ರೈತರೋ..ದನಗಳೋ?

ರೈತರೋ..ದನಗಳೋ?

ದರ್ಪದ ಸಂಕೇತ


ಖಾಕಿ ಬಟ್ಟೆ ದರ್ಪದ ಸಂಕೇತ. ಬ್ರಿಟಿಷರ ಬಳುವಳಿ. ಬ್ರಿಟಿಷರು ಹೋಗುವಾಗ ತಮ್ಮ ದೌರ್ಜನ್ಯವನ್ನು ಪೋಲೀಸರು, ರಾಜಕಾರಣಿಗಳು, ಕೋರ್ಟ್‌ಗಳಿಗೆ ಬಿಟ್ಟು ಹೋಗಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಬಡ ರೈತನ ಮೇಲೆ ರೌಡಿಗಳಿಗಿಂತ ಕಡೆಯಾಗಿ ದೊಣ್ಣೆ ಬೀಸುತ್ತಿದ್ದಾರಲ್ಲಾ- ಇವರ ಟೊಪ್ಪಿ ಕೆಳಗೆ ಇರುವುದು, ಅದೇ ಬ್ರಿಟಿಷರ ಕಾಲದ ತುಕ್ಕು ಹಿಡಿದ ಮೆದುಳು.


ಪ್ರಕೃತಿ, ರಾಜಕಾರಣಿ, ಕೋರ್ಟ್, ಪೋಲೀಸರನ್ನೆಲ್ಲಾ ಎದುರಿಸಿ ನಿಂತಿರುವ ರೈತನಿಗೆ ನೂರಾನೆ ಬಲ ಬರಲಿ ಎಂದು ಹಾರೈಸುವ


(೨೦೦೨ರ ಸೆಪ್ಟೆಂಬರ್ ತಿಂಗಳಲ್ಲಿ ಜಲಾಶಯಗಳಲ್ಲಿ ನೀರೇ ಇಲ್ಲದಾಗ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಷಯದಲ್ಲಿ ರೈತರು ಪ್ರತಿಭಟಿಸಿದರು.ಆಗ ರೈತರ ಮೇಲೆ ನಡೆಸಿದ ಪೋಲೀಸರ ದೌರ್ಜನ್ಯವನ್ನು ವಿರೋಧಿಸಿ, ಮೇಲಿನ ಬರಹವನ್ನು ವಿಜಯ ಕರ್ನಾಟಕದ ವಾಚಕರ ವಿಜಯಕ್ಕೆ ಬರೆದಿದ್ದೆ.)


ನಿನ್ನೆ ಪುನ: ಟಿ.ವಿ.ಗಳಲ್ಲಿ ನೀವು ನೋಡಿರಬಹುದು-


ನೈಸ್ ಯೋಜನೆಗೆ ಸಂಬಂಧಿಸಿದ ಉನ್ನತ ಮಟ್ಟದ ಸಭೆಗೆ ಆಹ್ವಾನಿಸಿಲ್ಲ ಎಂದು ಆರೋಪಿಸಿ ಹೆಮ್ಮಿಗೆಪುರ ಬಳಿಯ ನೈಸ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ "ಕೆಲ ರೈತ"ರ ಮೇಲೆ "ನೂರಾರು" ಪೊಲೀಸರು ಲಾಠಿ ಪ್ರಹಾರ ಮಾಡಿದ್ದನ್ನು. ಕೆಲವರು ಕುಸಿದು ಬಿದ್ದರೂ ಬಿಡದೆ ಸುತ್ತುವರಿದು ಮನಬಂದಂತೆ ಚಚ್ಚಿದರು.


ಜಮೀನು ಕಳಕೊಂಡ ಒಬ್ಬ ರೈತ ಪ್ರತಿನಿಧಿಯನ್ನು ಸಭೆಗೆ ಆಹ್ವಾನಿಸಿದ್ದರೆ ಸರಕಾರಕ್ಕೆ ಏನು ತೊಂದರೆಯಾಗುತ್ತಿತ್ತು? ದೇವೇಗೌಡರ ಮೇಲಿನ ಸಿಟ್ಟನ್ನು ರೈತರ ಮೇಲೆ ತೀರಿಸಬೇಕಾ?


ಸರಕಾರದ ಪ್ರೋತ್ಸಾಹ ಇಲ್ಲದಿದ್ದರೆ, ದನಕ್ಕೆ ಹೊಡೆದಂತೆ ಹೊಡೆಯಲು ಪೋಲೀಸರಿಗೆ ಧೈರ್ಯ ಬರುತ್ತಿತ್ತಾ? (ಒಬ್ಬ ಪೋಲೀಸ ಬೂಟುಗಾಲಲ್ಲಿ ಒದೀತಿದ್ದ...)


ಮುಖ್ಯ ಮಂತ್ರಿಗೆ ಟಿ.ವಿಯವರು ವಿಚಾರಿಸಿದಾಗ, ನನಗದರ ಮಾಹಿತಿ ಇಲ್ಲ ಎಂದರು.


ಮಾಹಿತಿ ಇಲ್ಲದ್ದು ಒಳ್ಳೆಯದಾಯ್ತು- ಇಲ್ಲದಿದ್ದರೆ ರೈತನ ಹೆಸರಲ್ಲಿ ಇನ್ನಷ್ಟು ಕಣ್ಣೀರು ಹರಿಸುತ್ತಿದ್ದರು.


ಅಂದಹಾಗೆ ಈ ರಾಜಕಾರಣಿಗಳಲ್ಲಿ ಅನ್ನ ತಿನ್ನುವವರು ಒಬ್ಬರಾದರೂ ಇದ್ದಾರಾ?


-ಗಣೇಶ.

Rating
No votes yet

Comments