ರಕ್ತ ಚಿಮ್ಮಿ ಮುಗುಳು ಅರಳಿದೆ

ರಕ್ತ ಚಿಮ್ಮಿ ಮುಗುಳು ಅರಳಿದೆ

ರಕ್ತ


ಯಾವ ಮೋಡಿಕಾರ ಬಂದ, ಯಾವ ಕುಂಚವನ್ನು ತಂದ


ಬೋಳು ಬೋಳು ಮರ ಬರೀ ಅಸ್ಥಿಪಂಜರ


ಬಣ್ಣ ಬಳಿದು ಜೀವ ತುಂಬಿ ಎಲ್ಲಿ ನೋಡೆ ಅಲ್ಲಿ ಹಸಿರು


ಹೂವು ಗುಲ್ಮೋಹರ್, ತಲೆಯೆತ್ತೆ ರಕ್ತಾಂಬರ


ಬೇಂದ್ರೆ ಅಜ್ಜ ನುಡಿದ ಮಾತು ಎಷ್ಟು ದಿಟ


ಹೂತ ಹುಣಸಿ ಒಂದು ಸಾಲದೆ ಮನದಿ ಭಾವ ಜಲವುಕ್ಕಲು


ಅರಳ ಹೊರಟ ಮೊಲ್ಲೆ ಗಮಲು ಸಾಲದೆ


ಜಡವ ಕಳೆದು ಜೀವ ಸೆಲೆಯನೊಡೆದು ಬದುಕನೆದುರಿಸಲು


ಆಟ ಊಟ ಬೇಟ ಕೂಟ ಮಾಟ ಮಾಡಿದೆ


ಮಣ್ಣ ಕಣದಿ ರಕ್ತ ಚಿಮ್ಮಿ ಮುಗುಳು ಅರಳಿದೆ


ಏನು ಲೀಲೆ ಏನು ಜಾಲ ಏನನರಿಯೆ ನಾನು


ಕೈಯ ಹಿಡಿದು ನನ್ನ ನಡೆಸು ಬೇಡಿಕೊಳುವೆನು


 


------


ಡಾ.ನಾ.ಸೋಮೆಶ್ವರ


www.yakshaprashne.org


http://upload.wikimedia.org/wikipedia/commons/3/33/Flowers_delhi.jpg

Rating
No votes yet

Comments