ಇನ್ನೊಂದೆರಡು........

ಇನ್ನೊಂದೆರಡು........

೧.ನಿನ್ನ ಕೊರಳ ಕೊಳಲಿಂದ ಬರುತಿರೆ ನನ್ ಹೆಸರ ನಾದ

 ಅನಿಸುತಿದೆ ಸಪ್ತಸ್ವರಗಳ ನಡುವೆ ನಡೆಯುತಿದೆ ಸಂವಾದ

 ಪವನವೂ ಆಲಿಸುತಿದೆ ಮಾಡದೆ ಸದ್ದು

 ಕೋಗಿಲೆ ಮಲಗಿದೆ ಸೋತು ಮುಸುಕ ಹೊದ್ದು

೨. ಗಣಿತದಿ ನೀ ಬಲು ಜಾಣೆ,

ಹ್ರುದಯಗಳ ಕೂಡಿದೆ, ವಿರಹವ ಕಳೆದೆ

ಸಂತಸವ ಗುಣಿಸಿ ದುಃಖವ ಭಾಗಿಸಿದೆ,

ನೊಡು ಯೆನ್ನ ಹ್ರುದಯವನೆ ಕದ್ದು,

ನನ್ನ ಅವಶೇಷವಾಗಿಸಿದೆ

Rating
No votes yet

Comments