ಕ್ವಾರ್ಟರ್ ಫೈನಲ್‌ಗೆ ಪೆರುಗ್ವೆ !

ಕ್ವಾರ್ಟರ್ ಫೈನಲ್‌ಗೆ ಪೆರುಗ್ವೆ !

ಬರಹ

ಬ್ರೆಸಿಲ್, "೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ !
ಐದು ಬಾರಿಯ ವಿಶ್ವ  ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ ,  19 ನೇ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ ನ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. (ಬ್ರೆಜಿಲ್ ೩  ಚಿಲಿ ೦)
ಜೋಹಾನ್ಸ್‌ಬರ್ಗ್  ನ,  "ಎಲ್ಲಿಸ್ ಪಾರ್ಕ್ ಕ್ರೀಡಾಂಗಣ" ದಲ್ಲಿ ಸೋಮವಾರ (೨೮)  ರಾತ್ರಿ ನಡೆದ ಏಕಪಕ್ಷೀಯವಾಗಿದ್ದ "ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ" ದಲ್ಲಿ ಬ್ರೆಜಿಲ್ ತಂಡ ೩-೦ ಗೋಲುಗಳಿಂದ ಚಿಲಿ ತಂಡವನ್ನು ಪರಾಭವಗೊಳಿಸಿತು. ಬ್ರೆಸಿಲ್ ಮುಂದೆ "ರಂಗನ ಮುಂದೆ ಸಿಂಗನೇ" ಎಂಬಂತೆ, ಎಲ್ಲರಿಗೂ ಆಶ್ಚರ್ಯವನ್ನು ತಂದ "ಚಿಲಿ ಬಣ " ಬೇರೆವರಜೊತೆಯಲ್ಲಿ ಆಡಿ ಮೆರೆದದ್ದು ಇದೇ ಟೀಮೇ, ಎನ್ನುವಷ್ಟು ಕಳಪೆ ಪ್ರದರ್ಶನವನ್ನು ಕೊಟ್ಟು  ಹೀನಾಯವಾಗಿ ಸೋತಿತು.
ವಿರಾಮದ ವೇಳೆಗೆ ೨-೦ ಗೋಲು ಗಳಿಂದ ಮುಂದಿದ್ದ ವಿಜಯಿ ತಂಡದ "ಜುವಾನ್ " (೩೫ ನೇ ನಿಮಿಷ), ಲೂಯಿಸ್ ಫ್ಯಾಬಿಯಾನೊ (೩೮ ನೇ ನಿ.) ಹಾಗೂ ರಾಬಿನೋ (೫೯ ನೇ ನಿ.) ಚೆಂಡನ್ನು ಗುರಿ ಸೇರಿಸಿ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.  ಶುರುವಿನಲ್ಲಿ  ಸ್ವಲ್ಪ  ಇರುಸು-ಮುರುಸಿನ ಆಟಪ್ರದರ್ಶನಮಾಡಿದರೂ,   ಬ್ರೆಜಿಲ್ ತಂಡದವರಿಗೆ ಮುಂದಿನ ಲಕ್ಷದ ಸ್ಪಷ್ಟ ಅರಿವಿತ್ತು. ಅದರಂತೆ  ಕರಾರುವಾಕ್ಕಾಗಿ  ಆಟವಾಡಿದ ಮಾಜಿ ಚಾಂಪಿಯನ್ನರಿಗೆ, ೩೫ ನೇ ನಿಮಿಷದಲ್ಲಿ ಮೊದಲ ಜಯ ಲಭ್ಯವಾಯಿತು. 
ಕಾರ್ನರ್‌ನಿಂದ "ಮೈಕಾನ್ "ಒದ್ದ ಚೆಂಡನ್ನು "ಜುವಾನ್" ಅವರು "ಹೆಡ್" ಮಾಡಿ ಗುರಿ ಮುಟ್ಟಿಸಿದರು. ಚಿಲಿ ತಂಡದ ನಾಯಕ ಹಾಗೂ ಗೋಲಿ, "ಕ್ಲಾಡಿಯೊ ಬ್ರಾವೊ," ಚೆಂಡನ್ನು ತಡೆಯುವುದಕ್ಕೆ ಉತ್ತಮ ಪ್ರಯತ್ನ  ಹಾಕಿದರಾದರೂ ಸಫಲರಾಗಲಿಲ್ಲ. 
೩  ನಿಮಿಷಗಳ ತರುವಾಯ ಬ್ರೆಜಿಲ್ ಗೋಲಿನ ಅಂತರವನ್ನು  ಹಿಗ್ಗಿಸಿಕೊಂಡಿತು. ಎಡ ವಿಂಗ್‌ನಿಂದ "ರಾಬಿನೊ" ನೀಡಿದ ಪಾಸ್ ಅನ್ನು ಪಡೆದ "ಕಾಕಾ," ಗೋಲು ಆವರಣದಲ್ಲಿ ಚೆಂಡಿಗಾಗಿ, ಕಣ್ಣುಗುಡ್ಡೆಗಳನ್ನು ಅತ್ತ ಇತ್ತ ಚಲಿಸದೆ,  ಕಾಯುತ್ತಿದ್ದ "ಲೂಯಿಸ್ ಫ್ಯಾಬಿಯಾನೊ" ಗೆ ನೀಡಿದರು. "ಫ್ಯಾಬಿಯಾನೊ" ತಮಗೆ ಒದಗಿದ ಅವಕಾಶದಲ್ಲಿ  ನಿಖರವಾಗಿ ಚೆಂಡನ್ನು ಗುರಿ ಸೇರಿಸಿ "ಸಾಂಬಾ ಬಾಯ್ಸು"  ಮೊಗದಲ್ಲಿ ಹರ್ಷದ ಮುಗುಳ್ನಗೆಯನ್ನು ಹೊರಸೂಸುವಂತೆ  ಮಾಡಿದರು. 
ಬ್ರೆಜಿಲ್ ತಂಡದವರು  "ಹಾಫ್ ಟೈಮ್" ನಬಳಿಕವೂ  ತಮ್ಮ ಬಿರುಸಿನ ಶರ-ವೇಗದ  ಆಟವನ್ನು  ಆಡುವುದಕ್ಕೆ ಆರಂಭಿಸಿದರು. ೪೭  ನೇ ನಿಮಿಷದಲ್ಲಿ "ಕಾಕಾ,"  "ಫೌಲ್" ಮಾಡಿದ್ದರಿಂದ  ರೆಫರಿ, ಇಂಗ್ಲೆಂಡ್‌ನ "ಹೊವಾರ್ಡ್ ವೆಬ್" ಅವರಿಂದ "ಹಳದಿ ಕಾರ್ಡ್‌" ನ ಎಚ್ಚರಿಕೆ ಪಡೆದರು. 
ಇದಕ್ಕೆ ಸೊಪ್ಪುಹಾಕದ  "ಕಾಕಾ" ಎದುರಾಳಿ ಅಂಕಣದತ್ತ ದಾಳಿ ಮಾಡುತ್ತಲೇ ಇದ್ದರು. ೫೯ ನೇ ನಿಮಿಷದಲ್ಲಿ "ಬೆನಿಫೀಸಿಯಾ ರಾಮರೆಸ್"  ಪಾಸ್‌ನಿಂದ ಬಂದ ಚೆಂಡನ್ನು "ರಾಬಿನೋ" ರವರು ಯಶಸ್ವಿಯಾಗಿ ಗುರಿ ಸೇರಿಸಿ, ತಮ್ಮ ತಂಡ ೩-೦ ಯಿಂದ ಗೆಲ್ಲುವಂತೆ ಮಾಡಿದರು. 
ಆಟ ಕೊನೆಯ ಹಂತ ತಲುಪುತ್ತಿದ್ದಂತೆ ಚಿಲಿ ತಂಡದವರು ತಮ್ಮ ಆಟದ  ವೇಗವನ್ನು   ಹೆಚ್ಚಿಸಿ ಆಡುವುದಕ್ಕೆ ಆರಂಭಿಸಿದರು. ೭೫ ನೇ ನಿಮಿಷದಲ್ಲಿ ಚಿಲಿಯ "ಸುವಾಜೊ" ಗುರಿಯತ್ತ ಒದ್ದ ಚೆಂಡನ್ನು ಬ್ರೆಜಿಲ್ ಗೋಲಿ, "ಜೂಲಿಯೊ ಸೀಸರ್" ತಡೆದರು. ಆಟ ಇನ್ನೇನು ಮುಗಿಯಲು ಕೇವಲ ೧೦  ನಿಮಿಷಗಳಿದ್ದಾಗ, ಚಿಲಿಯ ಬದಲಿ ಆಟಗಾರ, "ರಾಡ್ರಿಗೊ ಮಿಲ್ಲರ್" ಅಪಾಯಕಾರಿ ಆಟವಾಡಿದ್ದರಿಂದ, "ಹಳದಿ ಕಾರ್ಡ್" ನ್ನು ಕಾಣುವಂತಾಯಿತು.   
ಬ್ರೆಜಿಲ್ ತಂಡ ಮೊದಲ ಗೋಲು ಗಳಿಸುವುದಕ್ಕೆ ಕೊಂಚ ತಡಕಾಡಿದರೂ  ಒಂದು ಗೋಲು ಸ್ಕೋರ್ ಬೋರ್ಡ್‌ನಲ್ಲಿ ದಾಖಲಾಗುತ್ತಿದ್ದಂತೆಯೇ  ಹಳೆಯ ಹುಲಿಗಳು,  ದಾಳಿಯ ವೇಗ ಹೆಚ್ಚಿಸಿದರು. "ಡುಂಗಾ ಗರಡಿಯಲ್ಲಿ ಪಳಗಿದ ಶಿಷ್ಯರನ್ನು" ತಡೆಯುವುದಕ್ಕೆ ಚಿಲಿಯ ಘಟಾನುಘಟಿಗಳಿಗೂ ಸಾಧ್ಯವಾಗದೆ ಹೋಯಿತು. "ಚಿಲಿ", ಸಾಕಷ್ಟು ಕಾರ್ಯತಂತ್ರಗಳನ್ನು ರೂಪಿಸಿತಾದರೂ ಸಫಲ  ವಾಗಲಿಲ್ಲ.
೨.  ಕ್ವಾರ್ಟರ್ ಫೈನಲ್‌ಗೆ ಪೆರುಗ್ವೆ
ಪ್ರಿಟೋರಿಯಾ ದಲ್ಲಿ ಜರುಗಿದ, ಪೆರುಗ್ವೆ ಮೊಟ್ಟ ಮೊದಲ ಬಾರಿ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಂಭ್ರಮದ ಕ್ಷಣವಾಗಿತ್ತು. ಈ ಬಾರಿ ವಿಶ್ವಕಪ್‌ನ ನಾಕ್‌ಔಟ್ ಹಂತದಲ್ಲಿ ಹೆಚ್ಚುವರಿ ಸಮಯ ಹಾಗೂ ಪೆನಾಲ್ಟಿ ಶೂಟ್‌ಔಟ್‌ಗೆ ಮೊರೆ ಹೋದ ಮೊದಲ ಪಂದ್ಯವಿದು
