ಯುಗ - ಕಾಲಮಾಪನದ ಬಗೆ!

ಯುಗ - ಕಾಲಮಾಪನದ ಬಗೆ!

ಬರಹ

ಯುಗ = ಎರಡು, ಒಂದು ಜೊತೆ , ನೊಗ, ಗಾಡಿಯ(ಬಂಡಿಯ) ಮಧ್ಯದ ಉದ್ದದ ಮರ, ಕೃತಾದಿ ನಾಲ್ಕು ಯುಗಗಳು ಇತ್ಯಾದಿ ಅರ್ಥಗಳಿವೆ.
ವೇದಾಂಗ ಜ್ಯೋತಿಷದಲ್ಲಿ ಯುಗ ಎಂದರೆ ಜೋಡಿ, ಅಂದರೆ ಧನಿಷ್ಠಾ ನಕ್ಷತ್ರದಲ್ಲಿ ಸೂರ್ಯ ಚಂದ್ರರು ಜೊತೆಯಾಗುವುದು. ಇದು ಐದು ವರ್ಷಕ್ಕೊಮ್ಮೆ ಸಂಭವಿಸುವುದರಿಂದ ಈ ಕಾಲಾವಧಿ ಯುಗವೆಂದಾಯ್ತು. 
೩ ಋತುಗಳ ವರ್ಷ! 
ವೈದಿಕ ಪರಂಪರೆಯಲ್ಲಿ ಕಾಲಗಣನೆಯಲ್ಲಿ ಅನೇಕ ಮಾನವಿದ್ದು (ಯಜ್ಞದ) ಉದ್ದೇಶಕ್ಕೆ ಅನುಸಾರವಾಗಿ ಇವುಗಳ ಬಳಕೆಯಾಗಿದೆ.
ಉದಾಹರಣೆಗೆ, ಋತುಗಳು ಐದೆಂದೂ (ಪಂಚ ವಾ ಋತವಃಸಂವತ್ಸರಃ, - ಯಜುರ್ವೇದ ಬ್ರಾಹ್ಮಣ) {ದ್ವಾದಶಮಾಸಾಃಪಂಚರ್ತವಃ , ಹೇಮಂತ ಶಿಶಿರಯೋಸ್ಸಮಾಸೇನ}
 (ಹೇಮಂತ ಶಿಶಿರಗಳಲ್ಲಿ ಗೃಹ್ಯಯಜ್ಞಕ್ಕೆ ಸಂಬಂಧಿಸಿದ ಅನ್ವಷ್ಟಕ ಎಂಬ ವಿಶೇಷ ತಿಥಿಗಳು ಬರುವುದರಿಂದ ಅವುಗಳನ್ನು ಒಂದೇ ಋತು ಎಂದಿದ್ದಾರೆ.)
ಗರ್ಗ ಋಷಿಯ ಪ್ರಕಾರ ೩ ಋತುಗಳು-ಗರ್ಗಸಂಹಿತೆ (ಶತಪಥ ಬ್ರಾಹ್ಮಣದಲ್ಲಿ ಕೂಡಾ ೩ ಋತುಗಳು೩.೪.೪.೧೭) ವೇದಾಂಗ ಜ್ಯೋತಿಷದ ಪ್ರಕಾರ ೬ ಋತು,
ಹೀಗೆ ಒಂದೇ ಶಬ್ದ ಬೇರೆ ಬೇರೆ ಅವಧಿಯ ಮಾನಕ್ಕೆ ಹೆಸರಾಗಿದೆ. ಆದ್ದರಿಂದ ಯುಗ ಶಬ್ದಕ್ಕೂ ಬೇರೆಬೇರೆ ಮಾನ ವಾಗಿ ಸಂಜ್ಞೆ ಇದ್ದಿರಬಹುದು.
ಇಲ್ಲಿ ಐದು ವರ್ಷದಕಾಲಾವಧಿ ಯಜ್ಞವಿಶೇಷವೊಂದರ ಆಚರಣೆಗಾಗಿ ಬಳಕೆಯಾಗಿದೆ.
(ವಸಂತೇ ಜ್ಯೋತಿಷ್ಟೋಮೇನ ಯಜೇತ| ವಾಜಪೇಯೇನ ಗ್ರೀಷ್ಮ ಇತಿ| ಪಂಚಶಾರದೀಯೋ ವಾ ಏಷ ಯಜ್ಞಃ| )
