ಸೈಕ್ಲರ್ ನ ಸ್ವಗತ

ಸೈಕ್ಲರ್ ನ ಸ್ವಗತ

ಎರಡು ಚಕ್ರ, ಒಂದು ಗೆರೆಯಷ್ಟೇ ದಾರಿ,
ಇನ್ಯಾರ ಹಂಗಿಲ್ಲದ ನನ್ನ ಸವಾರಿ
ನನ್ನ ತೋಳು, ನನ್ನ ಕಸುವು,
ನಾ ನೆಚ್ಚಿ  ತುಳಿದರಷ್ಟೆ  ಹಾದಿಯ ಹರಿವು

ಏರು ದಾರಿಯಲಿ ದೂಡುವವರಿಲ್ಲ

ಇಳಿಕೆಯಲಿ ಜಾರಿದರೆ ಹಿಡಿವವರಿಲ್ಲ
ನನ್ನ ತಲೆಯ ಮೇಲೆ ನನ್ನದೇ ಕೈ
ನನ್ನ ಪೆಡಲಿನ ಮೇಲೆ ನನ್ನ ಕಾಲು

ಆದರೇನು,
ಕಷ್ಟದ ಬಳಿಕ ಸುಖ , ಸುಖದ ಬಳಿಕ ಕಷ್ಟ
ಎರನೇರಿದರೆ ಇಳಿವು, ಇಳಿವ ದಾಟಿದರೆ ಏರು
ಅವುಡುಗಚ್ಚಿ , ಬೆವರೊಸರುವ ಮೈಕೈಗಳಲಿ
ಬೆಂಕಿಯೆಬ್ಬಿಸಿ, ಬಾಳ ದಾರಿಯ ತುಳಿದರೆ
ಕಷ್ಟ ಸುಖಗಳಾಚೆಯ ಬಯಲು !
ಬೆವರ ಸೋಕಿ ಮುದವನೀವ ತಂಪು ಗಾಳಿ!!

 

-------------------------------------------

ಚಿತ್ರ  : ಫ್ಲಿಕರ್ ನಿಂದ

 

ಸೈಕಲ್ ನಲ್ಲಿ ಆಫಿಸ್ ಗೆ ಹೋಗಬೇಕೆನ್ನುವುದು ಬಹಳ ದಿನಗಳ ಕನಸು. ಇದೀಗ ನನಸಾಗಿದೆ. ದಿನಕ್ಕೆ ೧೪ ಕಿಲೋಮೀಟರ್ ಸೈಕ್ಲಿಂಗ್.

ಪವರ್ ಸ್ಟೀರಿಂಗ್, ಪವರ್ ಬ್ರೆಕ್ಸ್ ಇರುವ ಕಾರುಗಳಲ್ಲಿ ಹೋಗಿಬರುವ ನಮಗೆ ರಸ್ತೆಯ ಮೇಲಿರುವ ಏರಿಳಿವುಗಳು ಗೊತ್ತಾಗುವುದೇ ಇಲ್ಲ. ಸ್ವಲ್ಪ ಗಮನವಿಟ್ಟು ನೋಡಿದರೆ ಸೈಕ್ಲಿಂಗ್ ಜೀವನದ ಸತ್ಯಗಳನ್ನು ತಿಳಿ ಹೇಳುತ್ತದೆ. ಏರಿಳಿವುಗಳನ್ನು ಶುಗರ್ ಕೋಟ್ ಮಾಡದೆ ಇದ್ದುದನ್ನು ಇದ್ದ ಹಾಗೆ ನಮಗೆ ಕೊಡುತ್ತದೆ, ಜೊತೆಗೆ ಆರೋಗ್ಯವನ್ನೂ. ಪರಿಸರಕ್ಕೆ ಒಳ್ಳೆಯದು ಮಾಡುತ್ತದೆ.

ನೀವೂ ಸೈಕ್ಲಿಂಗ್ ಮಾಡಿ.

 

ವಸಂತ್ ಕಜೆ.




Rating
No votes yet

Comments