ಕಾಡ್ ಅಳ್ಟೆ :

ಕಾಡ್ ಅಳ್ಟೆ :

ಬರಹ

ಎಂಟಣ್ಣ : ಎಂಗಿದಿಯಪ್ಪೊ ಎನ್ಕ್ಟೇಸಪ್ಪ ?

ಎನ್ಕ್ಟೇಸಪ್ಪ : ಚೆನ್ನಾಗಿದಿನಪ್ಪ. ನೀನು ಏನು ಇವತ್ತು ದರ್ಶನ ಕೊಟ್ಟೆ ?

ಎಂಟಣ್ಣ : ಟ್ಯಾಕ್ಟ್ರು ಕೆಟ್ಟೋಗದೆ. ಮ್ಯಕ್ನಿಕ್ಕು ಇನ್ನೂ ಬಂದಿಲ್ಲ.

ಎನ್ಕ್ಟೇಸಪ್ಪ : ಸರಿ ಕಣಪ್ಪ. ಅದರಿಂದ ಬಂದಿದೀಯ ಅಂತ ಹೇಳು !

ಎಂಟಣ್ಣ : ಓಗ್ಲಿ ಬಿಡಪ್ಪ ಎಲ್ಲ ಎಡವಟ್ಟು. ಕುಮಾರ 'ಪ್ಯಾಟೆ'ಗೊದೊನು ಇನ್ನು ಬಂದಿಲ್ಲ. ನನ್ ತಲ್ಯಾಮೇಗೆ ಬಿದ್ದೈತೆ ನೋಡು ಎಲ್ಲ !

ಎನ್ಕ್ಟೇಸಪ್ಪ : ಸರಿ ಕೂತ್ಕೊ. ಕಾಫಿ ಕುಡ್ಕಂಡ್ ಹೋಗು. ಇನ್ನೇನ್ 'ಗುಪ್ತ ಗಾಮಿನಿ' ಬರತ್ತೆ. ನೋಡುವಂತೆ !

ಎಂಟಣ್ನ: ಕಾಪಿ ಉ.. ಸರಿಏಳ್ದೆ. ಆದ್ರೆ ಆ ಗುಪ್ತಗಾಮ್ನಿ ನೋಡಾಕಿಲ್ಲ ಮಾರಾಯ. ಅಲ್ಲ ಕಣಪ್ಪೊ ಸೀನಣ್ಣ ಅಯಮ್ಮನ್ನ (ಅವರೆಂಡ್ರನ್ನ) ಯದ್ವ ತದ್ವ ಬೈತನಲ್ಲೊ ಮರಯ. ಎಸ್ಸೆಲ್ಸಿ, ಗುಬೆ ಇನ್ನು ಎನೆನೊ !

ಎಂಟಣ್ಣ : ನಮ್ಮೀರಿ ಸಿಟ್ಮಾಡ್ಕಂಡವ್ಳೆ. ಅಂತ ಸಿರಿಲ್ ನೋಡ್ನೋಡಿ ನಿವು ನನ್ನ ಇಚಾರ್ಸ್ಕಂಡ್ರೆ ಎಂಗೆ ಅಂತವ್ಳೆ !

ಎಂಕ್ಟೇಸಪ್ಪ : ನಿನ್ಹೇಳೋದು ಸರಿಕಣಪ. ಸಂಧ್ಯ ಪೈ ಇದನ್ನೆಲ್ಲ ನೊಡಿ ಇತ್ಯರ್ಥ ಮಾಡೊದ್ಬೆಡ್ವ ?

ಅಲ್ಲಕಣ್ವೆಂಕ್ಟೇಸಪ್ಪ ನಿನೆ ವಸಿ ಎಚ್ನೆ ಮಾಡು. ಕುಮಾರ್ನ ಎಂಡ್ರು ಬಂದ್ರೆ ಈರೀಗೆ ನಾನ್ ಇಂಗೆ ಬೈದ್ರೆ ಎಂಗೆ ಅಂತ.

ಎನ್ಕ್ಟೇಸಪ್ಪ : ಕಾಫಿ ಬಂತು ಕುಡ್ಯಪ್ಪ. ಯಾರ್ಯಾರ್ಗೆ ಅಂತ ಹೇಳೋದು ತಿಳಿತಿಲ್ಲ. ಅಂದಂಗೆ ಅಮ್ಮನ್ ಪಾತ್ರ ಸರಿಯಾಗಿಯೇನಪ್ಪ ?

ಎಂಟಣ್ಣ : ಒಳ್ಳೇ ಆಸಾಮಿ ನೀನು. ಅವರಿಗೇನಾಗೈತೆ. ನನ್ಜುಂಡೇಸ್ವರನ್ನ ನೆನಸದ್ ದಿನ ಎನಾದ್ರು ಐತ ಏಳು. ಬಲು ಒಳ್ಳೆ ಎಣ್ಮಗ್ಳಪ್ಪ ಆಯಮ್ಮ

ಎಂಕ್ಟೇಸಪ್ಪ : ಹಾಗಾದ್ರೆ ಹಾಕ್ನೋಡಲ್ವೇನಪ್ಪ ?

ಎಂಟಣ್ಣ : ಆತು. ಓ ನೆಪ್ಪಾಯ್ತು ಕಣಪ್ಪ. ಈರಿ ಏಳಿದ್ಲು ಒಸ ತರಂಗ ಇನ್ನೂ ಬಂದಿಲ್ಲ. ನಿಮ್ಮನೆಗೇನಾದ್ರು ಬಂದೈತೇನೊ ನೊಡಿ ತನ್ನಿ ಅಂತವ !

ಎನ್ಕ್ಟೇಸಪ್ಪ : ಹೌದು ಬಂದಿದೆ ಕಣಪ್ಪ. ೨೫ ವರ್ಷ ಆಯ್ತಲ್ಲ. ತೊಗೊ ನಿದಾನ್ವಗಿ ಕೊಡು.

ಎಂಟಣ್ಣ : ಆಯ್ತು. ನಾನ್ ಒಳ್ಟೆ ಕಣಪ್ಪೊ. ತರಂಗ ಕೈನಲ್ಮಡಿಕೊಡು ಅಲ್ಲೆನ್ಮಾಡ್ತಿದ್ದೆ ಅಂದಾಳು.

ಎನ್ಕ್ಟೇಸಪ್ಪ : ಹ ಹ ಸರಿಯಪ್ಪ. ಓಗ್ಬಾ. ಬರ್ತಾ ಇರು. ಮನ್ಯಾಗಾದ್ರು ನೋಡ್ ಪರ್ವಾಗಿಲ್ಲ !