ಮನದೊಳ ಮಾತು...

ಮನದೊಳ ಮಾತು...

ಬರಹ

(ಇಲ್ಲಿ ಕುರುಡು ಹೆಣ್ಣೊಂದನು ಕಣ್ಣೆಂದು ಕರೆಯಲಾಗಿದೆ)


ಕರೆಯಿತು ಆ ಕಣ್ಣು ನನ್ನನ್ನ, ಕನಿಕರಿಸಿತು ನನ್ನ ಎದೆಯನ್ನ 
ಕಣ್ಣಿರೇ ಕಂಡ ಆ ಕಣ್ಣಿಗೆ ಕವನ ಬರೆಯಲು ನಾ ಹೋದೆ,
ಆ ಕಣ್ಣಿನ ಕಂಬನಿ ನೋಡಿ, ನಾ ಕಣ್ಣಿರೆರೆದೆ.
ಆ ಕಣ್ಣಿಗೆ ರೆಪ್ಪೆಯ ಆಸರೆ ಬೇಕಿತ್ತು,
ಬಾಯಲ್ಲಿ ಹೇಳದೆ ಆ ಕಣ್ಣು ಹೆದರಿತ್ತು,
ನಾನಾಗಲು ಹೋದೆ ಆ ಕಣ್ಣಿಗೆ ರೆಪ್ಪೆಯು,
ಕನಿಕರಿಸಿ ಕರೆಯಿತು ಆ ಕಣ್ಣು ನನ್ನ ಹೃದಯವ,
ಕತ್ತಲೆಯನ್ನೇ ಕಂಡಿರುವ ಆ ಕಣ್ಣಿಗೆ ಕನಸು ಕೊಡಲು ಹೋದೆ,
ಖುಷಿಯಿಂದ ಕೂಡಿರುವ ಕಂಬನಿಯನ್ನು ಆ ಕಣ್ಣಲ್ಲಿ ನಾ ಕಂಡೆ,
ಕಸದಂತೆ ಮಾಡಿದರು ಜನ ಆ ಕಣ್ಣನ್ನ, 

ಮುಸುಕಿನಲ್ಲಿ ಹಿಸುಕಿದರು ಆ ಕಣ್ಣಿನ ಮನಸನ್ನ, 
ಮನದೋಳದ ಆಸೆ ಕಣ್ಣಲ್ಲೇ ಕರಗಿ ಹೋಯಿತು,
ಕಂಬನಿ ತುಂಬಿದ ಈ ಕಣ್ಣು ಸದಾ ಆ ಕಣ್ಣನ್ನೇ ಕಾಯತೊಡಗಿತು .....