ಮಂಗಳವಾರ ಲಫ್ಟಾಸ್ ವರ್ಸ್‌ಫೆಲ್ಡ್ ಕ್ರೀಡಾಂಗಣದಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಮಣಿಸಿ ಪೆರುಗ್ವೆ ಈ ಸಾಧನೆ ಮಾಡಿದೆ. ಈ ತಂಡ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ೫-೩ ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿತು. 
ಶೂಟ್‌ಔಟ್‌ನಲ್ಲಿ ಪೆರುಗ್ವೆ ಪರ ಬೆರೆಟ್ಟೊ, ಲುಕಾಸ್ ಬ್ಯಾರಿಯೊಸ್, ರಿವೆರೊಸ್, ನೆಲ್ಸನ್ ವಾಲ್ಡೆಜ್ ಹಾಗೂ ಆಸ್ಕರ್ ಕಾರ್ಡೊಜೊ ಗೋಲು ಗಳಿಸಿದರು. ಜಪಾನ್‌ನ ಯಶುಹಿಟೊ ಎಂಡೊ, ಹಸೇಬ್ ಹಾಗೂ ಹೊಂಡಾ ಚೆಂಡನ್ನು ಗುರಿ ಸೇರಿಸಿದರು. ಆದರೆ ಈ ತಂಡದ ಮೂರನೇ ಶೂಟ್‌ಔಟ್‌ನಲ್ಲಿ ಯೂಚಿ ಕೊಮನೊ ವಿಫಲರಾದರು. ಈ ಪಂದ್ಯ ಮಾತ್ರ ಆರಂಭದಿಂದಲೂ ತುಂಬಾ ಪೈಪೋಟಿಗೆ ಕಾರಣವಾಯಿತು
ಪೆರುಗ್ವೆ ತಂಡದ ಕೋಚ್ ಮಾರ್ಟಿನೊ ಗೆರಾರ್ಡೊ ಅವರಂತೂ ಇತಿಹಾಸ ಬರೆದ ಪ್ರತಿ ಆಟಗಾರರನ್ನು ತಬ್ಬಿಕೊಂಡು ಖುಷಿಪಟ್ಟರು. ಆದರೆ ಜಪಾನ್ ಸೋಲಿನೊಂದಿಗೆ ಏಷ್ಯಾಖಂಡದ ಕೊನೆಯ ಭರವಸೆ ಕಳಚಿ ಬಿತ್ತು.
ಕೋಚ್ ತಾಕೇಶಿ ಒಕಡಾ ಅವರ ಮಾರ್ಗದರ್ಶನದಲ್ಲಿ ಪಳಗಿದ ಜಪಾನ್ ಹುಡುಗರು ಎದುರಾಳಿ ರೂಪಿಸಿದ ಯಾವುದೇ ತಂತ್ರಗಳಿಗೆ ಕೊನೆಯವರಿಗೆ ಜಗ್ಗಲಿಲ್ಲ.
ಹಾಗಾಗಿಯೇ ಈ ಪಂದ್ಯದ ಪೂರ್ಣ ಅವಧಿಯಲ್ಲಿ ಯಾವುದೇ ಗೋಲು ಬರಲಿಲ್ಲ. ಹಾಗಾಗಿ ಹೆಚ್ಚುವರಿ ಸಮಯದ ಮೊರೆ ಹೋಗಬೇಕಾಯಿತು. ಆಗಲೂ ಯಾವುದೇ ಗೋಲು ದಾಖಲಾಗಲಿಲ್ಲ. ಬಳಿಕ ಎರಡನೇ ಹೆಚ್ಚುವರಿ ಅವಧಿಯಲ್ಲಿ ಪೈಪೋಟಿ ನಡೆಸಿದರು. ಅದರಲ್ಲೂ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು. 
ಬಳಿಕ ಪೆನಾಲ್ಟಿ ಶೂಟ್‌ಔಟ್ ನಿಂದಲೇ ಎರಡು ಬಣಗಳ ಸಾಮರ್ಥವನ್ನು ಆಳೆಯುವ ಸರದಿ ಬಂತು..  ಈ ತಂಡದವರು ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ನಡುವಿನ ಪಂದ್ಯದಲ್ಲಿ ವಿಜೇತರಾದವರನ್ನು ಎದುರಿಸಲಿದ್ದಾರೆ.ಶುಕ್ರವಾರ ಪೋರ್ಟ್ ಎಲಿಜಬೆತ್‌ನ ನೆಲ್ಸನ್ ಮಂಡೇಲಾ ಬೇ ಕ್ರೀಡಾಂಗಣದಲ್ಲಿ ನಡೆಯುವ ಎಂಟರ ಘಟ್ಟದ ಪಂದ್ಯದಲ್ಲಿ ಬ್ರೆಜಿಲ್ ತಂಡದವರು ಹಾಲೆಂಡ್ ತಂಡವನ್ನು ಎದುರಿಸಲಿದ್ದಾರೆ.
ಚಿಲಿ ಮತ್ತು ಬ್ರೆಸಿಲ್ ಒಟ್ಟು ೬೬ ಪಂದ್ಯಗಳಲ್ಲಿ, ಬ್ರೆಸಿಲ್ ೪೭ ನೇ ವಿಜಯವನ್ನು ಹಾಸಿಲ್ ಮಾಡಿದೆ. ಚಿಲಿಯ ಪಾಲು ಕೇವಲ ೭ ಬಾರಿಮಾತ್ರ. ಇದರಿಂದ ಬ್ರೆಸಿಲ್ ನ ಶಕ್ತಿಯ ಅರಿವುಮೂಡುವುದು ಸಹಜವಾಗಿದೆ.
 