ವೇದಗಳಲ್ಲಿ ಈ ಐದು ವರ್ಷಗಳಿಗೆ ಈ ರೀತಿ ಸಂಜ್ಞೆ ಇದೆ-
(ಸಂವತ್ಸರೋಸಿ ಪರಿವತ್ಸರೋಸೀದಾವತ್ಸರೋಸೀದ್ವತ್ಸರೋಸಿ ವತ್ಸರೋಸಿ - ತೈತ್ತಿರೀಯ ಸಂಹಿತಾ ೩.೧೦.೪)
ಮೊದಲನೆಯ ಸಂವತ್ಸರದಲ್ಲಿ (ಯುಗಾರಂಭ) ಮಾಘ ಶುದ್ಧ ಪ್ರತಿಪತ್ ಧನಿಷ್ಠಾ ನಕ್ಷತ್ರದಲ್ಲಿ  ಸೂರ್ಯಚಂದ್ರರಿರುವಾಗ.
ಎರಡನೆಯ ಪರಿವತ್ಸರ ಮಾಘ ಶುದ್ಧ ತ್ರಯೋದಶಿ  ಧನಿಷ್ಠಾದಲ್ಲಿ ಸೂರ್ಯ, ಚಂದ್ರ ಆರ್ದ್ರಾದಲ್ಲಿರುವಾಗ.
ಮೂರನೆಯ ಇದಾ(ಡಾ) ವತ್ಸರದಲ್ಲಿ ಮಾಘ ಬಹುಳ ದಶಮಿ ಸೂರ್ಯ ಧನಿಷ್ಠಾ, ಚಂದ್ರ ಅನೂರಾಧಾದಲ್ಲಿರುವಾಗ.
ನಾಲ್ಕನೆಯಇದ್ವತ್ಸರದಲ್ಲಿ ಮಾಘ ಶುದ್ಧ ಸಪ್ತಮಿ ಸೂರ್ಯ ಧನಿಷ್ಠಾ, ಚಂದ್ರ  ಅಶ್ವಿನೀ.
ಐದನೆಯ  (ಅನು) ವತ್ಸರದಲ್ಲಿ ಮಾಘ ಬಹುಳ ಚೌತಿ ಸೂರ್ಯ ಧನಿಷ್ಠಾ, ಚಂದ್ರ  ಉತ್ತರಾ ನಕ್ಷತ್ರದಲ್ಲಿರುವಾಗ. (ಯುಗಾಂತ್ಯ)
೬ನೇ ವರ್ಷ ಪುನಃ ಸೂರ್ಯ ಚಂದ್ರರು ಧನಿಷ್ಠಾ ನಕ್ಷತ್ರದಲ್ಲಿ ಒಟ್ಟಾಗಿ ಯುಗಾರಂಭವಾಗುವುದು.
ಪ್ರಭವಾದಿ ವರ್ಷಗಳಲ್ಲಿ ಸಂವತ್ಸರಾದಿ ವರ್ಷಗಳಿದ್ದು ಈ ವರ್ಷ (ವಿಕೃತಿ) ಇದ್ವತ್ಸರವಾಗಿದೆ.
ಅಂದರೆ ಈ ವರ್ಷ ಮಾಘ ಶುದ್ಧ ಸಪ್ತಮಿ ಸೂರ್ಯ ಧನಿಷ್ಠಾದಲ್ಲಿಯೂ, ಚಂದ್ರ  ಅಶ್ವಿನೀ ನಕ್ಷತ್ರದಲ್ಲಿಯು ಇರುವುದನ್ನು ಗಮನಿಸಬಹುದು.
ಇಷ್ಟು ಗಮನಿಸುವಿಕೆಯಲ್ಲಿ ಪ್ರಧಾನ ಅಂಶವೆಂದರೆ ವೇದಾಂಗ ಜ್ಯೋತಿಷದ ಈ ಯುಗಕ್ಕೆ  ಕೃತ ತ್ರೇತಾದಿ ಸಂಜ್ಞೆ ಇಲ್ಲದಿರುವುದು.
ಆ ಯುಗವೇ ಬೇರೆ, ಕೃತ ತ್ರೇತಾದಿ ಪ್ರಚಲಿತ ಯುಗಗಳೇ ಬೇರೆ.
೧೨ ಮುಖ್ಯ ಉಪನಿಷತ್ತುಗಳಲ್ಲೊಂದಾದ ಮಹಾನಾರಾಯಣೋಪನಿಷತ್ತು ಪರಾಂತ ಕಾಲ ಎಂಬುದನ್ನು ಉಲ್ಲೇಖಿಸಿದೆ.
 
