ಸೋಮವಾರ, ೨೮, ಜೂನ್ ೨೦೧೦, ಎಂಟರಘಟ್ಟಕ್ಕೆ, ಅರ್ಜೆಂಟೀನಾ ತಂಡ-[ಮೆಕ್ಸಿಕೊ ಹೊರಕ್ಕೆ] !

ಸೋಮವಾರ, ೨೮, ಜೂನ್ ೨೦೧೦, ಎಂಟರಘಟ್ಟಕ್ಕೆ, ಅರ್ಜೆಂಟೀನಾ ತಂಡ-[ಮೆಕ್ಸಿಕೊ ಹೊರಕ್ಕೆ] !

ಬರಹ

ಜೋಹಾನ್ಸ್‌ಬರ್ಗ್ (ಡಿಪಿಎ):    ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ "ಡಿಯಾಗೊ ಮರಡೋನಾ" ಅವರ ಮಾರ್ಗದರ್ಶನದಲ್ಲಿ ಪಳಗಿದ ಅರ್ಜೆಂಟೀನಾ ೩-೧ ಗೋಲುಗಳಿಂದ ಮೆಕ್ಸಿಕೊ ತಂಡವನ್ನು ಮಣಿಸಿತು.

ಕಾರ್ಲೋಸ್ ಟವೇಜ್ ತಂದಿತ್ತ ಎರಡು ಗೋಲುಗಳ ನೆರವಿನಿಂದ ಅರ್ಜೆಂಟೀನಾ ತಂಡ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯಿತು.
ಪಂದ್ಯದಿಂದ ಪಂದ್ಯಕ್ಕೆ ಹೆಚ್ಚಿನ ಬಲ ಪಡೆದುಕೊಂಡು ನಾಗಾಲೋಟದಲ್ಲಿ ಓಡುತ್ತಿರುವ, ಅರ್ಜೆಂಟೀನಾ ತಂಡದ ಗೆಲುವಿನ ರೂವಾರಿ ಎನಿಸಿದ್ದು ಕಾರ್ಲೋಸ್ ಟವೇಜ್, ಅವರ ಮೊದಲು ಹೊಡೆದ ವಿವಾದಕ್ಕೆ ಕಾರಣವಾದ  ಗೋಲ್ ಅಲ್ಲದೆ,  ಪಂದ್ಯದ ೨೬ ಮತ್ತು ೫೨ ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ತಂಡದ ಮತ್ತೊಂದು ಗೋಲನ್ನು ಗೊನ್ಸಾಲೊ ಹಿಗ್ವಿನ್ ೩೩ ನೇ ನಿಮಿಷದಲ್ಲಿ ಗಳಿಸಿದರು.
ಮೆಕ್ಸಿಕೊ ತಂಡದ ಏಕೈಕ ಗೋಲನ್ನು ಜೇವಿಯರ್ ಹೆರ್ನಾಂಡೆಸ್ ೭೧ ನೇ ನಿಮಿಷದಲ್ಲಿ ತಂದಿತ್ತರು. ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನೆರೆದ ೮೪  ಸಾವಿರಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ಪೂರ್ಣ ಪ್ರಭುತ್ವ ಸಾಧಿಸಿತು. ಆದರೆ ಟವೇಜ್ ಗಳಿಸಿದ ಮೊದಲ ಗೋಲು ಸಾಕಷ್ಟು .