ವಿಶ್ವಕಪ್ 2010 ರಲ್ಲಿ 2 ಕ್ಕಿಂತ ಹೆಚ್ಚು ಗೋಲು ಗಳಿಸಿದವರು
 
ಪ್ರಜಾವಾಣಿ ಪತ್ರಿಕೆಯ ವರದಿಯ ಪ್ರಕಾರ.  

ಪರುಗ್ವೆ ತಂಡದ ವಾಲ್ಡೆಜ್, ಮತ್ತು ಬಲಬದಿಯಲ್ಲಿ ಜಪಾನ್ ಟೀಮ್ ನ ಡಿಫೆಂಡರ್ ಯೂಚಿ ಕೊಮನೊ ಚೆಂಡಿನ ಮೇಲೆ ನಿಯಂತ್ರಣವನ್ನು ಸಾಧಿಸಲು 'ಶತಾಯಗತಾಯ' ಸ್ಪರ್ಧೆ ನಡೆಸಿದರು. ಪೆನಾಲ್ಟಿ ಶೂಟ್ ಔಟ್ ನಲ್ಲಿ ಪೆರುಗ್ವೆ, ಮೇಲ್ಗೈಯ್ ನಿಂದಾಗಿ ಜಯವನ್ನು ಹಾಸಿಲ್ ಮಾಡಿದೆ.

