ಸ್ವಾತಂತ್ರ್ಯದ ದುರ್ಬಳಕೆ

ಸ್ವಾತಂತ್ರ್ಯದ ದುರ್ಬಳಕೆ

Comments

ಬರಹ

ಸ್ವಾತಂತ್ರ್ಯದ ದುರ್ಬಳಕೆ

ಮನೆಯ ಎದುರು ಒಂದು ಹಾಸ್ಟೆಲ್. ಸುಮಾರು ೨೦೦ ಜನ ಇರಬಹುದಾದ ಹಾಸ್ಟೆಲ್ ಅದು.  ಪ್ರತಿ ದಿನ ಸಂಜೆ ಏಳರ ಮೇಲೆ ಕೆಲವು ವಿದ್ಯಾರ್ಥಿಗಳ ದಂಡು ಹಾಸ್ಟೆಲ್ನ ೩ ನೆಯೇ ಮಹಡಿಯಿಂದ ಹಾಸ್ಟೆಲ್ನ ಗೋಡೆಗಳ ಮತ್ತು ಸಜ್ಜಾಗಳ ಸಹಾಯದಿಂದ ಇಳಿದು ಹೊರಗೆ ಬರುತ್ತಿದ್ದರು. ರಾತ್ರಿ ಹತ್ತು, ಕೆಲವೊಮ್ಮೆ ಹನ್ನೊಂದು ಘಂಟೆಯ ನಂತರವೂ ವಿದ್ಯಾರ್ಥಿಗಳು ವಾಪಸ್ ಬಂದು ಕಳ್ಳ ತನದಿಂದ ಅದೇ ಗೋಡೆಗಳನ್ನ ಹತ್ತಿ ತಮ್ಮ ತಮ್ಮ ರೂಂಗಳನ್ನ ಸೇರಲು ಗೋಡೆಗಳನ್ನು ಹತ್ತುವಾಗ ಬೀಳುವುದೂ, ಒಮ್ಮೂಮ್ಮೆ ನಮ್ಮ ನಿದ್ರೆಯನ್ನು ಹಾಳು ಮಾಡುವುದು ರೂಢಿಯಾಗಿತ್ತು.  ಹಾಸ್ಟೆಲ್ನ ಮೇಲ್ವಿಚಾರಕರಿಂದ ಯಾವುದೇ ಅಡಚಣೆ ಅಥವಾ ಭಯ ವಿದ್ಯಾರ್ಥಿಗಳಿಗೆ ಇರಲಿಲ್ಲ ಎಂಬುದು ಹಾಸ್ಟೆಲ್ನ ಎದುರು ಮನೆಗಳಲ್ಲಿ ಇರುವ ನಿವಾಸಿಗಳಿಗೆ ತಿಳಿಯದೆ ಇರಲಿಲ್ಲ.


ಇದೇ ರೀತಿ ಸುಮಾರು ೬ ಅಥವಾ ೭ ತಿಂಗಳುಗಳ ಕಾಲ ವಿದ್ಯಾರ್ಥಿಗಳ ಈ ಹುಡುಗಾಟ ನಿಲ್ಲಲಿಲ್ಲ. ನಿಲ್ಲುವಂತೆಯೂ ಕಾಣಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆಯೇ ವಿಧ್ಯಾರ್ಥಿಗಳ ಕೋಣೆಯ ಮುಂದಿನ ಕಂಪೌಂಡಿಗೆ ಬಂತು ಒಂದು ಕಬ್ಬಿಣದ ಜಾಲರಿ! ಇದರಿಂದ ವಿದ್ಯಾರ್ಥಿಗಳ ಎಲ್ಲ ಬೇಡವಾದ ವಿನೋದಗಳಿಗೆ ಬಿತ್ತು ಕಡಿವಾಣ. ಇನ್ನು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಹಾಸ್ಟೆಲ್ನ ಬೀಗ ತೆಗೆಯದ ಹೊರತು ಆಚೆ ಬರುವಂತಿಲ್ಲ!

ಇಲ್ಲಿ ವಿಚಾರ ಮಾಡುವಂಥ ಒಂದು ಸಂಗತಿ ನನ್ನ ಮನಸ್ಸಿಗೆ ಬರುತ್ತದೆ. ಈ ವಿದ್ಯಾರ್ಥಿಗಳ ಹಾಗೆಯೇ ನಾವುಗಳು ಕೂಡ ಕೆಲವು  ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ - ಮಾಡಬಾರದೆಂದು ತಿಳಿದಿದ್ದರೂ ಸಹ! ಆ ತಪ್ಪಿಗೆ ಶಿಕ್ಷೆಯೋ ಎಂಬಂತೆ ಅದಕ್ಕೆ ಕಡಿವಾಣ ಬಿದ್ದಾಗಲೇ ನಮೆಗೆ ನಾವು ಮಾಡುತ್ತಿದ್ದ ತಪ್ಪಿನ ಅರಿವಾಗುವುದು. freedom as in the freedom of a cow ಎಂಬ ಒಂದು ಮಾತನ್ನ ನಮ್ಮ ಗೆಳೆಯರೊಬ್ಬರು ಪದೇ ಪದೇ ಹೇಳುತ್ತಿರುತ್ತಾರೆ. ನಮ್ಮ ಸ್ವಾತಂತ್ರ್ಯದ ಮಿತಿ ನಮಗೆ ಗೊತ್ತಿದ್ದಲ್ಲಿ ಅದರ ಸದ್ಬಳಕೆ ಇಲ್ಲದಿದ್ದರೆ ಎಂದೋ ಒಂದು ದಿನ ಅದಕ್ಕೆ ಕಡಿವಾಣ ಖಂಡಿತ. ನಂತರ? ಕಳೆದು ಕೊಂದ ಸ್ವಾತಂತ್ರಯಕ್ಕಾಗಿ ಮರುಗಿ ಪ್ರಯೋಜನವಿಲ್ಲ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet