ಉರಿಯುವ ದೀಪದ ವೇದನೆ.!..
ಉರಿಯುತ್ತೇನೆ ದೀಪವಾಗಿ
ಅನುದಿನವು ವೇದನೆಯನ್ನು ಪಡುತ್ತ.
ಕೆಂಡವನ್ನು ಮಡಿಲಲ್ಲಿ ಸುತ್ತಿಕೊಂಡು
ರಾತ್ರಗಳ ಕಳೆಯುತ್ತೇನೆ.
ಇಂದು ಸಾಯುತ್ತೇನೆಂಬ
ಭಯವಿಲ್ಲ.
ನಾಳೆ ಮತ್ತೆ ಬೆಳಕಾಗುತ್ತೇನೆಂಬ
ವೇದನೆಯಿಲ್ಲ.
ಎಣ್ಣೆ ಇರುವ ತನಕ
ಬತ್ತಿಯೊಡನೆ ಬೆಳಕನ್ನು ತೋರುತ್ತೇನೆ.
ನನ್ನ ಕೆಳಗೊಂದಷ್ಟು ಕತ್ತಲಿರುವುದು
ನನಗೆ ಅರಿವಿದೆ
ಆದರೂ
ಇತರರಿಗೆ ಬೆಳಕ ತೋರುವುದು
ನನ್ನ ಧರ್ಮ.
ನನ್ನ ಜ್ವಾಲೆಯಿಂದ ಹಲವರು
ಬೆಚ್ಚಗೆ ಮೈಕಾಯಿಸಿಕೊಳ್ಳುತ್ತಾರೆ.
ತಮ್ಮ ಸಿಗರೇಟಿನ ಹೊಗೆಯಂತೆ
ಬೆಚ್ಚಗಿನ ಬಿಸಿಯನ್ನು ಹೀರಿ
ಸಂತಸ ಪಡುತ್ತಾರೆ.
ಆದರೆ ನಾನು
ಮರುಕ ಪಡುವ ಹಾಗಿಲ್ಲ.
ಚಳಿಗೊ ಮಳೆಗೊ
ಗಾಳಿಗೊ ನನ್ನ ಕಾರ್ಯವನ್ನು
ನಿಲ್ಲಿಸುವಂತಿಲ್ಲ.
ನನ್ನ ಬೆಳಕು
ಬೀರುತ್ತಲೇ ಇರಬೇಕು ಸದಾ.
ಅದೆಷ್ಟೊ ರಾತ್ರಿಗಳಿಗೆ
ಬೆಳಕಾಗಿದ್ದೇನೆ.
ಬೆತ್ತಲೆಯ ನರಳಾಟಗಳಿಗೆ.
ಸುಖಪಡುವ ಸಮಯಗಳಿಗೆ.
ಬಲಾತ್ಕಾರದ ಸನ್ನಿವೇಶಗಳಿಗೆ.
ತನ್ನ ಮಾನವನ್ನು ಕಳೆದುಕೊಂಡು
ಹತಾಶರಾಗಿ ಕುಳಿತ
ಹಲವು ಮನಸ್ಸುಗಳಿಗೆ
ನನ್ನ ಬೆಳಕನ್ನು ಬೆಳಗಿಸಿದ್ದೇನೆ.
ನಾ ಸತ್ಯವನ್ನು ಹೇಳಲು
ಸಿದ್ದನಾದರೂ ನನ್ನ ಬಾಳಿಗೆ
ಸೂರ್ಯನೆಂಬ ಬೆಳಕು ಆಗಮನವಾಗಿರುತ್ತದೆ.
ಕೇವಲ ರಾತ್ರಿಗಳ ಬೆಳಗಲು
ಮಾತ್ರ ನನ್ನ ಉಪಯೋಗ.
ಹಗಲಿಗೆ ನನ್ನ ಅವಶ್ಯಕತೆಯಂತು
ಬರುವುದೇ ಇಲ್ಲ.
ಮತ್ತೊಂದು ರಾತ್ರಿಗಾಗಿ ಕಾಯುತ್ತೇನೆ
ನನ್ನೊಳಗಿನ ಸತ್ಯವನ್ನೊಮ್ಮೆ
ಬಿಡಿಸಿ ಎಲ್ಲರೆದಿರು
ಹೇಳಬೇಕು ಎಂದುಕೊಳ್ಳುತ್ತೇನೆ.
ನನ್ನ ಅಂಧಕಾರ
ಕಳೆದು ಹೋಗುವ ಕಾಲಕ್ಕಾಗಿ ಕಾಯುತ್ತಿದ್ದೇನೆ.
ಆ ಕಾಲ ಬರುವುದಾದರೂ ಎಂತು ???.
ವಸಂತ್
Comments
ಉ: ಉರಿಯುವ ದೀಪದ ವೇದನೆ.!..
In reply to ಉ: ಉರಿಯುವ ದೀಪದ ವೇದನೆ.!.. by pavithrabp
ಉ: ಉರಿಯುವ ದೀಪದ ವೇದನೆ.!..
ಉ: ಉರಿಯುವ ದೀಪದ ವೇದನೆ.!..
In reply to ಉ: ಉರಿಯುವ ದೀಪದ ವೇದನೆ.!.. by NayanaHN
ಉ: ಉರಿಯುವ ದೀಪದ ವೇದನೆ.!..
ಉ: ಉರಿಯುವ ದೀಪದ ವೇದನೆ.!..
In reply to ಉ: ಉರಿಯುವ ದೀಪದ ವೇದನೆ.!.. by suresh nadig
ಉ: ಉರಿಯುವ ದೀಪದ ವೇದನೆ.!..