ಯಾರನ್ನು / ಯಾವುದನ್ನು ನೆನಸಿಕೊಂಡು ಅಳುತ್ತೀರಿ, ಮುಖ್ಯಮಂತ್ರಿಗಳೇ?

ಯಾರನ್ನು / ಯಾವುದನ್ನು ನೆನಸಿಕೊಂಡು ಅಳುತ್ತೀರಿ, ಮುಖ್ಯಮಂತ್ರಿಗಳೇ?

ಹಿಂದೀ ಚಿತ್ರವೊಂದರಲ್ಲಿ  (ಸಾರಾಂಶ್ ೧೯೮೪) ಓರ್ವ ತಂದೆ ತನ್ನ ಮಗನ ಅಸ್ಥಿಯನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಹೋಗ್ತಾನೆ. ಆಗ ಆ ನಟ ತನ್ನ ಮುಖದಲ್ಲಿ ಅತೀವ ದುಃಖವನ್ನು ತೋರ್ಪಡಿಸಬೇಕು. ಹೇಗೆ ತೋರಿಸುವುದು, ಅದು ಆ ನಟನ ಮೊದಲ ಚಿತ್ರ ಬೇರೆ. ಆಗ ಆ ನಟ (ಅನುಪಮ್ ಖೇರ್) ತನ್ನ ಈ ಮೊದಲ ಚಿತ್ರ ಸೋತು ಹೋದರೆ ತನ್ನ ಚಿತ್ರಜೀವನದ ಗತಿ ಏನಾಗಬಹುದು ಅಂತ ಯೊಚಿಸಿ ದುಃಖವನ್ನು ಮುಖದಮೇಲೆ ತೋರಿಸಿಕೊಂಡರಂತೆ.


ಹಾಗೇ ನಮ್ಮ ಮುಖ್ಯಮಂತ್ರಿಗಳು. ಎಲ್ಲಿಬೇಕೆಂದರಲ್ಲಿ ಅಳುತ್ತಾರೆ. ಅವರ ಮನದೊಳಗೆ ಏನು ನಡೀತಿರುತ್ತದೆಯೋ, ಯಾರ ಗೈರುಹಾಜರಿ ಅವರನ್ನು ಕಾಡುತ್ತಿರುತ್ತದೆಯೋ, ಯಾರು ಯಾರನ್ನು ನೆನಸಿಕೊಂಡು ಅಳ್ತಾರೋ, ಮುಂದೆ ಕಾದಿರುವ ಯಾವ ಅನಾಹುತದ ಬಗ್ಗೆ ಯೋಚಿಸುತ್ತಿರುತ್ತಾರೋ  ಆ ದೇವರಿಗೇ ಗೊತ್ತು.


ಆದರೆ ಮುಖ್ಯಮಂತ್ರಿಗಳು ಬಾಯಿಯಲ್ಲಿ ಹೋಳೋದು ಮಾತ್ರ ಬೇರೆಯೇ. ಅವರು ನುಡಿದಂತೆ ಅವರು ರೈತರಿಗಾಗೇ ಹೋದಲ್ಲೆಲ್ಲಾ ಕಣ್ಣೀರಿಳಿಸ್ತಾ ಇರುವುದು ನಿಜವೇ ಆಗಿದ್ದರೆ, ಮೊನ್ನೆ ರೈತರ ಮೇಲೆ ಲಾಠೀಪ್ರಹಾರ ನಡೆಯಲು ಬಿಡುತ್ತಿದ್ದರೇ?  ಸರಿ ಇವರಿಗೆ ಗೊತ್ತಿಲ್ಲದೇ ಲಾಠೀಪ್ರಹಾರ ನಡೆಯಿತು ಅಂತ ಅಂದುಕೊಳ್ಳೋಣ. ಲಾಠೀಪ್ರಹಾರ ನಡೆದಮೇಲೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೇ ಜಾರಿಕೊಳ್ತಾರಯೆ?


- ಆತ್ರಾಡಿ ಸುರೇಶ ಹೆಗ್ಡೆ


 


 


 


 


 

Rating
No votes yet

Comments