ಕೃತ ತ್ರೇತಾದಿ ಪ್ರಚಲಿತ ಯುಗಗಳ ಮೊದಲ ಉಲ್ಲೇಖ (ಈಗ ನಮಗೆ ಸಿಕ್ಕಿರುವ) ಇರುವುದು ಸೂರ್ಯ ಸಿದ್ಧಾಂತದಲ್ಲಿ. 
ಸೂರ್ಯ ಸಿದ್ಧಾಂತದ ಕಾಲ ಸ್ಪಷ್ಟವಾಗಿಲ್ಲ, ಆದರೆ ವರಾಹಮಿಹಿರರು ಇದನ್ನು ಉಲ್ಲೇಖಿಸುವುದರಿಂದ (ಕ್ರಿಶ ೪೮೮-೫೮೭) ಅದಕ್ಕಿಂತ ಬಹಳ ಹಿಂದಿನದೇ ಸರಿ.
ಸಾಂಪ್ರದಾಯಿಕರು ಸೂರ್ಯ ಸಿದ್ಧಾಂತವನ್ನು  ಆರ್ಷವೆಂಬುದಾಗಿ ಪರಿಗಣಿಸುತ್ತಾರೆ. ಪುರಾಣಾದಿಗಳನ್ನು ತಿರಸ್ಕರಿಸಿದ ದಯಾನಂದ ಸರಸ್ವತಿಯವರು ಕಾಲಗಣನೆಯ ಈ ಪದ್ಧತಿಯನ್ನು ಒಪ್ಪಿದ್ದಾರೆ ಮತ್ತು
ಆರ್ಷವೆಂಬುದಾಗಿ ಪರಿಗ್ರಹಿಸಿ ಇದನ್ನೇ ಅನುಸರಿಸಿದ್ದಾರೆ.
ವೇದಾಂಗ ಜ್ಯೋತಿಷದಕಾಲ ಕ್ರಿಪೂ ೧೪೦೦ . ಇದು ಲಗಧ ಮುನಿ ಪ್ರಣೀತವಾಗಿದ್ದು ಲಗಧಸ್ಯ ಮಹಾತ್ಮನಃ ಎಂದು ಗ್ರಂಥದಲ್ಲಿರುವುದರಿಂದ (ಮೌಖಿಕ ಪರಂಪರೆಯನಂತರ, ಬರವಣಿಗೆ ಶುರುವಾದ ಮೇಲೆ) ಲಗಧನ ಶಿಷ್ಯ ಪರಂಪರೆಯವರು ಬರೆದಿರಬೇಕೆಂದು(ಶುಚಿ) ಊಹಿಸಲಾಗಿದೆ.
ಬ್ರಹ್ಮಗುಪ್ತನ ಪ್ರಕಾರ(ಕ್ರಿಶ೬೨೮) ಸಂಹಿತೆಗಳಲ್ಲಿ ಯಜ್ಞದ ಉದ್ದೇಶಕ್ಕಾಗಿ ಮಧ್ಯಮ ಮಾನದಲ್ಲಿ ಐದು ವರ್ಷದ ಯುಗವನ್ನು ಹೇಳಿದ್ದಾರೆ .
(ಯುಗಮಾಹುಃ ಪಂಚಾಬ್ಧಂ ರವಿಶಶಿನೋಃ ಸಂಹಿತಾಂಗಕರಾಯೇ)
ಈ ಐದು ವರ್ಷಗಳ ಯುಗ ವೇದಾಂಗ ಜ್ಯೋತಿಷದ ನಂತರ  (ಕಾಲಮಾಪಕವಾಗಿ) ಬೇರೆ ಯಾವ ಗ್ರಂಥಗಳಲ್ಲಿ ಉಲ್ಲೇಖವಾಗಿದೆಯೋ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ.
ಸೂರ್ಯ ಸಿದ್ಧಾಂತಾದಿ  ಗ್ರಂಥಗಳಲ್ಲಿರುವುದರಿಂದ ಕೃತಾದಿ ಯುಗಗಳು ಕೇವಲ ಪೌರಾಣಿಕ ಮಾತ್ರವಲ್ಲ ಆರ್ಷವೂ ಹೌದು.

