ವಾರ್ತಾ ಚೇಷ್ಟೆಗಳು
ವಿಷಯವೊಂದನ್ನು ಇನ್ನೊಬ್ಬರೆದುರು ಪ್ರಸ್ತುತಪಡಿಸುವಾಗ ವಿಷಯದ ಗಾಂಭೀರ್ಯವನ್ನು ಕಾಯ್ದುಕೊಳ್ಳುವುದು ಹಾಗು ವಿಷಯದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಅತ್ಯಂತ ಅವಶ್ಯಕವಲ್ಲವೇ. ವಾರ್ತೆಗಳನ್ನು ಬಿತ್ತರಿಸುವಾಗ ಪ್ರಕಟ ಮಾಡುವಾಗ ಇದಕ್ಕೆ ಹೆಚ್ಚು ಒತ್ತು ಕೊಡಬೇಕು.
ವೆಬ್ ದುನಿಯಾವನ್ನು ನಂಬಿಕೊಂಡ ಎಮ್ಮೆಸ್ಸೆನ್ನಿನವರ ಪ್ರಕಾರ ಧರ್ಮಸಿಂಹರು ಯಾವ ರಾಜ್ಯದ ಪಾಲಕರಾಗುತ್ತಾರೋ ಗೊತ್ತಿಲ್ಲ, ಆದರೆ ಆಂಧ್ರಪ್ರದೇಶದ "ಮುಖ್ಯಮಂತ್ರಿಗಳಾಗಲಿದ್ದಾರೆ".
ತಪ್ಪು ಮಾಡುವುದು ಸಹಜ. ಆದರೆ ಇವರು ಕೊಡುವ ಮಾಹಿತಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಬಹುದುದು ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡು ವಾರ್ತಾವರದಿಯನ್ನು ಮಾಡುವುದು ಉತ್ತಮ. ಅಷ್ಟಕ್ಕೂ ಎಲ್ಲಿಯ ಆಂಧ್ರ? ಎಲ್ಲಿಯ ಕನ್ನಡಿಗರು...? ನಮ್ಮ ನೆರಳನ್ನೇ ಕಂಡರಾಗದವರು ನಮ್ಮವರನ್ನು ತಮ್ಮ ಮಂತ್ರಿಗಳನ್ನಾಗಿಸಿಕೊಂಡಾರೆಯೇ? ಅದೂ ತಮಗೆ ನೀರನ್ನು ಬಿಡದ (?) ಕರ್ನಾಟಕದ ಮಾಜೀ ಮುಖ್ಯಮಂತ್ರಿಯನ್ನು....
ನೀವಾದರೂ ಸ್ವಲ್ಪ ಹೇಳಿ
Rating
Comments
Re: ವಾರ್ತಾ ಚೇಷ್ಟೆಗಳು
In reply to Re: ವಾರ್ತಾ ಚೇಷ್ಟೆಗಳು by hpn
Re: ವಾರ್ತಾ ಚೇಷ್ಟೆಗಳು