
ಸೆಂಟ್ರಲ್ ಬ್ಯೂರೊ ಆಫ್ ಇನ್‍ವೆಸ್ಟಿಗೇಶನ್ ಅನ್ನೋ ಈ ಸಂಸ್ಥೆ ನಮ್ಮ ರಾಷ್ಟ್ರದ ಅತ್ಯುನತ ತನಿಖಾ ಸಂಸ್ಥೆ.
೧೯೬೩ ರಲ್ಲಿ ಸ್ಥಾಪನೆಯಾದ ಈ ತನಿಖಾ ಸಂಸ್ಥೆ official Interpol unit for india ಕೂಡಾ ಹೌದು.
ಈ ತನಿಖಾ ಸಂಸ್ಥೆಯ ಕಳೆದ ಕೆಲವು ವರ್ಷಗಳ ಕೆಲವು ಸಾಧನೆಯ ಹಿನ್ನೋಟ.
೧.ತಾಜ್ ಕಾರಿಡಾರ‍್ ೧೫೦ ಕೋಟಿ ಅಕ್ರಮದಲ್ಲಿ ಹಾಗೂ ಹೆಚ್ಚುವರಿ ಆಸ್ತಿ ಹೊಂದಿರುವಂತೆ ಮಾಯಾವತಿ ವಿರುದ್ಧ ಸಿಬಿಐ ತನಿಖೆ.
ಕೆಲವು ತಿಂಗಳುಗಳ ಹಿಂದೆ ಸಾಕಷ್ಟು ಸುದ್ದಿ ಮಾಡಿದ ವಿಷಯ .ಅದೇ ಸಮಯದಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣೆಯಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ಮಂಡನೆ ಘೋಷಿಸಿತು.ಯುಪಿಎ ಸರ್ಕಾರಕ್ಕೆ ಉಳಿವಿನ ಪ್ರಶ್ನೆಯಾಯಿತು. ಕಾಂಗ್ರೆಸ್ ವಿರುದ್ಧ ಮುಖ್ಯವಾಗಿ ಗಾಂಧಿ ಕುಟುಂಬ ವಿರುದ್ಧ ಬೀದಿ ಕಾಳಗಕ್ಕಿಳಿದು ರಂಪ ಮಾಡಿ ತಾನೇ ಮುಂದಿನ ಪ್ರಧಾನಮಂತ್ರಿ ಎಂದೇ ಸಾರುತ್ತಿದ್ದ ಮಾಯಾವತಿ ತನ್ನ ಬಿಎಸ್‍ಪಿ ಪಕ್ಷ ವತಿಯಿಂದ ಯುಪಿಎ ಗೆ ಬೆಂಬಲ ಸೂಚಿಸಿದರು.
ಇದಕ್ಕೆ ಮಾಯಾವತಿ ಕೊಟ್ಟ ಕಾರಣ ಅತಂತ್ರತೆ ನಿರ್ಮಾಣ ಬೇಡವೆಂಬುದು.
http://www.dnaindia.com/india/report_bsp-declares-support-to-government-in-lok-sabha-on-cut-motion_1376102
ಆರಂಭದಲ್ಲಿ ಬಹಳ ಚುರುಕಾಗಿ ಸಾಗಿದ್ದ ಈ ತನಿಖೆ ಬೆಂಬಲ ಘೋಷಣೆ ನಂತರ ಟುಸ್ಸ್ ಆಯಿತು.ಬೆಂಬಲದ ಹಿಂದಿನ ಶರತ್ತೇನು?ಗೊತ್ತಿಲ್ಲ.ಸಿಬಿಐ ಪಾತ್ರವೇನು ಗೊತ್ತಿಲ್ಲ.
೨.ಸಿಖ್ ದಂಗೆಯ ಮುಖ್ಯ ಆಪಾದಿತರಾದ ಕಾಂಗ್ರೆಸ್ ಮುಖಂಡರಾದ ಜಗದೀಶ್ ಟೈಟ್ಲರ್,ಕಮಲ್ ನಾಥ್ ಆರೋಪ ಮುಖ್ತರು ಎಂದು ಸಿಬಿಐ ತೀರ್ಪು.
