ಭಾರತೀಯ ಭಾಷಾ ಸಂಸ್ಥಾನ, ಸಂಸ್ಥಾಪನಾ ದಿನ.

ಭಾರತೀಯ ಭಾಷಾ ಸಂಸ್ಥಾನ, ಸಂಸ್ಥಾಪನಾ ದಿನ.

ಬರಹ

ಭಾರತೀಯ ಭಾಷಾ ಸಂಸ್ಥಾನ
ನಮ್ಮ ದೇಶದ ನಾಡಿಯಲ್ಲಿ ಬೆರೆತು ಹೋಗಿರುವ ಭಾಷೆಗಳಿಗೆ ಸಂಬಂಧಿಸಿದಂತೆ 1969 ನೇ ಜುಲೈ 17 ಬಹಳ ಪ್ರಮುಖವಾದ ದಿನ. ಅಂದು ಮೈಸೂರಿನ ಹುಣಸೂರು ರಸ್ತೆಯ ಬಿ.ಎಂ ಆಸ್ಪತ್ರೆಯ ಮುಂಭಾಗದಲ್ಲಿ(ಮಾನಸಗಂಗೋತ್ರಿ ಕ್ಯಾಂಪಸ್) ಭಾರತೀಯ ಭಾಷಾ ಸಂಸ್ಥಾನವನ್ನು ಸ್ಥಾಪಿಸುವುದರ ಮೂಲಕ ಭಾರತದ ಇತಿಹಾಸದ ಪುಟಗಳಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆಯಲಾಯಿತು. ಈ ಸಂಸ್ಥೆಯು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಒಂದು ಪ್ರಧಾನ ಅಂಗ. 
 ಸಂಸ್ಥೆಯ ಮುಖ್ಯ ಧ್ಯೇಯ:
“ಭಾರತೀಯ ಭಾಷೆಗಳ ಅಭಿವೃದ್ಧಿ ಹಾಗೂ ಸಂಘಟನೆಗೆ ನೆರವಾಗುವುದು, ಭಾಷೆಗಳ ವೈಜ್ಞಾನಿಕ ಅಧ್ಯಯನ ಹಾಗೂ ಅಂತರ್ ಭಾಷಾಶಾಸ್ತ್ರ ಸಂಶೋಧನೆಗಳ ಮೂಲಕ ಅಗತ್ಯ ಐಕ್ಯತೆಯನ್ನು ಸಾಧಿಸುವುದು ಮತ್ತು ಭಾಷೆಗಳನ್ನು ಪರಸ್ಪರ ಶ್ರೀಮಂತಗೊಳಿಸುವ ನಿಟ್ಟಿನಲ್ಲಿವ ನಿಪ್ರೋತ್ಸಾಹ ನೀಡುತ್ತಾ, ದೇಶದ ಪ್ರಜೆಗಳ ಭಾವನಾತ್ಮಕ ಐಕ್ಯತೆಗೆ ನೆರವಾಗುವುವುದು ಈ ಸಂಸ್ಥೆಯ ಬಹು ಮುಖ್ಯ ಧ್ಯೇಯವಾಗಿದೆ.”
ಕನ್ನಡಕ್ಕೆ ಶಾಷ್ತ್ರೀಯ ಸ್ಥಾನಮಾನ ಲಭಿಸಿರುವುದು ನಮಗೆಲ್ಲ ತಿಳಿದಿರುವ ವಿಷಯ, ಪ್ರಾಥಮಿಕವಾಗಿ ಈ ಯೋಜನೆಯ ಕೆಲಸಗಳು ಭಾರತೀಯ ಭಾಷಾ ಸಂಸ್ಥಾನದಲ್ಲೇ ಪ್ರಾರಂಭವಾಗಲಿವೆ ಎಂಬ ಸುದ್ದಿಯಿದೆ, ಕಾದು ನೋಡೋಣ.


ಮೈಸೂರಿನಲ್ಲೇ ಇರುವ ಬಹುತೇಕ ‘ತಿಳಿದವರಿಗೆ’  ಈ ಸಂಸ್ಥೆಯ ಬಗ್ಗೆ ಅರಿವಿಲ್ಲದಿರುವುದು ಬಹಳ ವಿಷಾದದ ಸಂಗತಿ.


Foundation Day


Foundation Day2


  ಸಂಸ್ಥಾಪನಾ ದಿನ*


ಸಂಸ್ಥೆ ಇದೇ ಜುಲೈ 17 2010ರಂದು 41 ವಸಂತಗಳನ್ನು ಪೂರೈಸಿ 42ನೆಯ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುತ್ತಿದೆ. ಇದೇ ಶುಭ ಸಂದರ್ಭದಲ್ಲಿ ಭಾರತದಲ್ಲಿ ಭಾಷೆಯ ಶಿಕ್ಷಣ ನಿಯಮ, ಯೋಜನೆ ಮತ್ತು ಬಳಕೆಗಳು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ವಿಚಾರ ವಿನಿಮಯ ಸಭೆಯನ್ನು ಏರ್ಪಡಿಸಲಾಗಿದೆ.


