ಪ್ರವಾಸದ ಜೊತೆ ಸಂಪದಿಗರ ಬೇಟಿ

ಪ್ರವಾಸದ ಜೊತೆ ಸಂಪದಿಗರ ಬೇಟಿ

ಕಳೆದ ಶನಿವಾರ ಮತ್ತುಭಾನುವಾರ ಹೊರನಾಡು,ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ ಬೇಟಿ ಮಾಡಲು ಪ್ಲಾನ್ ಮಾಡಿದ್ದು ಅದರಂತೆ ಹೊರೆಟೆವು ಹೊರಡುವುದಕ್ಕೆ ಮುಂಚಿತವಾಗಿ ಹೊರನಾಡಿನ ಸಂಪದಿಗರಾದ ರಾಘವೇಂದ್ರ ನಾವಡರಿಗೆ ಪೋನಾಯಿಸಿ ನನ್ನ ಪರಿಚಯ ಮಾಡಿಕೊಂಡೆ ಅವರ ಸಂತಸದಿಂದ ಹೊರನಾಡಿನಲ್ಲೆ ಶನಿವಾರ ರಾತ್ರಿ ವಾಸ್ತವ್ಯ ಹೂಡಲು ತಿಳಿಸಿದರು ನನಗಂತು ತುಂಬಾನೇ ಖಷಿ ಆಯಿತು ಎಂಗೂ ಸಂಪದದವರನ್ನು ಹೊರನಾಡಿನಲ್ಲಿ ಬೇಟಿ ಮಾಡಬಹುದು ಅಂತ ಅದರಂತೆ ಪ್ಲಾನ್ ಮಾಡಲು ಹೋದ್ರೆ ನನ್ನ ಜೊತೆಗೆ ಪ್ರಯಾಣಿಸಿದ ಗೆಳೆಯರು ಅಲ್ಲಿ ಬೇಡ ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡೋಣ ಎಂದರು ಅದರಂತೆ ನಾವಡರಿಗೆ ಮತ್ತೆ ಪೋನಾಯಿಸಿ ಹೊರನಾಡಿನಲ್ಲಿ ವಾಸ್ತವ್ಯ ಹೂಡುವುದಿಲ್ಲ ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡುವುದಾಗಿ ತಿಳಿಸಿದೆ ಅವರಲ್ಲಿ ಸ್ವಲ್ಪ ಬೇಸರದ ಮಾತುಗಳು ಕೇಳಿಸಿತು.

 