"ಪ್ರಜಾವಾಣಿ ಪತ್ರಿಕೆಯ, ಫೊಟೊಗ್ಯಾಲರಿ" ಯ ಸೌಜನ್ಯದಿಂದ.

 

೨೯, ಜೂನ್, ೨೦೧೦,  ’ಪ್ರಿಟೋರಿಯ” ದಲ್ಲಿ ಜರುಗಿದ, 'ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್', ನಲ್ಲಿ, ಪೆರುಗ್ವೆ ತಂಡ,  ಮೊಟ್ಟ ಮೊದಲ ಬಾರಿ  ಪ್ರವೇಶಿಸಿದ ಸಂಭ್ರಮದ ಕ್ಷಣವಾಗಿತ್ತು.  ಈ ಬಾರಿ ವಿಶ್ವಕಪ್‌ನ ನಾಕ್‌ಔಟ್ ಹಂತದಲ್ಲಿ ಹೆಚ್ಚುವರಿ, ಸಮಯ, ಹಾಗೂ 'ಪೆನಾಲ್ಟಿ ಶೂಟ್‌ಔಟ್‌ ' ಗೆ ಮೊರೆ ಹೋದ, ಮೊಟ್ಟಮೊದಲ ಪಂದ್ಯವಿದು. 
೨೯, ಜೂನ್, ೨೦೧೦ ರ ಮಂಗಳವಾರ, 'ಲಫ್ಟಾಸ್ ವರ್ಸ್‌ಫೆಲ್ಡ್ ಕ್ರೀಡಾಂಗಣದಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಜಪಾನ್ ತಂಡವನ್ನು ಮಣಿಸಿ, ಪೆರುಗ್ವೆ  ಈ ಸಾಧನೆ ಮಾಡಿದೆ. ಈ ತಂಡ, ಪೆನಾಲ್ಟಿ ಶೂಟ್‌ಔಟ್‌ನಲ್ಲಿ ೫-೩ ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿತು. ಶೂಟ್‌ಔಟ್‌ನಲ್ಲಿ ಪೆರುಗ್ವೆ ಪರ ’ಬೆರೆಟ್ಟೊ, ಲುಕಾಸ್ ಬ್ಯಾರಿಯೊಸ್, ರಿವೆರೊಸ್, ನೆಲ್ಸನ್ ವಾಲ್ಡೆಜ್, ಹಾಗೂ ಆಸ್ಕರ್ ಕಾರ್ಡೊಜೊ ಗೋಲು ಗಳಿಸಿದರು. ಜಪಾನ್‌ನ ಯಶುಹಿಟೊ ಎಂಡೊ, ಹಸೇಬ್ ಹಾಗೂ ಹೊಂಡಾ ಚೆಂಡನ್ನು ಗುರಿ ಸೇರಿಸಿದರು. ಆದರೆ ಈ ತಂಡದ ಮೂರನೇ ಶೂಟ್‌ಔಟ್‌ನಲ್ಲಿ ಯೂಚಿ ಕೊಮನೊ ವಿಫಲರಾದರು.
ಈ ಪಂದ್ಯ ಮಾತ್ರ ಆರಂಭದಿಂದಲೂ ತುಂಬಾ ಪೈಪೋಟಿಗೆ ಕಾರಣವಾಯಿತು. ಪೆರುಗ್ವೆ ತಂಡದ ಕೋಚ್ ಮಾರ್ಟಿನೊ ಗೆರಾರ್ಡೊ, ರವರಂತೂ  ಪ್ರತಿ ಆಟಗಾರರನ್ನು ತಬ್ಬಿಕೊಂಡು ಖುಷಿಪಟ್ಟರು. ಆದರೆ ಜಪಾನ್ ಸೋಲಿನೊಂದಿಗೆ ಏಷ್ಯಾಖಂಡದ ಕೊನೆಯ ಭರವಸೆ ಕಳಚಿ ಬಿತ್ತು. ಕೋಚ್ ತಾಕೇಶಿ ಒಕಡಾ, ರವರ ಮಾರ್ಗದರ್ಶನದಲ್ಲಿ ಪಳಗಿದ ಜಪಾನ್ ಹುಡುಗರು, ಎದುರಾಳಿಗಳು  ರೂಪಿಸಿದ ಯಾವುದೇ ತಂತ್ರಗಳಿಗೆ ಕೊನೆಯವರಿಗೆ ಜಗ್ಗಲಿಲ್ಲ. ಹಾಗಾಗಿಯೇ ಈ ಪಂದ್ಯದ ಪೂರ್ಣ ಅವಧಿಯಲ್ಲಿ ಯಾವುದೇ ಗೋಲು ಬರಲಿಲ್ಲ. ಸ್ವಾಭಾವಿಕವಾಗಿಯೇ ಹೆಚ್ಚುವರಿ ಸಮಯದ ಮೊರೆ ಹೋಗಬೇಕಾಯಿತು. ಆಗಲೂ ಯಾವುದೇ ಗೋಲು ದಾಖಲಾಗಲಿಲ್ಲ.
ಬಳಿಕ ಎರಡನೇ ಹೆಚ್ಚುವರಿ ಅವಧಿಯಲ್ಲಿ ಎರಡೂ ತಂಡಗಳು  ಪೈಪೋಟಿ ನಡೆಸಿದರು. ಅದರಲ್ಲೂ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು. ಬಳಿಕ ಪೆನಾಲ್ಟಿ ಶೂಟ್‌ಔಟ್ ನಿಂದಲೇ ಎರಡು ಬಣಗಳ ಸಾಮರ್ಥವನ್ನು ಆಳೆಯುವ ಸರದಿ ಬಂತು.
ಈ ತಂಡದವರು ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ನಡುವಿನ ಪಂದ್ಯದಲ್ಲಿ ವಿಜೇತರಾದವರನ್ನು ಎದುರಿಸಲಿದ್ದಾರೆ. 
ಶುಕ್ರವಾರ ಪೋರ್ಟ್ ಎಲಿಜಬೆತ್‌ನ, ’ನೆಲ್ಸನ್ ಮಂಡೇಲಾ ಬೇ ಕ್ರೀಡಾಂಗಣ ’ ದಲ್ಲಿ ನಡೆಯುವ ೮ ರಘಟ್ಟದ ಪಂದ್ಯದಲ್ಲಿ ಬ್ರೆಜಿಲ್ ತಂಡದವರು ಹಾಲೆಂಡ್ ತಂಡವನ್ನು ಎದುರಿಸಲಿದ್ದಾರೆ. ಚಿಲಿ ಮತ್ತು ಬ್ರೆಸಿಲ್ ಒಟ್ಟು ೬೬ ಪಂದ್ಯಗಳಲ್ಲಿ ಎದುರುಬದುರು ಹೋರಾ   ಡಿದ್ದು, ೪೭ ನೇ ಬಾರಿ, ವಿಜಯವನ್ನು ಹಾಸಿಲ್ ಮಾಡಿದೆ. ಚಿಲಿಯ ಪಾಲು ಕೇವಲ ೭ ಬಾರಿಮಾತ್ರ. ಇದರಿಂದ ಬ್ರೆಸಿಲ್ ನ ಶಕ್ತಿಯ ಅರಿವುಮೂಡುವುದು ಸಹಜವಾಗಿದೆ.
 