ಯುಗ = ಎರಡು, ಒಂದು ಜೊತೆ , ನೊಗ, ಗಾಡಿಯ(ಬಂಡಿಯ) ಮಧ್ಯದ ಉದ್ದದ ಮರ, ಕೃತಾದಿ ನಾಲ್ಕು ಯುಗಗಳು ಇತ್ಯಾದಿ ಅರ್ಥಗಳಿವೆ.ವೇದಾಂಗ ಜ್ಯೋತಿಷದಲ್ಲಿ ಯುಗ ಎಂದರೆ ಜೋಡಿ, ಅಂದರೆ ಧನಿಷ್ಠಾ ನಕ್ಷತ್ರದಲ್ಲಿ ಸೂರ್ಯ ಚಂದ್ರರು ಜೊತೆಯಾಗುವುದು.  ಈ ಕಾಲಾವಧಿ ಯುಗವೆಂದಾಯ್ತು. 
೩ ಋತುಗಳ ವರ್ಷ! 
ವೈದಿಕ ಪರಂಪರೆಯಲ್ಲಿ ಕಾಲಗಣನೆಯಲ್ಲಿ ಅನೇಕ ಮಾನವಿದ್ದು (ಯಜ್ಞದ) ಉದ್ದೇಶಕ್ಕೆ ಅನುಸಾರವಾಗಿ ಇವುಗಳ ಬಳಕೆಯಾಗಿದೆ.ಉದಾಹರಣೆಗೆ, ಋತುಗಳು ಐದೆಂದೂ

(ಪಂಚ ವಾ ಋತವಃಸಂವತ್ಸರಃ, - ಋಗ್ವೇದೀಯ ಐತರೇಯ ಬ್ರಾಹ್ಮಣ) {ದ್ವಾದಶಮಾಸಾಃಪಂಚರ್ತವಃ , ಹೇಮಂತ ಶಿಶಿರಯೋಸ್ಸಮಾಸೇನ}

 (ಹೇಮಂತ ಶಿಶಿರಗಳಲ್ಲಿ ಗೃಹ್ಯಯಜ್ಞಕ್ಕೆ ಸಂಬಂಧಿಸಿದ ಅನ್ವಷ್ಟಕ ಎಂಬ ವಿಶೇಷ ತಿಥಿಗಳು ಬರುವುದರಿಂದ ಅವುಗಳನ್ನು ಒಂದೇ ಋತು ಎಂದಿದ್ದಾರೆ.

(ಗರ್ಗ ಋಷಿಯ ಪ್ರಕಾರ ೩ ಋತುಗಳು-ಗರ್ಗಸಂಹಿತೆ (ಶತಪಥ ಬ್ರಾಹ್ಮಣದಲ್ಲಿ ಕೂಡಾ ೩ ಋತುಗಳು೩.೪.೪.೧೭)

ವೇದಾಂಗ ಜ್ಯೋತಿಷದ ಪ್ರಕಾರ ೬ ಋತು,ಹೀಗೆ ಒಂದೇ ಶಬ್ದ ಬೇರೆ ಬೇರೆ ಅವಧಿಯ ಮಾನಕ್ಕೆ ಹೆಸರಾಗಿದೆ. ಆದ್ದರಿಂದ ಯುಗ ಶಬ್ದಕ್ಕೂ ಬೇರೆಬೇರೆ ಮಾನ ವಾಗಿ ಸಂಜ್ಞೆ ಇದ್ದಿರಬಹುದು.
ಇಲ್ಲಿ ಐದು ವರ್ಷದಕಾಲಾವಧಿ ಯಜ್ಞವಿಶೇಷವೊಂದರ ಆಚರಣೆಗಾಗಿ ಬಳಕೆಯಾಗಿದೆ.

