ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು
ನಾನು ಇಂದು ಮುಂಜಾನೆ ಬ್ಲಾಗ್ ಒಂದರಲ್ಲಿ ಬರೆದಿದ್ದ ಬುರ್ಖಾ ಕುರಿತಾದ ಲೇಖನಕ್ಕೆ ನನ್ನ ಅನಿಸಿಕೆಗಳನ್ನು ಸೇರಿಸಿದೆ.
ಅದನ್ನೇ ಇಲ್ಲಿ ಪ್ರಕಟಿಸಿದರೆ, ಮುಕ್ತ ಚರ್ಚೆಗೆ ಅನುಕೂಲವಾಗುತ್ತದೆ, ಎಲ್ಲರ ಅಭಿಪ್ರಾಯವೂ ತಿಳಿಯುತ್ತದೆ;
ನನ್ನ ಅಭಿಪ್ರಾಯದಲ್ಲಿ ತಪ್ಪಿದ್ದತೆ ತಿದ್ದಿಕೊಳ್ಳಬಹುದೆಂದು ತಿಳಿದು, ಇಲ್ಲಿ ಅದನ್ನು ಪ್ರಕಟಿಸುತ್ತಿರುವೆ.
ಮೂಲ ಲೇಖನದಲ್ಲಿ "ಯೂರೋಪಿನಲ್ಲಿ ಬುರ್ಖಾ ನಿಷೇಧ" ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ.
ಆ ಲೇಖಕರ ಪ್ರಕಾರ ಬುರ್ಖ ಹಾಕಿಕೊಳ್ಳುವುದು ಅವರಿಗೆ ವೈಯಕ್ತಿಕವಾಗಿ ಸರಿಯೆನಿಸದಿದ್ದರೂ, ಅದನ್ನು ನಿಷೇಧಿಸುತ್ತಿರುವುದು ತಪ್ಪು.
ಆಧುನಿಕತೆಯ ಹೆಸರಿನಲ್ಲಿ, ಮುಕ್ತತೆಯ ಹೆಸರಿನಲ್ಲಿ, ಇದನ್ನೆಲ್ಲಾ ಮಾಡುತ್ತಿದ್ದಾರೆ.
ಮಹಿಳೆಗೆ ತನಗಿಷ್ಟ ಬಂದ ಉಡುಪು ಧರಿಸುವ ಸ್ವಾತಂತ್ರ್ಯ ಇರಬೇಕು.
ಮುಸಲ್ಮಾನ ಮಹಿಳೆಯರು ಸ್ವಯಿಚ್ಚೆಯಿಂದಲೇ ಬುರ್ಖಾ ಧರಿಸುತ್ತಾರೆ.
ಅವರನ್ನು ಯಾರೂ ಒತ್ತಾಯಿಸುತ್ತಿಲ್ಲ ಮತ್ತು ಇಸ್ಲಾಂನಲ್ಲೂ ಬುರ್ಖಾ ಧರಿಸಲೇಬೇಕೆಂಬ ನಿಯಮವಿಲ್ಲ.
