ನಾನು ಕಂಡ ಕರಾಳ ದಿನ
ಬರಹ
ಸುಡು ಸುಡುವ ಬಿಸಿಲಿನಲಿ ಸರ ಸರನೇ ಸರಿಯುತ,
ಸರಳ ಮನಸ್ಸಿನ ಮುದಿಯೊಂದು,
ಸರಾಗನೇ ಮರಬುಡಕೆ ಮೈಮರೆತು ಬಂದಿತು,
ಹಸಿವು ಬಾಯರಿಕೆ ಕಂಠಕ್ಕೆ ಮಿಲುಕಿ,
ಕಣ್ತುಂಬ ಕವಿದಿರುವ ಕಣ್ಣೀರನು ಚಿಮ್ಮುತ,
ಕನ್ನಡಕವನು ತೆಗೆದು ಕಣ್ಣನ್ನೋರೆಸಿ
ಕವಿಯಂತೇ ಕವನವನು ಹಾಡಿದಳು...
ಕಣ್ಮರೆಯಾಗದ ಆ ಸುಡುಬಿಸಿಲು ಕೆಂಡದಂತೆ ಉರಿಯೂತ್ತ,
ಕನಿಷ್ಟ ಬಟ್ಟೆಯನ್ನುಟ್ಟ ಆ ಮುದಿಯು
ಬೆರಳ್ ತುದಿಯಿಂದ ಬೇವರನ್ನೋರೆಸುತ್ತ
ಕೈಕೊಟ್ಟ ಹಣೇಬರಹ ಕಾಲ್ಗಬಿದ್ರು ಬರದೆಂದು
ಕೈಯ್ಯನ್ನಾಡಿಸುತ ಕಣ್ಮುಚ್ಚಿ ಬಿಟ್ಟಳು....