ಸುಭಾಷಿತ
ತಾಯಿ ಸರಸ್ವತಿಯೇ, ನಿನ್ನ ಬಳಿ ವಿದ್ಯೆಯೆಂಬ ಅಪರೂಪದ ಭಂಡಾರವೊಂದಿದೆ. ಬೇರೆಲ್ಲ ಸಂಪತ್ತುಗಳೂ ಹಂಚಿಕೊಂಡಷ್ಟೂ ಕ್ಷೀಣಿಸುತ್ತವೆ.
ಆದರೆ (ನಿನ್ನ ಬಳಿಯಿರುವ) ವಿದ್ಯೆಯೆಂಬ ಸಂಪತ್ತು ಮಾತ್ರ ಹಂಚಿಕೊಂಡಷ್ಟೂ ವೃದ್ಧಿಸುತ್ತದೆ ಮತ್ತು ಗೋಪ್ಯವಾಗಿಟ್ಟಷ್ಟೂ ಕ್ಷೀಣಿಸುತ್ತದೆ!
- ಸಂಸ್ಕೃತ ಸುಭಾಷಿತವೊಂದರ ಕನ್ನಡ ಭಾವಾನುವಾದ