ ಚಾನಲ್ ಇದೆ. ಇವರ ಜಾಹೀರಾತು ಹೋರ್ಡಿಂಗ್‍ಗಳಲ್ಲಿ ಒಂದು ಸಖತ್ ಅಂಶ ಕಂಡುಬಂತು. "Business should be simple and not Greek". ಹೌದು !! ಬಿಸಿನೆಸ್ ಅಂದರೆ ಸರಳವಾಗಿರಬೇಕು, ಜನರಿಗೆ ಅರ್ಥವಾಗದ ಯಾವುದೋ ಭಾಷೇಲಿ ಇರಬಾರ್ದು. ಬಿಸಿನೆಸ್‍ಗಳು ಜನರನ್ನು ಮುಟ್ಟಬೇಕು ಅಂದ್ರೆ ಜನರಿಗೆ ಅರ್ಥವಾಗೋ ಭಾಷೇಲೇ ಇರಬೇಕು.
ಜನರನ್ನು ಬೇಗ ಮುಟ್ಟಬೇಕು ಅಂದ್ರೆ ಜನರಿಗೆ ಹತ್ತಿರವಾದ ಭಾಷೆ ಬಳಸಬೇಕು. ಈಗ ಜನರಿಗೆ ಹತ್ತಿರವಾದ ಭಾಷೆ ಯಾವುದು ಅಂತ ನೋಡೋಣ. ನಮ್ಮ ದೇಶದಲ್ಲಿ ಇಂಗ್ಲೀಶ್ ಚೆನ್ನಾಗಿ ಬಲ್ಲವರು ಕೇವಲ ೭% ಮಾತ್ರ ಅಂತ ಈ ವರದಿ ಹೇಳುತ್ತೆ (http://www.dnaindia.com/money/report_google-takes-on-the-language-barrier_1205265-all). ಮಿಕ್ಕ ೯೩% ಜನರಿಗೆ ಇಂಗ್ಲೀಷೂ ಒಂದೇ ಗ್ರೀಕೂ ಒಂದೇ !
ಹೀಗಿರುವಾಗ ಇಂಗ್ಲೀಷ್‍ನಲ್ಲಿ ಜಾಹೀರಾತು ಮಾಡಿದರೆ ಅದು ಕೇವಲ ೭% ಜನರನ್ನ ಮಾತ್ರ ಮುಟ್ಟಬಲ್ಲದು. ಅದರ ಬದಲು ಜನರ ಭಾಷೆಯನ್ನು ಬಳಸಿದರೆ ಇನ್ನೂ ಹೆಚ್ಚು ಜನರನ್ನು ತಲುಪಬಹುದು. ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು, ಬಿಹಾರಿನಲ್ಲಿ ಹಿಂದಿ ಹೀಗೆ ಆಯಾ ಜಾಗಕ್ಕೆ ತಕ್ಕಂತೆ ಅಲ್ಲಿನ ಜನರ ಭಾಷೆ ಬಳಸಬೇಕು. ಇದನ್ನು ಅರಿತು ಜನರ ಭಾಷೆ ಬಳಸ್ಕೊಂಡ್ರೆ ಹೆಚ್ಚು ಜನರನ್ನು ತಲುಪಿ ಹೆಚ್ಚು ಲಾಭ ಮಾಡಬಹುದು ಅಲ್ವಾ? ಏನಂತೀರ?