ಕುವೈತ್ ಅರಬ್ ಮುಸ್ಲಿಂ ರಾಷ್ಟ್ರ. ಅಲ್ಲಿನ ಸಂಸತ್ತಿನಲ್ಲಿ ಕೆಲವರು ಮಹಿಳಾ ಸದಸ್ಯೆಯರೂ ಇದ್ದಾರೆ. ಅವರಲ್ಲಿ ಇಬ್ಬರು ಸಂಸದೆಯರು ಹಿಜಾಬ್ ಧರಿಸುವುದಿಲ್ಲ. ಅರಬ್ ರಾಷ್ಟ್ರವಾದ ಮೇಲೆ ಧರ್ಮಗುರುಗಳ ವರ್ಚಸ್ಸು ಇಲ್ಲದ್ದಿಲ್ಲ, ಆದರೂ ಯಾವುದೇ ಧರ್ಮ ಗುರುವೂ ಇದುವರೆಗೆ ಆ ಸಂಸದೆಯರ ವಿರುದ್ಧ ಫತ್ವ ಹೊರಡಿಸಲಿಲ್ಲ.ಮಧ್ಯ ಪ್ರಾಚ್ಯದ “ಜೋರ್ಡನ್” ದೇಶ ಪುರಾತನ ವಂಶಸ್ಥರ ರಾಜಮನೆತನ ಆಳುವ ದೇಶ. ಇಲ್ಲಿನ ರಾಜ ಅಬ್ದುಲ್ಲಾ ರ ಪತ್ನಿ “ರಾನಿಯಾ” ಹಿಜಾಬ ಧರಿಸುವುದಿಲ್ಲ. ಜೋರ್ಡನ್ ದೇಶದ ಧರ್ಮಗುರುಗಳು ಆಕೆಯ ವಿರುದ್ಧ ಫತ್ವ ಹೊರಡಿಸಲಿಲ್ಲ. ಜೋರ್ಡನ್ ದೇಶದ ರಾಣಿ ಮಾತು ದಿವಂಗತ ಬೆನಜೀರ್ ಭುಟ್ಟೋ ಹಿಜಾಬ್ ಧರಿಸದೆಯೂ ಮುಸ್ಲಿಮರಾಗಿರಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟು ಇಸ್ಲಾಂ ಯಾವ ರೀತಿ ಶಿಷ್ಟಾಚಾರ ಮತ್ತು ಆಧುನಿಕತೆಯೊಂದಿಗೆ ಹೆಜ್ಜೆ ಹಾಕಬಲ್ಲದು ಎಂದು ತೋರಿಸಿ ಕೊಟ್ಟ ಮುಸ್ಲಿಂ ಮಹಿಳೆಯರು.
ಮತ್ತು ತಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳಲು ಅವರು ಈ ಒಂದು ಘಟನೆಯನ್ನು ಉದಾಹರಿಸಿದ್ದರು:
ಪುರಾತನ ನಾಗರೀಕತೆಯ ತವರಾದ ಈಜಿಪ್ಟ್ ದೇಶ ಇಸ್ಲಾಂ ಧರ್ಮವನ್ನ ಅನುಸರಿಸುವ ದೇಶ. ಅಲ್ಲಿನ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯ ಅಲ್- ಅಜ್ಹರ್ ಸ್ಥಾಪಿತ ವಾಗಿದ್ದು ಕ್ರಿ. ಷ ೯೫೦ ರಲ್ಲಿ. ಅಲ್ಲಿನ “ರೆಕ್ಟರ್” ಆಗಿದ್ದ ಇತ್ತೀಚೆಗೆ ದಿವಂಗತರಾದ ಶೇಖ್ ತಂತಾವೀ. ಇವರು ಜಗದ್ವಿಖ್ಯಾತ ಮುಸ್ಲಿಂ ವಿಧ್ವಾಂಸ. ಅತ್ಯಂತ ಕ್ಲಿಷ್ಟ ಶರಿಯಾ ದ ಸಮಸ್ಯೆಗಳಿಗೆ ಮುಸ್ಲಿಂ ವಿಶ್ವ ಉತ್ತರ ಅರಸೋದು ಇವರಲ್ಲಿ. ಆರು ತಿಂಗಳ ಹಿಂದೆ ನಡೆದ ವಿಶ್ವ ವಿದ್ಯಾಲಯದ ಸಮಾರಂಭವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಭಿಕರಲ್ಲಿ ಒಬ್ಬ ಹದಿ ಹರೆಯದ ಯುವತಿಯೊಬ್ಬಳು ಹಿಜಾಬ್ ಮಾತ್ರವಲ್ಲದೆ ಕಣ್ಣು ಮಾತ್ರ ಕಾಣುವಂಥ “ನಿಕಾಬ್” ಸಹ ಧರಿಸಿದ್ದಳು. ಭಾಷಣ ಮಾಡುತ್ತಿದ್ದ ತಂತಾವೀ ಯುವತಿಗೆ ಹೇಳಿದರು ಮುಖದ ಮೇಲಿನ ನಿಕಾಬ್ ತೆಗೆಯುವಂತೆ. ಆಕೆ ಒಪ್ಪಲಿಲ್ಲ. ಒತ್ತಾಯಿಸಿದಾಗ ಆಕೆ ಹೇಳಿದಳು ಇದು ನನ್ನ ಧಾರ್ಮಿಕ ಉಡುಗೆ, ನನ್ನ ಸ್ವಂತ ಇಷ್ಟದಿಂದ ಧರಿಸಿದ್ದು ಎಂದು. ಇದನ್ನು ಕೇಳಿ ಕುಪಿತರಾದ ತಂತಾವೀ ಹೇಳದರು, ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿರುವ ಈ ಸುಪ್ರಸಿದ್ಧ ವಿದ್ಯಾಲಯದ ಕುಲಪತಿಯಾದ ನನಗಿಂತ ನಿನಗೆ ಗೊತ್ತೋ ಇಸ್ಲಾಮಿನ ಉಡುಗೆ ಬಗ್ಗೆ? ನೀನು ಧರಿಸುತ್ತಿರುವ ಮುಖ ಮುಚ್ಚಿ ಕೊಳ್ಳುವ ನಿಕಾಬ್ ಇಸ್ಲಾಮಿನ ಕಾನೂನಲ್ಲ, ಅದೊಂದು ಸಾಮಾಜಿಕ ಉಡುಗೆ ಎಂದು ಹೇಳಿ ಆಕೆಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಅದೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತು ಮುಸ್ಲಿಂ ಜಗತ್ತಿನಲ್ಲಿ, ವಿಶೇಷವಾಗಿ ಅರಬ್ ವಲಯಗಳಲ್ಲಿ. ಆಕೆ ಯಾರ ಬಲವಂತವೂ ಇಲ್ಲದೆ ತನ್ನ ಇಷ್ಟಾನುಸಾರ ಧರಿಸಿದ ವಸ್ತ್ರಕ್ಕೆ ಈ ವಿಧ್ವಾಂಸರ ಆಕ್ಷೇಪವೇಕೆ ಎಂದು ಅವರನ್ನು ಟೀಕಿಸಲಾಯಿತು.
ಅದಕ್ಕೆ ನನ್ನ ಪ್ರತಿಕ್ರಿಯೆ ಹೀಗಿದೆ:
ನಾನು ಹಲವು ವರ್ಷಗಳ ಕಾಲ ಕಾರವಾರ ಜಿಲ್ಲೆಯಲ್ಲಿದ್ದೆ.
ಹೀಗಾಗಿ ಭಟ್ಕಳಕ್ಕೆ ನೂರಾರು ಸಲ ಹೋಗಿ ಬರುವ ಅವಕಾಶ ಸಿಕ್ಕಿತ್ತು.
ನಾನು ಹಾಗೆ ಹೋದಾಗಲೆಲ್ಲಾ, ಈ ಒಂದು ಅಂಶವನ್ನು ಗಮನಿಸಿದ್ದೆ.
ಇಂದಿಗೂ ಭಟ್ಕಳವೆಂದರೆ ನನಗೆ ಮೊದಲಿಗೆ ನೆನಪಿಗೆ ಬರುವುದು ಈ ಕೆಳಗಿನ ದೃಶ್ಯವೇ.ಇದನ್ನು ನಾನು ಹತ್ತಾರು ಬಾರಿ ಗಮನಿಸಿದ್ದರಿಂದ ಇದು ಮನಸ್ಸಿನಲ್ಲಿ ಅಚ್ಚುಳಿದಿದೆ.
ಭಟ್ಕಳದ ಅನೇಕ ವಿದ್ಯಾರ್ಥಿಗಳು ಬಸ್‍ನಲ್ಲಿ ಶಾಲೆ ಹಾಗೂ ಕಾಲೇಜಿಗೆ ಹೋಗಿಬರುತ್ತಾರೆ. ಇಲ್ಲಿ ಭಟ್ಕಳ ಎಂದರೆ, ನಗರದ ಜೊತೆಗೆ ಸುತ್ತಲಿನ ಗ್ರಾಮಗಳೂ ಸೇರಿದಂತೆ. ಕೆಲವರು ಗ್ರಾಮಗಳಿಂದ ನಗರಕ್ಕೆ ಬರುತ್ತಾರೆ; ಮತ್ತೆ ಕೆಲವರು ಭಟ್ಕಳದಿಂದ ಅಂಕೋಲಾ ಹಾಗೂ ಕುಮಟಾಕ್ಕೆ ಹೋಗುತ್ತಾರೆ.
