ವಿನೋದ್ ಪ್ರಭಾಕರ್ ಎಂಬ ಮರಿ ಟೈಗರ್
ಬರಹ

ಹೌದು...!!! ಅದು ವಿನೋದ್ ಪ್ರಭಾಕರ್. ಕನ್ನಡ ಚಿತ್ರರಂಗದಲ್ಲಿ ಸದ್ಯ ಮಿಂಚಲು ಪ್ರಯತ್ನಿಸುತ್ತಿರುವ ಕಟ್ಟುಮಸ್ತಾದ ಯುವಕ. "ನವಗ್ರಹ" ದಂತಹ ಕನ್ನಡದ ಚಿತ್ರದ ಮೂಲಕ ಹೆಚ್ಚು ಪ್ರಚಾರಕ್ಕೆ ಬಂದವರು. ತಂದೆ ಪ್ರಭಾಕರ್ ಖಳನಾಯಕನಾಗಿಯೇ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು. ಪುತ್ರನ ವಿಷಯದಲ್ಲಿ ಆ ರೀತಿ ಆಗಿಲ್ಲ. ಖಳನಾಯಕರ ಮಕ್ಕಳೆಲ್ಲ ನಾಯಕರಾಗಿ ಅಭಿನಯಿಸಿದ "ನವಗ್ರಹ" ಚಿತ್ರದಲ್ಲಿ ವಿನೋದ್ ನಾಯಕರಾಗಿ ತೆರೆ ಮೇಲೆ ಕಾಣಿಸಿಕೊಂಡರು.
ನವಗ್ರಹದಿಂದಲೇ ಚಿರಪರಿಚತರಾದ ವಿನೋದ್ ಥೇಟ್ ಪ್ರಭಾಕರ್ ಥರವೇ ಇದ್ದಾರೆ. ಅಪ್ಪನ ಹೋಲಿಕೆ ಯಥಾವತ್ತು ಇದೆ. ಫಿಜಿಕ್ ಅಂಡ್ ಫಿಟ್ ನೆಸ್ ಸೇಮ್ ಟು ಸೇಮ್. ೬.೨ ಇಂಚ್ ಹೈಟು. ಉದ್ದನೇಯ ಕೈಗಳು. ಎಲ್ಲೇ ನಿಂತರೂ ಅಷ್ಟೆ. ಎತ್ತರದ ಕಾಯ ಎದ್ದು ಕಾಣುತ್ತದೆ. ಕಾರಣ ಅಪ್ಪ ಹೇಳಿಕೊಟ್ಟ ವ್ಯಾಯಾಮದ ತಂತ್ರಗಳು ದೇಹವನ್ನ ಚೆನ್ನಾಗಿ ಬೆಳಸಿವೆ. ಒಂದೇ ಒಂದು ದಿನ ವ್ಯಾಯಾಮ ಮಾಡದೆ ವಿನೋದ್ ಹೊರಗೆ ಬೀಳೋದೆಯಿಲ್ಲ. ಅಪ್ಪ ಅಷ್ಟು ಮಜ್ಬೂತ್ ಅಡಿಪಾಯ್ ಹಾಕಿ ಹೋಗಿದ್ದಾರೆ.
ಅಪ್ಪನಂತೇ ಆಕ್ಷನ್ ಆಸ್ತಕಿ ಮೈಗೂಡಿಕೊಡ್ಡಿದೆ. ಡಾನ್ಸ್ ಕಷ್ಟ. ಮಾಡುವ ಉತ್ಸಾಹವಾಗಲಿ. ಕಲಿಕೆಯ ಕ್ರೇಜ್ ಆಗಲಿ ಕಡಿಮೆ ಇಲ್ಲ. ತೊಂದರೆಯಾದ್ರು ಚೆನ್ನಾಗಿ ಮಾಡಬಲ್ಲ ಛಲವಿದೆ. ಕನ್ನಡದಲ್ಲಿ ತಂದೆಯ ಹೆಸರು ಉಳಿಸಬೇಕೆಂಬ ಹೆಬ್ಬಯಕೆ. ತನನ್ನ ತನ್ನ ತಂದೆಯಿಂದಲೇ ಜನ ಗುರುತಿಸುತ್ತಾರೆಂಬು ಗೊತ್ತಿದೆ. ಅದು ಗೊತ್ತಿದ್ದರೂ ಕೂಡ ಬೇಜಾರಿಲ್ಲ. ತಂದೆ ಥರವೇ ಮಿಂಚುವ ದೊಡ್ಡ ಕನಸು.
