ಜಾಗ್ರತೆಯಿಂದಿರಿ ಜಾಣರಾಗಿ ಬಾಳಿ..!..

ಜಾಗ್ರತೆಯಿಂದಿರಿ ಜಾಣರಾಗಿ ಬಾಳಿ..!..

 

ಎಲೈ ಪುಟ್ಟ ಮರಿಗಳೇ

ನೀವು ತಬ್ಬಲಿಗಳಾಗಿಲ್ಲ.

ಯೋಚಿಸದಿರಿ !

ನಿಮಗೂ ಸಿಗುತ್ತದೆ ಒಂದು ನೆಲೆ.

 

ನಿಮ್ಮಯ ಅಳುಕು

ನಿಮ್ಮ ಪುಟ್ಟ ಕಂಗಳಲ್ಲೆ ಕಾಣುತಿದೆ

ಭಯಗೊಳ್ಳದಿರಿ

ನಮ್ಮಲ್ಲಿ ನೀವು ಕ್ಷೇಮ.

 

ಲೈಲಾ ಮಾರುತವಾದರೇನು ?

ತೋ ಎಂದು ಸುರಿವ

ಮಳೆಯಾದರೇನು ?

ಬೀಸಿ ಬೀಳಿಸುವ ಗಾಳಿಯಾದರೇನು ?.

 

ನಿಮ್ಮಿಂದ ನಿಮ್ಮ ಹೆತ್ತವರು

ದೂರವಾಗಿರಬಹುದು....!

ನಿಮ್ಮಯ ರಕ್ಷಣೆಗೆ ನಾವಿದ್ದೇವೆ.

 

ನಿಮ್ಮ ಕುರುಹಿಗೆ

ಈ ಪುಟ್ಟ ಗೂಡೇ ಸಾಕ್ಷಿ.

ನಿಮ್ಮಯ ಪಾಡು

ಸ್ವಲ್ಪ ಏರು ಪೇರಾದರೂ

ತಿಂಡಿಗೇನು ಇರುವುದಿಲ್ಲ ಚಿಂತೆ..

 

ಈಗಲೇ ಕಾಡು ಸೇರಲು

ಪಡದಿರಿ ತವಕ.

ಸ್ವಲ್ಪವಾದರು ಬಲಿಯಲಿ

ನಿಮ್ಮಯ ರೆಕ್ಕೆ ಪುಕ್ಕ.

ಆದಮೇಲೆ ನೋಡುವ

ನಿಮ್ಮಯ ಚಳಕ.

 

ಸಿಕ್ಕಬಹುದು ನಿಮ್ಮಯ ಹೆತ್ತವರು.

ಹುಡುಕಬೇಕಿದೆ ?.

ಕಾಯಬೇಕಿದೆ ?.

ನೊಂದು ಸುರಿಸದಿರಿ ಕಣ್ಣೀರು.

 

ನಿಮ್ಮಂತೆ ನಿಮ್ಮ

ಹಲವಾರು ಬಂದುಗಳಿಗೆ

ಇದೇ ಕಷ್ಟವೇ

ಒದಗಿ ಬಂದಿರಬಹುದು.

 

ನಮಗೆ ಕಂಡದ್ದು ನೀವು ಮಾತ್ರ.

ಇನ್ನುಳಿದವುಗಳೆಲ್ಲ

ಕ್ಷೇಮವಾಗಿರಲೆಂದು ಹರಸುತ್ತಾ !.

ದೇವರಲ್ಲಿ ಪ್ರಾಥಿಸೋಣ .

 

ಮುಂದಿನ ಸಲವಾದರೂ

ಸ್ವಲ್ಪ ಕ್ಷೇಮದಿಂದಿರಿ.

ತೋ ಎಂದು ಸುರಿವ

ಮಳೆಯಿರಲಿ.

ಅಬ್ಬರಿಸಿ ಸಿಡಿವ ಸಿಡಿಲಿರಲಿ.

ಮರಗಳನ್ನೆ

ಉರುಳಿಸುವ ಗಾಳಿಯಲಿ.

 

ಈಗ ನಿಮಗೊದಗಿಬಂದ ಸ್ಥಿತಿ !

ನಿಮ್ಮ ಮರಿಗಳಿಗೂ

ಮರುಕಳಿಸಬಹುದು.

ಜಾಗ್ರತೆಯಿಂದಿರಿ !. ಜಾಣರಾಗಿ ಬಾಳಿ !.

 

                                                 ವಸಂತ್

 

ಚಿತ್ರಕೃಪೆ. ಹರ್ಷವರ್ಧನ್

Rating
No votes yet

Comments