ಅಂತು ರಾತ್ರಿ ಎಂಟರ ಸಮಯಕ್ಕೆ ಹೊರನಾಡಿಗೆ ತಲುಪಿದೆವು ಸಿಕ್ಕಾಪಟ್ಟೆ ಮಳೆ ಬೀಳುತ್ತಿತ್ತು ನಾವಡರನ್ನು ಸಂಪರ್ಕಿಸಲು ಪೋನು ತೆಗೆದರೆ ನೆಟ್ ವರ್ಕ್ ಇಲ್ಲ ಅಲ್ಲಿ ಬರಿ BSNL ಮಾತ್ರ ಕೆಲ್ಸ ಮಾಡುತ್ತದೆ. ಕಾರಿನಿಂದ ಇಳಿದು ಮಳೆಯಲ್ಲಿಯೇ ಓಡಿ ಹೋಗಿ ಕಾಯಿನ್ ಬಾಕ್ಸ್ ನಿಂದ ನಾವಡರಿಗೆ ಪೋನ್ ಮಾಡಿದೆ ಅವರು ಸಂತಸದಿಂದ ಅವರಿರಿವ ಜಾಗ ತಿಳಿಸಿದರು ಸರಿ ಮೊದಲು ದೇವರ ದರ್ಶನ ಪಡೆದು ನಂತರ ಬೇಟಿ ಮಾಡೋಣ ಅಂತ ದೇವರ ದರ್ಶನಕ್ಕೆ ಹೋದರೆ ನಾವಡರು ನನ್ನನ್ನ ದೇವಾಲಯದ ಆವರಣವೆಲ್ಲಾ ಹುಡುಕಿಬಿಟ್ಟಿದ್ದರು. ದರ್ಶನ ಮಾಡಿ ನಾವಡರನ್ನು ಬೇಟಿ ಮಾಡಿದೆ ಅವರು ನಗುತ್ತಾ ಮಾತನಾಡಿಸಿದ್ರು ಅವರ ಮಾತುಗಳು ಅವರ ನಡೆ, ನುಡಿ ನನಗಂತೂ ಸಂತಸ ನೀಡಿತು. ಅವರೇ ಕುದ್ದಾಗಿ ನಮ್ಮನ್ನೆಲ್ಲಾ ನೇರವಾಗಿ ಊಟಕ್ಕೆ ಕರೆದುಕೊಂಡು ಹೋದರು. ಊಟ ಮಾಡಿ ಮತ್ತೆ ಅವರನ್ನು ಬೇಟಿ ಮಾಡಿ ಹೋರಗೆ ಬಂದ್ರೆ ಅವರು ನಮ್ಮೊಟ್ಟಿಗೆ ಹೊರ ಬಂದರು ಅಲ್ಲೆ ಪಕ್ಕದಲ್ಲಿ ಬಾದಾಮಿ, ಏಲಕ್ಕಿ, ಟೀಪುಡಿ, ಕಾಪಿ ಪುಡಿ ಖರೀದಿಸಲು ಹೋದ್ರೆ ಅವರು ಸಹ ನಮ್ಮೋಟ್ಟಿಗೆ ಬಂದು ಡಿಸ್ಕೌಂಟ್ ಕೊಡಿಸಿದರು. ಎಲ್ಲಾವನ್ನೂ ಖರೀದಿ ಮಾಡಿ ಕಾರು ಕಡೆ ನಾವಡರ ಜೊತೆ ಹೊರೆಟೆವು ದಾರಿಯ ಉದ್ದಕ್ಕೂ ಸಂಪದದ ಬಗ್ಗೆ ಸಂಪದ ಬಳಗದ ಬಗ್ಗೆ ಚರ್ಚೆ ನಡೆಯಿತು ನಾವಡರು ಮತ್ತೊಮ್ಮೆ ಬರಬೇಕೆಂದು ಅವರ ಮನೆಗೆ ಹೋಗಿ ಎಲ್ಲರನ್ನೂ ಬೇಟಿ ಮಾಡಿ ಹೋಗಬೇಕೆಂದು ತಿಳಿಸಿದರು ಅದರಂತೆ ಬರುವುದಾಗಿ ತಿಳಿಸಿ ಅಲ್ಲಿಂದ ಕಾರು ಏರಿ ಧರ್ಮಸ್ಥಳದ ಕಡೆ ಹೊರೆಟೆವು ಕಾರಿನಲ್ಲಿದ್ದವರೆಲ್ಲಾ ನಾವಡರ ಬಗ್ಗೆ ಅವರು ಮಾತನಾಡುವ ಶೈಲಿ ನಡೆ ನುಡಿ ಬಗ್ಗೆ ಮತನಾಡಿದ್ದೆ ಮಾತನಾಡಿದ್ದು   :)

 

ಗಣಪತಿ ದೇವಾಲಯದಲ್ಲಿ ಘಂಟೆಗಳು

 

 

ಧರ್ಮಸ್ಥಳದಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವ ಮಾರ್ಗದಲ್ಲಿ ಪ್ರಸಿದ್ದವಾದ ಗಣಪತಿಯ ದೇವರು. ಇಲ್ಲಿ ಎಷ್ಟೆ ಮಳೆ ಬಂದ್ರು ಸಹ ಮೂರ್ತಿ ಮಾತ್ರ ನೆನೆಯುವುದಿಲ್ಲವಂತೆ

 

ಗಣಪತಿಯ ಆಲಯದ ಸುತ್ತಲೂ ನೂರಾರು ಘಂಟೆಗಳು

 

 

 

Rating
No votes yet

Comments