ಕಾಫೀ ಡೇಲಿ ಕನ್ನಡ ಹಾಡು ಹಾಕಲ್ವಂತೆ

ಕಾಫೀ ಡೇಲಿ ಕನ್ನಡ ಹಾಡು ಹಾಕಲ್ವಂತೆ

ಬೆಂಗಳೂರಲ್ಲಿ ಸುಮಾರ್ ಕಡೆ ಇರೋ ಕಾಫೀ-ಡೇ ಮಳಿಗೆಗಳಲ್ಲಿ ಕನ್ನಡ ಹಾಡು ಹಾಕಲ್ವಂತೆ.
ಮೊನ್ನೆ, ಬಸವನಗುಡಿಯ ಮಳಿಗೆಗೆ ಭೇಟಿ ಕೊಟ್ಟ ಗೆಳೆಯರೊಬ್ಬರು, ಮಳಿಗೆಯಲ್ಲಿ "ಕನ್ನಡ ಹಾಡು ಹಾಕಿ" ಅಂತ ಕೇಳಿಕೊಂಡಿದ್ದಕ್ಕೆ "ನಮ್ಮಲ್ಲಿ ಕನ್ನಡ ಹಾಡುಗಳ್ನ ಹಾಕಲ್ಲ !!" ಅಂತ  ಗಟ್ಟಿಯಾಗಿ ಹೇಳಿದ್ರಂತೆ. 

ಕರ್ನಾಟಕದವರೇ ಕಟ್ಟಿ ಬೆಳೆಸಿ ನಡುಸ್ತಿರೋ ಕಾಫೀ-ಡೇನಲ್ಲಿ ಕನ್ನಡ ಹಾಡುಗಳು ಹಾಕಬಾರ್ದು ಅಂತೇನಾದ್ರೂ ಕಾನೂನು ಮಾಡ್ಕೊಂಡಿದಾರಾ?
ಅಥವಾ, ಕನ್ನಡ ಹಾಡುಗಳು ಕಾಫೀ-ಡೇ ಒಳಗೆ ಕೇಳಿಬಂದ್ರೆ ಏನಾದ್ರೂ ತೊಂದ್ರೆ ಆಗ್ಬಿಡುತ್ತೆ ಅಂತ ಹೆದ್ರುಕೊಂಡಿದಾರಾ?

"ಕನ್ನಡದ ಬಗೆಗೆ ಈ ರೀತಿಯ negative bias ಯಾಕೆ?" ಅಂತ ಕಾಫೀ-ಡೇನೋರಿಗೆ ನಾವು ಮಿಂಚೆ ಬರೆದು ಕೇಳೋಣ.
"ಕನ್ನಡಿಗ ಗ್ರಾಹಕರನ್ನ ಇಷ್ಟು ಕೀಳಾಗಿ ನೋಡೋದು ಯಾಕೆ?" ಅಂತ ಪ್ರಶ್ನಿಸೋಣ.
"ನಮ್ಮ ಊರಲ್ಲಿ, ನಮ್ಮವರೇ, ನಮ್ಮ ಭಾಷೆ ಹಾಡುಗಳನ್ನ ಹಾಕಲ್ಲ ಅನ್ನೋದು ಒಳ್ಳೆ ಲಕ್ಷಣ ಅಲ್ಲ. ನೀವು ಬದಲಾಗಬೇಕು" ಅಂತ ಕಾಫೀ-ಡೇನೋರಿಗೆ ಬರೆಯೋಣ.

ಕಾಫೀ-ಡೇನವರ ಮಿಂಚೆ: customercare@cafecoffeeday.com

karthik@cafecoffeeday.com


Rating
No votes yet

Comments