ಭಟ್ಕಳದಿಂದ ಹೊರಡುವಾಗ ಬಸ್ಸಿಗೆ ಹತ್ತುವ ಹೆಣ್ಣುಮಕ್ಕಳೆಲ್ಲಾ ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾರೆ. ಬಸ್ ಹೊರಟು ಹತ್ತು-ಹದಿನೈದು ನಿಮಿಷಗಳಾದ ಕೂಡಲೇ ಅವರದನ್ನು ಕಳಚುತ್ತಾರೆ. ನನಗದನ್ನು ನೋಡಿ ಆಶ್ಚರ್ಯ. ಬುರ್ಖಾದ ಒಳಗೆ ಒಂದು ಸಲ್ವಾರ್ ಕಮೀಸ್ ಅಥವಾ ಸೀರೆ ಇರುತ್ತದೆ ಎಂಬುದು ನನಗೆ ತಿಳಿದದ್ದು ಅದೇ ಮೊದಲು.
ಅದೇ ರೀತಿ ಭಟ್ಕಳಕ್ಕೆ ವಾಪಸ್ಸಾಗುವ ಬಸ್ಸಿನಲ್ಲಿ, ಭಟ್ಕಳ ಹತ್ತಿರ ಬರುತ್ತಿದ್ದಂತೆ ತಮ್ಮ ಕೈಚೀಲಗಳಿಂದ ಕಪ್ಪು ಬಣ್ಣದ ಬುರ್ಖಾ ತೆಗೆದು ಹಾಕಿಕೊಳ್ಳುತ್ತಾರೆ.
ಏಕೆ ಹೀಗೆ? ಅವರು ಇದನ್ನು ಯಾರದೋ ಒತ್ತಾಯಕ್ಕೆ ಒಳಗಾಗಿ ಹಾಕಿಕೊಳ್ಳುತ್ತಿರುವರು ಎನಿಸುವುದಲ್ಲವೇ? ಯಾರು ಒತ್ತಾಯ ಮಾಡುವವರು? ತಮ್ಮಿಷ್ಟದಂತೆ ಬೇರೆ ವಸ್ತ್ರವನ್ನು ಹಾಕಿಕೊಂಡರೆ ಏನು ಮಾಡುತ್ತಾರೆ?
ಬುರ್ಖಾ ಬಿಟ್ಟು ಉಳಿದೆಲ್ಲಾ ವಸ್ತ್ರಗಳು ಮಹಿಳೆಯನ್ನು ನಗ್ನಳನ್ನಾಗಿ ತೋರಿಸುತ್ತವೆಯೇ? ಬುರ್ಖಾ ಕುರಿತಾಗಿ ಏಕಿಷ್ಟು ಪ್ರೀತಿ?
ಮಹಿಳೆಯ ಮೇಲೆ ಮಾತ್ರ ಯಾಕೆ ಈ ನಿರ್ಬಂಧ? ಗಂಡಸರನ್ನು ನಿರ್ಬಂಧಿಸುವುದು ಸಾಧ್ಯವಿಲ್ಲವೆಂದೇ?
ಮಹಿಳೆಗೆ ತನಗಿಷ್ಟ ಬಂದ ವಸ್ತ್ರವನ್ನು ಧರಿಸಲು ಏಕೆ ಸ್ವಾತಂತ್ರ್ಯವಿಲ್ಲ?ಭಟ್ಕಳದ ದೃಶ್ಯ ಕಣ್ಮುಂದೆ ಬಂದಾಗೆಲ್ಲಾ ನನಗನ್ನಿಸುವುದು, ಮುಸಲ್ಮಾನ ಸಮಾಜದ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಕಡಿಮೆ. ಭಟ್ಕಳದ ಕಾಲೇಜಿನ ವಿದ್ಯಾರ್ಥಿಗಳ ನಡುವೆಯೂ ನಾನು ಓಡಾಡಿದ್ದೇನೆ, ಮಾತನಾಡಿದ್ದೇನೆ. ಅವರಲ್ಲೂ ಇದೇ ರೀತಿಯ ಅಭಿಪ್ರಾಯಗಳನ್ನು ಕೇಳಿದ್ದೇನೆ. ನನಗೆ ಆಶ್ಚರ್ಯ ತರಿಸಿದ ಸಂಗತಿಯೆಂದರೆ, ಅನೇಕ ಮುಸಲ್ಮಾನ ವಿದ್ಯಾರ್ಥಿನಿಯರು ಹಿಂದೂ ಹುಡುಗರನ್ನು ಮದುವೆಯಾಗಲು ಇಚ್ಚೆ ವ್ಯಕ್ತಪಡಿಸಿದ್ದು!