(ವಸಂತೇ ಜ್ಯೋತಿಷ್ಟೋಮೇನ ಯಜೇತ| ವಾಜಪೇಯೇನ ಗ್ರೀಷ್ಮ ಇತಿ| ಪಂಚಶಾರದೀಯೋ ವಾ ಏಷ ಯಜ್ಞಃ| )
ವೇದಗಳಲ್ಲಿ ಈ ಐದು ವರ್ಷಗಳಿಗೆ ಈ ರೀತಿ ಸಂಜ್ಞೆ ಇದೆ-
(ಸಂವತ್ಸರೋಸಿ ಪರಿವತ್ಸರೋಸೀದಾವತ್ಸರೋಸೀದ್ವತ್ಸರೋಸಿ ವತ್ಸರೋಸಿ - ತೈತ್ತಿರೀಯ ಸಂಹಿತಾ ೩.೧೦.೪)

ಮೊದಲನೆಯ ಸಂವತ್ಸರದಲ್ಲಿ (ಯುಗಾರಂಭ) ಮಾಘ ಶುದ್ಧ ಪ್ರತಿಪತ್ ಧನಿಷ್ಠಾ ನಕ್ಷತ್ರದಲ್ಲಿ  ಸೂರ್ಯಚಂದ್ರರಿರುವಾಗ.
ಎರಡನೆಯ ಪರಿವತ್ಸರ ಮಾಘ ಶುದ್ಧ ತ್ರಯೋದಶಿ  ಧನಿಷ್ಠಾದಲ್ಲಿ ಸೂರ್ಯ, ಚಂದ್ರ ಆರ್ದ್ರಾದಲ್ಲಿರುವಾಗ.
ಮೂರನೆಯ ಇದಾ(ಡಾ) ವತ್ಸರದಲ್ಲಿ ಮಾಘ ಬಹುಳ ದಶಮಿ ಸೂರ್ಯ ಧನಿಷ್ಠಾ, ಚಂದ್ರ ಅನೂರಾಧಾದಲ್ಲಿರುವಾಗ.
ನಾಲ್ಕನೆಯಇದ್ವತ್ಸರದಲ್ಲಿ ಮಾಘ ಶುದ್ಧ ಸಪ್ತಮಿ ಸೂರ್ಯ ಧನಿಷ್ಠಾ, ಚಂದ್ರ  ಅಶ್ವಿನೀ.
ಐದನೆಯ  (ಅನು) ವತ್ಸರದಲ್ಲಿ ಮಾಘ ಬಹುಳ ಚೌತಿ ಸೂರ್ಯ ಧನಿಷ್ಠಾ, ಚಂದ್ರ  ಉತ್ತರಾ ನಕ್ಷತ್ರದಲ್ಲಿರುವಾಗ. (ಯುಗಾಂತ್ಯ)
೬ನೇ ವರ್ಷ ಪುನಃ ಸೂರ್ಯ ಚಂದ್ರರು ಧನಿಷ್ಠಾ ನಕ್ಷತ್ರದಲ್ಲಿ - ಯುಗಾರಂಭವಾಗುವುದು.
ಪ್ರಭವಾದಿ ವರ್ಷಗಳಲ್ಲಿ ಸಂವತ್ಸರಾದಿ ವರ್ಷಗಳಿದ್ದು ಈ ವರ್ಷ (ವಿಕೃತಿ) ಇದ್ವತ್ಸರವಾಗಿದೆ.
ಅಂದರೆ ಈ ವರ್ಷ ಮಾಘ ಶುದ್ಧ ಸಪ್ತಮಿ ಸೂರ್ಯ ಧನಿಷ್ಠಾದಲ್ಲಿಯೂ, ಚಂದ್ರ  ಅಶ್ವಿನೀ ನಕ್ಷತ್ರದಲ್ಲಿಯು ಇರುವುದನ್ನು ಗಮನಿಸಬಹುದು.
ಇಷ್ಟು ಗಮನಿಸುವಿಕೆಯಲ್ಲಿ ಪ್ರಧಾನ ಅಂಶವೆಂದರೆ ವೇದಾಂಗ ಜ್ಯೋತಿಷದ ಈ ಯುಗಕ್ಕೆ  ಕೃತ ತ್ರೇತಾದಿ ಸಂಜ್ಞೆ ಇಲ್ಲದಿರುವುದು.