ಬ್ರೆಸಿಲ್, " ೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ !

೫  ಬಾರಿಯ ವಿಶ್ವ  ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ ,  ೧೯  ನೇ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ ನ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. (ಬ್ರೆಜಿಲ್ ೩  ಚಿಲಿ ೦)

 

ಜೋಹಾನ್ಸ್‌ಬರ್ಗ್  ನ,  "ಎಲ್ಲಿಸ್ ಪಾರ್ಕ್ ಕ್ರೀಡಾಂಗಣ" ದಲ್ಲಿ ಸೋಮವಾರ (೨೮)  ರಾತ್ರಿ ನಡೆದ ಏಕಪಕ್ಷೀಯವಾಗಿದ್ದ "ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ" ದಲ್ಲಿ ಬ್ರೆಜಿಲ್ ತಂಡ ೩-೦ ಗೋಲುಗಳಿಂದ ಚಿಲಿ ತಂಡವನ್ನು ಪರಾಭವಗೊಳಿಸಿತು. ಬ್ರೆಸಿಲ್ ಮುಂದೆ "ರಂಗನ ಮುಂದೆ ಸಿಂಗನೇ" ಎಂಬಂತೆ, ಎಲ್ಲರಿಗೂ ಆಶ್ಚರ್ಯವನ್ನು ತಂದ "ಚಿಲಿ ಬಣ " ಬೇರೆವರಜೊತೆಯಲ್ಲಿ ಆಡಿ ಮೆರೆದದ್ದು ಇದೇ ಟೀಮೇ, ಎನ್ನುವಷ್ಟು ಕಳಪೆ ಪ್ರದರ್ಶನವನ್ನು ಕೊಟ್ಟು  ಹೀನಾಯವಾಗಿ ಸೋತಿತು.