ಇನ್ನು ಬುರ್ಖಾದಿಂದಾಗಿ ಆಗಿರುವ ಸಮಸ್ಯೆಗಳನ್ನು ನೀವು ಚರ್ಚಿಸಿಲ್ಲ. ನಿಮಗದು ತಿಳಿದಿಲ್ಲವೆಂದೇ ಭಾವಿಸುವೆ.
ಮೊದಲನೆಯದಾಗಿ, ಪಾಠ-ಪ್ರವಚನಗಳಲ್ಲಿ, ಮಾತನಾಡುತ್ತಿರುವ ವ್ಯಕ್ತಿಗೆ ತಾನು ಯಾರನ್ನು ಸಂಬೋಧಿಸುತ್ತಿದ್ದೇನೋ ಅವರ ಕಣ್ಣನ್ನು ನೋಡುವುದು ಆವಶ್ಯಕ. ಪರಿಣಾಮಕಾರೀ ಭಾಷಣಗಳಿಗೆ ಈ eye-to-eye contact ತೀರಾ ಆವಶ್ಯಕ. ಬುರ್ಖಾ ಧರಿಸಿದ ವ್ಯಕ್ತಿಗೆ ಇದು ಅಸಾಧ್ಯ.
ಪ್ರಾಯಶಃ ಶೇಖ್ ತಂತಾವಿ ಇದಕ್ಕಾಗಿಯೇ ಬುರ್ಖಾ ಧರಿಸಿದ್ದನ್ನು ಖಂಡಿಸಿರಬೇಕು. ಮತ್ತು ಆ ಘಟನೆಯಲ್ಲಿ, ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿ ಅದನ್ನು ತೆಗೆದಿದ್ದರೆ ಆಗುತ್ತಿದ್ದ ಅನಾಹುತವೇನು? ಅಲ್ಲಿನ ಸಂದರ್ಭಕ್ಕೆ ಬುರ್ಖಾದ ಆವಶ್ಯಕತೆ ಇರಲಿಲ್ಲ ಎಂದೇ ನನ್ನ ಗಟ್ಟಿ ಅಭಿಪ್ರಾಯ.
ಎರಡನೆಯದಾಗಿ, ಬುರ್ಖಾವನ್ನು ಅನೇಕ ಜನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅನೇಕ ಕಡೆ ಬುರ್ಖಾ ಒಳಗೆ ಗಂಡಸರಿದ್ದದ್ದು ಕಂಡು ಬಂದಿದೆ. ಬುರ್ಖಾ ತೆಗೆಯದೆ ಅದು ತಿಳಿಯುವುದಿಲ್ಲ. ತೆಗೆದರೆ ತಮ್ಮ ಮತ-ಸಂಪ್ರದಾಯಕ್ಕೆ ಮಾಡಿದ ಅಪಮಾನ ಎಂದು ಮುಸಲ್ಮಾನರು ಕೂಗಾಡುತ್ತಾರೆ. ಇದಕ್ಕೆ ಏನು ಪರಿಹಾರ?
