ಮಲ್ಲಿಗೆ- ಮಲ್ಲಿಗೆ ಬಳ್ಳಿ ಮತ್ತು ನಾನು

ಮಲ್ಲಿಗೆ- ಮಲ್ಲಿಗೆ ಬಳ್ಳಿ ಮತ್ತು ನಾನು

  ನನ್ನ ಮನೆಯಂಗಳದಿ...

  ನೆಟ್ಟ ಮಲ್ಲಿಗೆ ಬಳ್ಳಿ

  ಮಗಳು 'ಮಲ್ಲಿಗೆ' ಭುವಿಯ

  ಆಗಮನದ ನೆನಪಿಗೆ......

 

  ದಿನಂಪ್ರತಿ ಪ್ರೀತಿಯ ಆರೈಕೆ

   ಇಬ್ಬರಿಗೂ...

 

  ಮನೆಯ ಮಣ್ಣಿನ ಸತ್ವವ ಹೀರಿ

  ಸೊಂಪಾಗಿ ಬೆಳೆದು ಮೈತುಂಬ

  ಪರಿಮಳದ  ಹೂವು..!

  ಆಧಾರ ಕಂಬಕ್ಕೆ  ಅಪ್ಪಿರುವ  ಬಳ್ಳಿ

  ಎದೆಯೆತ್ತರಕೆ   ಈಗ.....!

 

   ಬೆಂಗಳೂರಿಂದ....

  ಮೊನ್ನೆಯಷ್ಟೇ ರಜೆಗಾಗಿ

  ಮನೆಗೆ ಬಂದ ಮಲ್ಲಿಗೆಗಾಗಿ

 ತಾಯಿ ಪ್ರೀತಿಯ ಬೆರಳು

  ಹೆಣೆದ ಮಲ್ಲಿಗೆ ದಂಡೆ

 

  'ಮುಡಿದುಕೋ ಮಗಳೆ'

  ನೀನು ಹುಟ್ಟಿದಾಗ

  ಅಪ್ಪ ನೆಟ್ಟ ಮಲ್ಲಿಗೆ'

 

   'ಬೇಡ ಇಷ್ಟವಿಲ್ಲ ನನಗೆ"

   ಎಂದು ' ಬಾಬ್ ಕಟ್ " ಸರಿಪಡಿಸಿಕೊಳ್ಳುತ್ತ

   ಮಗಳು ಮಲ್ಲಿಗೆ ಮಾತು

 

   ಅಲ್ಲಿಯೇ...

   ಅರಳಿರುವ  ಮಲ್ಲಿಗೆ, ಬಳ್ಳಿಯ ತುಂಬ

   ನಗುತ್ತಿತ್ತು.....!

   ನೋಡಿ ಸಂತಸ ಪಟ್ಟೆ...ಅಷ್ಟೆ !

 

 

 

            -ಭಾಗ್ವತ್

 

 

 

 

Rating
No votes yet

Comments