 

ವಿರಾಮದ ವೇಳೆಗೆ ೨-೦ ಗೋಲು ಗಳಿಂದ ಮುಂದಿದ್ದ ವಿಜಯಿ ತಂಡದ "ಜುವಾನ್ " (೩೫ ನೇ ನಿಮಿಷ), ಲೂಯಿಸ್ ಫ್ಯಾಬಿಯಾನೊ (೩೮ ನೇ ನಿ.) ಹಾಗೂ ರಾಬಿನೋ (೫೯ ನೇ ನಿ.) ಚೆಂಡನ್ನು ಗುರಿ ಸೇರಿಸಿ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.  ಶುರುವಿನಲ್ಲಿ  ಸ್ವಲ್ಪ  ಇರುಸು-ಮುರುಸಿನ ಆಟಪ್ರದರ್ಶನಮಾಡಿದರೂ,   ಬ್ರೆಜಿಲ್ ತಂಡದವರಿಗೆ ಮುಂದಿನ ಲಕ್ಷದ ಸ್ಪಷ್ಟ ಅರಿವಿತ್ತು. ಅದರಂತೆ  ಕರಾರುವಾಕ್ಕಾಗಿ  ಆಟವಾಡಿದ ಮಾಜಿ ಚಾಂಪಿಯನ್ನರಿಗೆ, ೩೫ ನೇ ನಿಮಿಷದಲ್ಲಿ ಮೊದಲ ಜಯ ಲಭ್ಯವಾಯಿತು. ಕಾರ್ನರ್‌ನಿಂದ "ಮೈಕಾನ್ "ಒದ್ದ ಚೆಂಡನ್ನು "ಜುವಾನ್" ಅವರು "ಹೆಡ್" ಮಾಡಿ ಗುರಿ ಮುಟ್ಟಿಸಿದರು.

 

ಚಿಲಿ ತಂಡದ ನಾಯಕ ಹಾಗೂ ಗೋಲಿ, "ಕ್ಲಾಡಿಯೊ ಬ್ರಾವೊ," ಚೆಂಡನ್ನು ತಡೆಯುವುದಕ್ಕೆ ಉತ್ತಮ ಪ್ರಯತ್ನ  ಹಾಕಿದರಾದರೂ ಸಫಲರಾಗಲಿಲ್ಲ. ೩  ನಿಮಿಷಗಳ ತರುವಾಯ ಬ್ರೆಜಿಲ್ ಗೋಲಿನ ಅಂತರವನ್ನು  ಹಿಗ್ಗಿಸಿಕೊಂಡಿತು. ಎಡ ವಿಂಗ್‌ನಿಂದ "ರಾಬಿನೊ" ನೀಡಿದ ಪಾಸ್ ಅನ್ನು ಪಡೆದ "ಕಾಕಾ," ಗೋಲು ಆವರಣದಲ್ಲಿ ಚೆಂಡಿಗಾಗಿ, ಕಣ್ಣುಗುಡ್ಡೆಗಳನ್ನು ಅತ್ತ ಇತ್ತ ಚಲಿಸದೆ,  ಕಾಯುತ್ತಿದ್ದ "ಲೂಯಿಸ್ ಫ್ಯಾಬಿಯಾನೊ" ಗೆ ನೀಡಿದರು. "ಫ್ಯಾಬಿಯಾನೊ" ತಮಗೆ ಒದಗಿದ ಅವಕಾಶದಲ್ಲಿ  ನಿಖರವಾಗಿ ಚೆಂಡನ್ನು ಗುರಿ ಸೇರಿಸಿ "ಸಾಂಬಾ ಬಾಯ್ಸು"  ಮೊಗದಲ್ಲಿ ಹರ್ಷದ ಮುಗುಳ್ನಗೆಯನ್ನು ಹೊರಸೂಸುವಂತೆ  ಮಾಡಿದವರು-ಬ್ರೆಜಿಲ್ ತಂಡದವರು!