ಇದಕ್ಕಾಗಿಯೇ ಚುನಾವಣಾ ಗುರುತು ಪತ್ರಕ್ಕೆ ಬುರ್ಖಾ ತೆಗೆದು ಚಿತ್ರ ತೆಗೆಯಬೇಕೆಂದು ತಿಳಿಸಿರುವುದು. ಇದು ಇಸ್ಲಾಂನ ಕಟ್ಟಳೆಯಲ್ಲಿ ಇಲ್ಲವೆಂದು ನೀವೇ ತಿಳಿಸಿರುವಿರಿ. ಹೀಗಿರುವಾಗ ಮುಸಲ್ಮಾನ ಮೌಲ್ವಿಗಳು ಇದನ್ನು ವಿರೋಧಿಸುತ್ತಿರುವುದು ಏಕೆ? ನಮ್ಮ ಚುನಾವಣಾ ಪ್ರಕ್ರಿಯೆಗೆ, ನಮ್ಮ ಕಾನೂನಿಗೆ, ನಮ್ಮ ಆಡಳಿತಕ್ಕೆ, ನಮ್ಮ ಆಂತರಿಕ ಭಧ್ರತೆಗೆ ಅನುಕೂಲವಾಗಿ ನಾವು ನಡೆದುಕೊಳ್ಳಬೇಕಲ್ಲವೇ? ಅದಕ್ಕನುಕೂಲವಾಗಿ ನಮ್ಮ ಮತ-ಧರ್ಮ-ಸಂಪ್ರದಾಯಗಳನ್ನು ಮಾರ್ಪಡಿಸಬೇಕಲ್ಲವೇ? ಅದರಲ್ಲಿ ತಪ್ಪೇನಿದೆ?
ಮೂರನೆಯದಾಗಿ, ಭಾರತದ ಹೆಚ್ಚಿನ ಸ್ಥಳಗಳು ಬಿಸಿ ಪ್ರದೇಶಗಳು. ಚಳಿಗಾಲವನ್ನು ಹೊರತು ಪಡಿಸಿ, ಉಳಿದೆಲ್ಲಾ ಸಮಯದಲ್ಲೂ ಇಲ್ಲಿ ಹಗುರವಾದ, light coloured ಉಡುಪು ಧರಿಸುವುದು ಒಳ್ಳೆಯದು. Dark coloured ಅದರಲ್ಲೂ ಕಪ್ಪು ಬಣ್ಣದ್ದಂತೂ ಚಿತ್ರಹಿಂಸೆ. ಹೀಗಾಗಿ ಇಲ್ಲಿನ ಹವಾಮಾನಕ್ಕೆ ಇದು ಅನುಕೂಲವಾಗಿಲ್ಲ ಅಲ್ಲವೇ?
ಇದೆಲ್ಲಾ ಯೋಚಿಸಿದಾಗ ನನಗನ್ನಿಸುವುದು, ಬುರ್ಖಾ ಬಗ್ಗೆ ಮುಸಲ್ಮಾನ ಸಮಾಜ ಇಷ್ಟೆಲ್ಲಾ ಒತ್ತಡ ತರುವುದು ತರವಲ್ಲ. ಮುಸಲ್ಮಾನ ಸಮಾಜ ಮುಕ್ತವಾದರೆ ಈ ರೀತಿಯ ಸಮಸ್ಯೆಗಳು ತನ್ನಿಂತಾನೇ ಪರಿಹಾರವಾಗುತ್ತವೆ. ಕನಿಷ್ಠಪಕ್ಷ ವಿದ್ಯಾವಂತ ಮುಸಲ್ಮಾನರಾದರೂ ಇದನ್ನರಿತು ಸುಧಾರಣೆ ಕಂಡುಕೊಳ್ಳಲಿ. ಯಾವುದೋ ದೇಶದಲ್ಲಿ, ಯಾವೊದೋ ಕಾಲದಲ್ಲಿ, ಯಾವುದೋ ಸನ್ನಿವೇಶದಲ್ಲಿ, ಉಂಟಾದ ಪದ್ಧತಿಗಳೇ ಎಲ್ಲ ದೇಶ, ಎಲ್ಲ ಕಾಲಕ್ಕೂ ಅನ್ವಯವಾಗಬೇಕು ಎಂದು ಪಟ್ಟುಹಿಡಿಯುವುದು ಅವೈಜ್ಞಾನಿಕ, ಅದು ಸಲ್ಲದು.
Comments
ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು
In reply to ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು by harshanettar
ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು
ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು
In reply to ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು by mpneerkaje
ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು
In reply to ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು by ssnkumar
ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು
In reply to ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು by ssnkumar
ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು
In reply to ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು by mpneerkaje
ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು
In reply to ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು by ssnkumar
ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು
In reply to ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು by mpneerkaje
ಉ: ಬುರ್ಖಾ, ಇಸ್ಲಾಂ ಮತ್ತು ಮುಸ್ಲಿಮರು