ಭಾರತದಲ್ಲಿ ಭಾಷಾ ಶಿಕ್ಷಣದ ವಿವಿಧ ಆಯಾಮಗಳ ಬಗ್ಗೆ ವಿಚಾರ ಮಂಡಿಸಲು ಅನೇಕ ವಿದ್ವಾಂಸರನ್ನು ಆಹ್ವಾನಿಸಲಾಗಿದೆ. 'ಭಾರತವನ್ನು ಅರಿಯುವುದು: ಭಾಷಾವೈವಿಧ್ಯತೆ ಮತ್ತು ಬಹುಸಂಸ್ಕೃತಿವಾದ' ಎಂಬ ವಿಚಾರಗೋಷ್ಠಿಯೊಂದಿಗೆ ಈ ಕಾರ್ಯಕ್ರಮವು ಜುಲೈ 15ರಂದು ಪ್ರಾರಂಭವಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ. ಡಿ.ಪಿ. ಪಟ್ನಾಯಕ್ ರವರು ವಹಿಸಲಿದ್ದು, ಶ್ರೀಮತಿ. ಅನಿತ ಭಟ್ನಾಗರ್ ಜೈನ್, ಜಂಟಿ ಕಾರ್ಯದರ್ಶಿಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಾಗಿರುತ್ತಾರೆ. ಇ. ಅಣ್ಣಾಮಲೈ, ಎಸ್. ಎಸ್. ಭಟ್ಟಾಚಾರ್ಯ ಮತ್ತು ಎ.ಕೆ. ಮಿಶ್ರಾರವರು ಭಾಷಣಕಾರರಾಗಿರುತ್ತಾರೆ. ಮಧ್ಯಾಹ್ನದ ಅಧಿವೇಶನದಲ್ಲಿ 'ಸಣ್ಣ ಮತ್ತು ಗುಡ್ಡಗಾಡು ಭಾಷೆಗಳು ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ' ಹೇಗೆ ಅಭಿವೃದ್ಧಿ ಹೊಂದುತ್ತಿವೆಯೆಂದು ರಾಜ್ಯದ ವಿವಿಧ ಕಾರ್ಯಘಟಕಗಳು ತಿಳಿಸಲಿವೆ.


2ನೇ ದಿನವಾದ ಜುಲೈ 16ರ ವಿಷಯ 'ಭಾರತದಲ್ಲಿ ಭಾಷಾ ಶಿಕ್ಷಣ: ರಾಷ್ಟ್ರೀಯ ಪಠ್ಯಕ್ರಮ ದೃಷ್ಟಿಕೋನ, ಮಾತೃಭಾಷಾ ಬೋಧನೆ, ಅಧಿಕೃತ ಭಾಷೆಗಳು, ಅಸೂಚಿತ ಭಾಷೆಗಳು, ಅಳಿವಿನಂಚಿನಲ್ಲಿರುವ ಭಾಷೆಗಳು, ಗುಡ್ಡಗಾಡು ಗುಂಪುಗಳು ಮತ್ತು ಭಾಷಾ ಅಲ್ಪಸಂಖ್ಯಾತರು' ಆಗಿರುತ್ತದೆ. ಹಂಸರಾಜ್ ದುವ, ಉದಯನಾರಾಯಣ ಸಿಂಹ, ಕೆ.ಕೆಫೊ ಮತ್ತು ಕೆ. ರಾಮಸ್ವಾಮಿಯವರು ವಿಚಾರ ಮಂಡಿಸಲಿದ್ದು, ಇದರ ಅಧ್ಯಕ್ಷತೆಯನ್ನು ಪ್ರೊ. ರಮಾಕಾಂತಿ ಅಗ್ನಿಹೋತ್ರಿ, ದೆಹಲಿ ವಿಶ್ವವಿದ್ಯಾಲಯ, ವಹಿಸಲಿದ್ದಾರೆ. ಮಧ್ಯಾಹ್ನದ ನಂತರದ ಅಧಿವೇಶನದಲ್ಲಿ ಓ.ಎನ್.ಕೌಲ್, ಆರ್.ಕೆ. ಭಟ್ ಮತ್ತು ಕೃಷ್ಣ ಭಟ್ಟಾಚಾರ್ಯ ಪ್ರಧಾನ ಭಾಷಣಕಾರರಾಗಿರುತ್ತಾರೆ. 


ಸಂಸ್ಥಾಪನಾ ದಿನವೇ ಆದ ಜುಲೈ 17ರಂದು 'ಭಾಷಾ ಶಿಕ್ಷಣ: ಸಹಸ್ರ ಗುರಿಗಳು ಮತ್ತು ಸವಾಲುಗಳು' ಎಂಬುದು ವಿಷಯವಸ್ತುವಾಗಿರುತ್ತದೆ. ಆಯ್ದ ಭಾಗಿಗಳ ಅಭಿಪ್ರಾಯಗಳನ್ನು ಮತ್ತು ಭಾರತೀಯ ಭಾಷಾ ಸಂಸ್ಥಾನ ತೊಡಗಿಸಿಕೊಂಡಿರುವ ಮಹತ್ತರ ಯೋಜನೆಗಳಾದ ರಾಷ್ಚ್ರೀಯ ಅನುವಾದ ಮಿಷನ್ [National Translation Mission(NTM)], ಭಾರತೀಯ ಭಾಷೆಗಳ ಭಾಷಿತ ದತ್ತಾಂಶ ಒಕ್ಕೂಟ [Linguistic Data Consortium for Indian Languages(LDC IL)],ರಾಷ್ಟ್ರೀಯ ಪರೀಕ್ಷಣಾ ಸೇವೆ-ಭಾರತ [National Testing Service(NTS)], ಭಾಷಾ ಮಂದಾಕಿನಿ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗುವುದು.


ನಮ್ಮ ಅಂತರ್ಜಾಲಕ್ಕೊಮ್ಮೆ ಬನ್ನಿ:


http://www.ciil.org/ 


                                                                                                                    *ಒಂದು ದಿನ ತಡವಾಗಿ ಪೋಸ್ಟ್ ಮಾಡಿದ್ದೇನೆ, ಕ್ಷಮೆಯಿರಲಿ.