 

"ಹಾಫ್ ಟೈಮ್" ನ ಬಳಿಕವೂ  ತಮ್ಮ ಬಿರುಸಿನ ಶರ-ವೇಗದ  ಆಟವನ್ನು  ಆಡುವುದಕ್ಕೆ ಆರಂಭಿಸಿದರು. ೪೭  ನೇ ನಿಮಿಷದಲ್ಲಿ "ಕಾಕಾ,"  "ಫೌಲ್" ಮಾಡಿದ್ದರಿಂದ  ರೆಫರಿ, ಇಂಗ್ಲೆಂಡ್‌ನ "ಹೊವಾರ್ಡ್ ವೆಬ್" ಅವರಿಂದ "ಹಳದಿ ಕಾರ್ಡ್‌" ನ ಎಚ್ಚರಿಕೆ ಪಡೆದರು. ಇದಕ್ಕೆ ಸೊಪ್ಪುಹಾಕದ  "ಕಾಕಾ" ಎದುರಾಳಿ ಅಂಕಣದತ್ತ ದಾಳಿ ಮಾಡುತ್ತಲೇ ಇದ್ದರು. ೫೯ ನೇ ನಿಮಿಷದಲ್ಲಿ "ಬೆನಿಫೀಸಿಯಾ ರಾಮರೆಸ್"  ಪಾಸ್‌ನಿಂದ ಬಂದ ಚೆಂಡನ್ನು "ರಾಬಿನೋ" ರವರು ಯಶಸ್ವಿಯಾಗಿ ಗುರಿ ಸೇರಿಸಿ, ತಮ್ಮ ತಂಡ ೩-೦ ಯಿಂದ ಗೆಲ್ಲುವಂತೆ ಮಾಡಿದರು. ಆಟ ಕೊನೆಯ ಹಂತ ತಲುಪುತ್ತಿದ್ದಂತೆ ಚಿಲಿ ತಂಡದವರು ತಮ್ಮ ಆಟದ  ವೇಗವನ್ನು   ಹೆಚ್ಚಿಸಿ ಆಡುವುದಕ್ಕೆ ಆರಂಭಿಸಿದರು. ೭೫ ನೇ ನಿಮಿಷದಲ್ಲಿ ಚಿಲಿಯ "ಸುವಾಜೊ" ಗುರಿಯತ್ತ ಒದ್ದ ಚೆಂಡನ್ನು ಬ್ರೆಜಿಲ್ ಗೋಲಿ, "ಜೂಲಿಯೊ ಸೀಸರ್" ತಡೆದರು. ಆಟ ಇನ್ನೇನು ಮುಗಿಯಲು ಕೇವಲ ೧೦  ನಿಮಿಷಗಳಿದ್ದಾಗ, ಚಿಲಿಯ ಬದಲಿ ಆಟಗಾರ, "ರಾಡ್ರಿಗೊ ಮಿಲ್ಲರ್" ಅಪಾಯಕಾರಿ ಆಟವಾಡಿದ್ದರಿಂದ, "ಹಳದಿ ಕಾರ್ಡ್" ನ್ನು ಕಾಣುವಂತಾಯಿತು.   ಬ್ರೆಜಿಲ್ ತಂಡ ಮೊದಲ ಗೋಲು ಗಳಿಸುವುದಕ್ಕೆ ಕೊಂಚ ತಡಕಾಡಿದರೂ  ಒಂದು ಗೋಲು ಸ್ಕೋರ್ ಬೋರ್ಡ್‌ನಲ್ಲಿ ದಾಖಲಾಗುತ್ತಿದ್ದಂತೆಯೇ  ಹಳೆಯ ಹುಲಿಗಳು,  ದಾಳಿಯ ವೇಗ ಹೆಚ್ಚಿಸಿದರು. "ಡುಂಗಾ ಗರಡಿಯಲ್ಲಿ ಪಳಗಿದ ಶಿಷ್ಯರನ್ನು" ತಡೆಯುವುದಕ್ಕೆ ಚಿಲಿಯ ಘಟಾನುಘಟಿಗಳಿಗೂ ಸಾಧ್ಯವಾಗದೆ ಹೋಯಿತು. "ಚಿಲಿ", ಸಾಕಷ್ಟು ಕಾರ್ಯತಂತ್ರಗಳನ್ನು ರೂಪಿಸಿತಾದರೂ ಸಫಲ ವಾಗಲಿಲ್ಲ.