ಆ ಯುಗವೇ ಬೇರೆ, ಕೃತ ತ್ರೇತಾದಿ ಪ್ರಚಲಿತ ಯುಗಗಳೇ ಬೇರೆ.
೧೨ ಮುಖ್ಯ ಉಪನಿಷತ್ತುಗಳಲ್ಲೊಂದಾದ ಮಹಾನಾರಾಯಣೋಪನಿಷತ್ತು ಪರಾಂತ ಕಾಲ ಎಂಬುದನ್ನು ಉಲ್ಲೇಖಿಸಿದೆ.
 ಕೃತ ತ್ರೇತಾದಿ ಪ್ರಚಲಿತ ಯುಗಗಳ ಮೊದಲ ಉಲ್ಲೇಖ (ಈಗ ನಮಗೆ ಸಿಕ್ಕಿರುವ) ಇರುವುದು ಸೂರ್ಯ ಸಿದ್ಧಾಂತದಲ್ಲಿ. ಸೂರ್ಯ ಸಿದ್ಧಾಂತದ ಕಾಲ ಸ್ಪಷ್ಟವಾಗಿಲ್ಲ, ಆದರೆ ವರಾಹಮಿಹಿರರು ಇದನ್ನು ಉಲ್ಲೇಖಿಸುವುದರಿಂದ (ಕ್ರಿಶ ೪೮೮-೫೮೭) ಅದಕ್ಕಿಂತ ಬಹಳ ಹಿಂದಿನದೇ ಸರಿ.ಸಾಂಪ್ರದಾಯಿಕರು ಸೂರ್ಯ ಸಿದ್ಧಾಂತವನ್ನು  ಆರ್ಷವೆಂಬುದಾಗಿ ಪರಿಗಣಿಸುತ್ತಾರೆ. ಪುರಾಣಾದಿಗಳನ್ನು ತಿರಸ್ಕರಿಸಿದ ದಯಾನಂದ ಸರಸ್ವತಿಯವರು ಕಾಲಗಣನೆಯ ಈ ಪದ್ಧತಿಯನ್ನು ಒಪ್ಪಿದ್ದಾರೆ ಮತ್ತುಆರ್ಷವೆಂಬುದಾಗಿ ಪರಿಗ್ರಹಿಸಿ ಇದನ್ನೇ ಅನುಸರಿಸಿದ್ದಾರೆ.ವೇದಾಂಗ ಜ್ಯೋತಿಷದಕಾಲ ಕ್ರಿಪೂ ೧೪೦೦ . ಇದು ಲಗಧ ಮುನಿ ಪ್ರಣೀತವಾಗಿದ್ದು ಲಗಧಸ್ಯ ಮಹಾತ್ಮನಃ ಎಂದು ಗ್ರಂಥದಲ್ಲಿರುವುದರಿಂದ (ಮೌಖಿಕ ಪರಂಪರೆಯನಂತರ, ಬರವಣಿಗೆ ಶುರುವಾದ ಮೇಲೆ) ಲಗಧನ ಶಿಷ್ಯ ಪರಂಪರೆಯವರು ಬರೆದಿರಬೇಕೆಂದು(ಶುಚಿ) ಊಹಿಸಲಾಗಿದೆ.
ಬ್ರಹ್ಮಗುಪ್ತನ ಪ್ರಕಾರ(ಕ್ರಿಶ೬೨೮) ಸಂಹಿತೆಗಳಲ್ಲಿ ಯಜ್ಞದ ಉದ್ದೇಶಕ್ಕಾಗಿ ಮಧ್ಯಮ ಮಾನದಲ್ಲಿ ಐದು ವರ್ಷದ ಯುಗವನ್ನು ಹೇಳಿದ್ದಾರೆ .

(ಯುಗಮಾಹುಃ ಪಂಚಾಬ್ಧಂ ರವಿಶಶಿನೋಃ ಸಂಹಿತಾಂಗಕರಾಯೇ)
ಈ ಐದು ವರ್ಷಗಳ ಯುಗ ವೇದಾಂಗ ಜ್ಯೋತಿಷದ ನಂತರ  (ಕಾಲಮಾಪಕವಾಗಿ) ಬೇರೆ ಯಾವ ಗ್ರಂಥಗಳಲ್ಲಿ ಉಲ್ಲೇಖವಾಗಿದೆಯೋ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ.
ಸೂರ್ಯ ಸಿದ್ಧಾಂತಾದಿ  ಗ್ರಂಥಗಳಲ್ಲಿರುವುದರಿಂದ ಕೃತಾದಿ ಯುಗಗಳು ಕೇವಲ ಪೌರಾಣಿಕ ಮಾತ್ರವಲ್ಲ ಆರ್ಷವೂ ಹೌದು.

ಪೂರ್ವಭಾವಿಯಾಗಿ ಹಂಸಾನಂದಿಯವರ ಈ ಬರಹವನ್ನು ಓದಿ  -  http://sampada.net/blog/hamsanandi/03/12/2009/22852