ಲಯೊನೆಲ್ ಮೆಸ್ಸಿ ಅವರು ಗುರಿಯೆಡೆಗೆ ಒದ್ದ ಚೆಂಡನ್ನು,  ಮೆಕ್ಸಿಕೊ ಗೋಲ್ ಕೀಪರ್ ಆಸ್ಕರ್ ಪೆರೆಜ್ ತಡೆದರು. ರಿಬೌಂಡ್ ಆಗಿ ಬಂದ ಚೆಂಡನ್ನು ಮೆಸ್ಸಿ ಮತ್ತೆ ಟೆವೆಸ್‌ಗೆ ನೀಡಿದರು. ಈ ವಿವಾದಾಸ್ಪದದ ಗೋಲ್ ನ್ನು ಸುಲಭದಲ್ಲಿ ಗುರಿ ಸೇರಿಸಿದರು. ಆದರೆ, ದಿನವೆಲ್ಲಾ ಇದರ ಬಗ್ಗೆ ಚರ್ಚೆನಡೆದಿತ್ತು. ಆದರೆ ಅದು ಆಫ್‌ಸೈಡ್ ಆಗಿತ್ತು. ಲೈನ್ಸ್‌ಮನ್ ಆಗಿದ್ದ ಇಟಲಿಯ ಸ್ಟೆಫಾನೊ ಅಯ್‌ರೊಲ್ಡಿ ಇದನ್ನು ಗಮನಿಸಲಿಲ್ಲ. ಅವರು ಆಫ್‌ಸೈಡ್  ನಿರ್ಧಾರ ಘೋಷಿಸಿದ  ಕಾರಣ ರೆಫರಿ ಅರ್ಜೆಂಟೀನಾಕ್ಕೆ ಗೋಲು ನೀಡಿದರು. ಮೆಕ್ಸಿಕೊ ಆಟಗಾರರು ಇದನ್ನು ವಿರೋಧಿಸಿದರೂ ರೆಫರಿಯ ನಿರ್ಧಾರ ಬದಲಾಗಲಿಲ್ಲ. 
"ಟವೇಜ್ ರವರ ಎರಡನೆಯ ಗೋಲು"
ಆದರೆ ಟವೇಜ್ ಗಳಿಸಿದ ಎರಡನೇ ಗೋಲು ಸೊಗಸಾಗಿತ್ತು. ೨೫ ಗಜ ದೂರದಿಂದ ಅವರು ಒದ್ದ ಚೆಂಡನ್ನು ತಡೆಯಲು ಮೆಕ್ಸಿಕೊ ಡಿಫೆಂಡರ್‌ಗಳು ಹಾಗೂ ಗೋಲಿಗೆ ಸಾಧ್ಯವಾಗಲಿಲ್ಲ. ಸ್ಟಾರ್ ಆಟಗಾರ ಲಯೊನೆಲ್ ಮೆಸ್ಸಿ ಅವರಿಗೆ ಈ ಪಂದ್ಯದಲ್ಲೂ ಗೋಲು ಗಳಿಸಲು ಆಗಲಿಲ್ಲ. ಮೆಸ್ಸಿಯವರ ಕಾಲಿನಒದೆತದ ಚಮತ್ಕಾರ, ಕಣ್ಣಿಗೆ ತಪ್ಪಿಸಿ, ಕಾಲಿನಬಳಿಯಲ್ಲೇ ಇದ್ದರೂ, ಅದನ್ನು ಮುಟ್ಟಲೂ ಆಗದಂತೆ, ಚಾಣಾಕ್ಷಣತನದಿಂದ, ಮುಂದುವರೆಸಿಕೊಂಡುಹೋಗಿ, ತಾವು ಗೋಲ್ ಪೆಟ್ಟಿಗೆಯಲ್ಲಿ ತೂರಿಸಲು ಸಾಧ್ಯವಾಗದಿದ್ದರೂ,  ಪಾಸ್ ಕೊಟ್ಟು ಟೂರ್ನಿಯಲ್ಲಿ ಹಲವು ಗೋಲುಗಳಿಗೆ ಹಾದಿಯೊದಗಿಸಿಕೊಟ್ಟಿದ್ದ ಮೆಸ್ಸಿ ಅವರ ಒಂದೆರಡು ಪ್ರಯತ್ನಗಳನ್ನು ಎದುರಾಳಿ ಗೋಲಿ ತಡೆದರು. ಮೆಸ್ಸಿಯವರ ಕಾಲಿನ ಜಾದು, ಮತ್ತು ಚೆಂಡನ್ನು ನಿಯಂತ್ರಿಸಿ ಮುಂದುವರೆಯುವ ತಂತ್ರಗಳ ಬಗ್ಗೆ, ಒಂದು ವೈಜ್ಞಾನಿಕ ವಿಶ್ಲೇಷಣೆ ನಡೆಸುತ್ತಿದ್ದಾರೆ.  ಮುಂದೆ ಅರ್ಜೆಂಟೀನಾ ತಂಡ ಜರ್ಮನಿ ಜೊತೆ,  ಎಂಟರಘಟ್ಟದ ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ.

ಅರ್ಜೆಂಟೀನಾ ತಂಡದ ಆಟಗಾರರು ಸಂಭ್ರಮಿಸುತ್ತಿರುವುದು.

ಸ್ಕೋರ್ ವಿವರಗಳು : 

ಅರ್ಜೆಂಟೈನ : ತಾವೆಝ್,  (ಮೆಸ್ಸಿ ಸಹಾಯಗಳಿಸಿ,) ೧, ೨೬ ನೇ ನಿಮಿಷದಲ್ಲಿ  

ಅರ್ಜೆಂಟೈನ : ಹಿಗ್ವಿನ್ ೧, ೩೩ ನೇ ನಿಮಿಷದಲ್ಲಿ    

ಅರ್ಜೆಂಟೈನ : ತಾವೆಝ್ ೨,  ೫೨ ನೆಯ ನಿಮಿಷದಲ್ಲಿ    

ಮೆಕ್ಸಿಕೊ : ಹರ್ನಾಂಡಿಸ್  (ಟೊರ್ರಡೊ ಸಹಾಯದಿಂದ) ೧, ೭೧ ನೇ  ನಿಮಿಷದಲ್ಲಿ

 

ಅರ್ಜೆಂಟೀನಾ; ಜೋಹಾನ್ಸ್‌ಬರ್ಗ್ (ಡಿಪಿಎ) : ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ "ಡಿಯಾಗೊ ಮರಡೋನಾ" ಅವರ ಮಾರ್ಗದರ್ಶನದಲ್ಲಿ ಪಳಗಿದ ಅರ್ಜೆಂಟೀನಾ ೩-೧ ಗೋಲುಗಳಿಂದ ಮೆಕ್ಸಿಕೊ ತಂಡವನ್ನು ಮಣಿಸಿತು.ಕಾರ್ಲೋಸ್ ಟವೇಜ್ ತಂದಿತ್ತ ಎರಡು ಗೋಲುಗಳ ನೆರವಿನಿಂದ ಅರ್ಜೆಂಟೀನಾ ತಂಡ, 'ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‌ 'ಗೆ ಮುನ್ನಡೆಯಿತು.

ಪಂದ್ಯದಿಂದ ಪಂದ್ಯಕ್ಕೆ ಹೆಚ್ಚಿನ ಬಲ ಪಡೆದುಕೊಂಡು ನಾಗಾಲೋಟದಲ್ಲಿ ಓಡುತ್ತಿರುವ, ಅರ್ಜೆಂಟೀನಾ ತಂಡದ ಗೆಲುವಿನ ರೂವಾರಿ ಎನಿಸಿದ್ದು ಕಾರ್ಲೋಸ್ ಟವೇಜ್, ಅವರ ಪಂದ್ಯದ ಮೊದಲ  ೨೬ ನೇ ನಿಮಿಷದಲ್ಲಿ ಹೊಡೆದ ವಿವಾದಾತ್ಮಕವಾದ ಗೋಲ್ ಅಲ್ಲದೆ,  ೫೨ ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.  ತಂಡದ ಮತ್ತೊಂದು ಗೋಲನ್ನು 'ಗೊನ್ಸಾಲೊ ಹಿಗ್ವಿನ್ ' ೩೩ ನೇ ನಿಮಿಷದಲ್ಲಿ ಗಳಿಸಿದರು.

 

ಮೆಕ್ಸಿಕೊ ತಂಡದ ಏಕೈಕ ಗೋಲನ್ನು ’ಜೇವಿಯರ್ ಹೆರ್ನಾಂಡೆಸ್,’  ೭೧ ನೇ ನಿಮಿಷದಲ್ಲಿ ತಂದಿತ್ತರು. 

ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ನೆರೆದ ೮೪  ಸಾವಿರಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ಪೂರ್ಣ ಪ್ರಭುತ್ವ ಸಾಧಿಸಿತು. ಆದರೆ ಟವೇಜ್ ಗಳಿಸಿದ ಮೊದಲ ಗೋಲು ಸಾಕಷ್ಟು ಲಯೊನೆಲ್ ಮೆಸ್ಸಿ ಅವರು ಗುರಿಯೆಡೆಗೆ ಒದ್ದ ಚೆಂಡನ್ನು,  ಮೆಕ್ಸಿಕೊ ಗೋಲ್ ಕೀಪರ್ ಆಸ್ಕರ್ ಪೆರೆಜ್ ತಡೆದರು. ರಿಬೌಂಡ್ ಆಗಿ ಬಂದ ಚೆಂಡನ್ನು ಮೆಸ್ಸಿ ಮತ್ತೆ ಟೆವೆಸ್‌ಗೆ ನೀಡಿದರು. ಈ ವಿವಾದಾಸ್ಪದದ ಗೋಲ್ ನ್ನು ಸುಲಭದಲ್ಲಿ ಗುರಿ ಸೇರಿಸಿದರು. ಆದರೆ, ದಿನವೆಲ್ಲಾ ಇದರ ಬಗ್ಗೆ ಚರ್ಚೆನಡೆದಿತ್ತು. ಆದರೆ ಅದು ಆಫ್‌ಸೈಡ್ ಆಗಿತ್ತು. ಲೈನ್ಸ್‌ಮನ್ ಆಗಿದ್ದ ಇಟಲಿಯ ’ಸ್ಟೆಫಾನೊ ಅಯ್‌ರೊಲ್ಡಿ,’ ಇದನ್ನು ಗಮನಿಸಲಿಲ್ಲ. ಅವರು ಆಫ್‌ಸೈಡ್ ನಿರ್ಧಾರ ಘೋಷಿಸಿದ  ಕಾರಣ, ರೆಫರಿ ಅರ್ಜೆಂಟೀನಾಕ್ಕೆ ಗೋಲು ನೀಡಿದರು. ಮೆಕ್ಸಿಕೊ ಆಟಗಾರರು ಇದನ್ನು ವಿರೋಧಿಸಿದರೂ ರೆಫರಿಯ ನಿರ್ಧಾರ ಬದಲಾಗಲಿಲ್ಲ.

 

ಆದರೆ "ಟವೇಜ್ ರವರ  ಎರಡನೇ ಗೋಲು ಸೊಗಸಾಗಿತ್ತು. ೨೫ ಗಜ ದೂರದಿಂದ ಅವರು ಒದ್ದ ಚೆಂಡನ್ನು ತಡೆಯಲು ಮೆಕ್ಸಿಕೊ ಡಿಫೆಂಡರ್‌ಗಳು ಹಾಗೂ ಗೋಲಿಗೆ ಸಾಧ್ಯವಾಗಲಿಲ್ಲ. ಸ್ಟಾರ್ ಆಟಗಾರ, 'ಲಯೊನೆಲ್ ಮೆಸ್ಸಿ' ಅವರಿಗೆ ಈ ಪಂದ್ಯದಲ್ಲೂ ಗೋಲು ಗಳಿಸಲು ಆಗಲಿಲ್ಲ. ಮೆಸ್ಸಿಯವರ ಕಾಲಿನಒದೆತದ ಚಮತ್ಕಾರ, ಕಣ್ಣಿಗೆ ತಪ್ಪಿಸಿ, ಕಾಲಿನಬಳಿಯಲ್ಲೇ ಇದ್ದರೂ, ಅದನ್ನು ಮುಟ್ಟಲೂ ಆಗದಂತೆ, ಚಾಣಾಕ್ಷಣತನದಿಂದ, ಮುಂದುವರೆಸಿಕೊಂಡುಹೋಗಿ, ತಾವು 'ಗೋಲ್ ಪೆಟ್ಟಿಗೆ 'ಯಲ್ಲಿ ತೂರಿಸಲು ಸಾಧ್ಯವಾಗದಿದ್ದರೂ,  ಪಾಸ್ ಕೊಟ್ಟು ಟೂರ್ನಿಯಲ್ಲಿ ಹಲವು ಗೋಲುಗಳಿಗೆ ಹಾದಿಯೊದಗಿಸಿಕೊಟ್ಟಿದ್ದ ಮೆಸ್ಸಿ ಅವರ ಒಂದೆರಡು ಪ್ರಯತ್ನಗಳನ್ನು ಎದುರಾಳಿ ಗೋಲಿ ತಡೆದರು.

 

’ಮೆಸ್ಸಿ ’ಯವರ ಕಾಲಿನ ಜಾದು, ಮತ್ತು ಚೆಂಡನ್ನು ನಿಯಂತ್ರಿಸಿ ಮುಂದುವರೆಯುವ ತಂತ್ರಗಳ ಬಗ್ಗೆ, ಒಂದು 'ವೈಜ್ಞಾನಿಕ ವಿಶ್ಲೇಷಣೆ,' ನಡೆಸುತ್ತಿದ್ದಾರೆ. 

ಮುಂದೆ 'ಅರ್ಜೆಂಟೀನಾ ತಂಡ ಜರ್ಮನಿ' ಜೊತೆ, ಎಂಟರಘಟ್ಟದ ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ.

 

 

-ಕೃಪೆ : ಪ್ರಜಾವಾಣಿ ದಿನಪತ್ರಿಕೆಯ, " ಫೊಟೊ ಆಲ್ಬಮ್ "