ಹೋರಿ ಅಂತ ಕಳೆದ ವರ್ಷ ಸೆಟ್ಟೇರಿದ ಚಿತ್ರದಲ್ಲಿ ಈತ ನಾಯಕ. ರಮಣೀತೋ ಚೌಧರಿ ವಿನೊದ್ ಗೆ ಸಾಥ್ ನೀಡ್ತಾಯಿದ್ದಾರೆ. ಗೌರಿ ಮುಂಜಾಲ್ ಮತ್ತೊಬ್ಬ ಚೆಲುವೆ. ಇವರ ಮಧ್ಯೆ ವಿನೋದ್ ಹೀರೊ. ಮನ ತಟ್ಟುವ ಹಾಡುಗಳು ಸಿನೆಮಾಕ್ಕೆ ಸಿದ್ಧವಾಗ್ತಿವೆ. ಈಗಾಗಲೇ ಚಿತ್ರದ ತಮ್ಮ ಆಕ್ಷನ್ ಪ್ಯಾಕ್ಡ್ ಕೆಲಸ ಮುಗಿದಿದೆ. ಕ್ಲೈಮ್ಯಾಕ್ಸ್ ಶೂಟಿಂಗೂ ಕಂಪ್ಲಿಟ್ ಆಗಿದೆ. ಹಾಡಿನ ಚಿತ್ರೀಕಣಕ್ಕೆ ಇಡೀ ತಂಡ ಬ್ಯಾಂಕಾಕ್ ಗೂ ಹೋಗಲಿದೆ...
ತಮ್ಮ ಚಿತ್ರದ ಬಗ್ಗೆ ವಿನೋದ್ ಗೆ ತುಂಬಾನೆ ಉತ್ಸಾಹವಿದೆ. ಪ್ರೀತಿನೂ ಅಷ್ಟೇ ಇದೆ. ಚಿತ್ರದ ತಯಾರಿಕೆಯ ಈ ಹಿಂದೆ ಸ್ಥಗಿತಗೊಂಡಿತ್ತು. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ವಿನೋದ್ ಭಾರೀ ಆಕ್ಷನ್ ಮಾಡಿ ಕೈ ಮುರಿದುಕೊಂಡರು. ಇದರಿಂದ ಶೂಟಿಂಗ್ ಸ್ಟಾಪ್ ಆಯಿತು. ನಂತರ ವಿನೋದ್ ತಾಯಿ ತೀರಿ ಹೋದರು. ಈ ದು:ಖದಿಂದ ವಿನೋದ್ ಹೊರ ಬರಲು ತುಂಬಾನೇ ದಿನಗಳು ಕಳೆದವು. ಡೈರೆಕ್ಟರ್ ನಾಗೇಂದ್ರ ಮಾಗಡಿ ಆರೋಗ್ಯ ಕೆಟ್ಟಿತ್ತು. ಇದೆಲ್ಲ ಸೇರಿ "ಹೋರಿ" ಚೇತರಿಸಿಕೊಳ್ಳುವುದು ತಡವಾಯಿತು. ಈಗ ಅದೆಲ್ಲ ಸರಿ ಹೋಗಿ ತಂಡ ರೀಯಾಕ್ಟಿವ್ ಆಗಿದೆ. ಭಾರೀ ಜೋಶ್ ನಲ್ಲಿ ಸಾಂಗ್ ಶೂಟಿಂಗ್ ನಲ್ಲಿ ಬ್ಯೂಝಿಯಾಗಿದೆ...
ಹೊಸ ಕನಸಲಿ..ನವ ಉಲ್ಲಾಸದಲಿ "ಹೋರಿ" ಮತ್ತೆ ಹೂಂಕರಿಸುತ್ತಿದೆ....
- ರೇವನ್ ಪಿ.ಜೇವೂರ್