ಬಹು ಟೀಕೆಗೊಳಗಾದ ಇಂದಿರಾಳ ಆಪರೇಶನ್ ಬ್ಲೂಸ್ಟಾರ್ ತನ್ನ ಪ್ರಾಣಕ್ಕೇ ಸಂಚು ತಂದಿತು.೧೯೮೪ನೇ ಇಸವಿಯಲ್ಲಿ ಇಂದಿರಾ ಹತ್ಯಯ ನಂತರ ಆಕೆ ಸಾವಿಗೆ ಕಾರಣ ಸಿಖ್‍ಜನಾಂಗದವರೆಂಬ ಕಾರಣಕ್ಕೆ ಆಕೆಯ ಮೇಲಿನ ಅತಿರೇಕ ಭಕ್ತಿ ,ಕುರುಡು ಅಭಿಮಾನವಿದ್ದಂತಹವರು ಮಾಡಿದ ಕ್ರೌರ್ಯವದು.೩೦೦೦ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.
http://timesofindia.indiatimes.com/CBI-clears-Tytler-in-84-anti-Sikh-riots-case/articleshow/4348703.cms
ಬೇರೆ ದೇಶಗಳಲ್ಲಾಗಿದ್ದರೆ ಗಲ್ಲು ಶಿಕ್ಷೆಯಾಗುತಿತ್ತು.ನಮ್ಮಲ್ಲಿ ೨೪ ವರ್ಷ ತಡೆದು ಜನ ಮರೆತರು ಅಂತಾದಾಗ ಮುಕ್ತಿ ಕೊಟ್ಟುಬಿಡುತ್ತಾರೆ.
೩.ಇಟಲಿಯ Ottavio Quattrocchi ನನ್ನು ಬೋಫೋರ್ಸ್ ನಿಂದ ಮುಕ್ತಿಗೊಳಿಸಬೇಕೆಂದು ಸಿಬಿಐ ಸುಪ್ರೀಮ್ ಕೋರ್ಟ್ ನಲ್ಲಿ ಮನವಿ.
೧೯೮೪ ನಂತರದ ದಿನಗಳು.Mr Clean ಎಂದೂ ಅತ್ಯಂತ ಕಿರಿಯ ಪ್ರಧಾನಿ ಎಂದೂ ದೇಶದಲ್ಲೇ ಜನಪ್ರಿಯವಾಗಿದ್ದವರು ರಾಜೇವ್ ಗಾಂಧಿ.16 ಆಪ್ರಿಲ್ 1987 ರಂದು the Swedish State Radio ಸ್ವೀಡನ್ ನ್ನಿನ ರೇಡಿಯೋ "ಬೋಫೋರ್ಸ್"- ಸ್ವೀಡನ್ ನ್ನಿನ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕ ನಡೆಸಿದ under-cover operation ಹಾಗೂ ಅದರಲ್ಲಿನ ಭಾರತ ಸರ್ಕಾರ (ರಾಜೀವ್ ನೇರ) ಪಾಲುದಾರಿಕೆಯನ್ನು ಪ್ರಸಾರ ಮಾಡಿತ್ತು.ಪತ್ರಕರ್ತ ಎನ್ ರಾಮ್ ತನಿಖೆ(journalistic investigation ) ನಡೆಸಿ ಪತ್ರಿಕೆಯಲ್ಲಿ ಪ್ರಕಟಿಸಿದರು.ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಈ ಪ್ರಸಂಗದ ಆಳ ಎಷ್ಟಿತ್ತೆಂದರೆ ಅಂದಿನ ರಾಜೀವ್ ಸರ್ಕಾರದ ರಕ್ಷಣಾ ಮಂತ್ರಿ ವಿಪಿ ಸಿಂಗ್ ಇದು ತನಗೆ ತಿಳಿಯದಂತೆ ಪ್ರಧಾನಮಂತ್ರಿಗಳು ನಡೆಸಿದ್ದ (ಅ)ವ್ಯವಹಾರವೆಂದು ತನಿಖೆಗೆ ಆದೇಶಿಸಿದರು.ಇದಕ್ಕೆ ರಾಜೀವ್ ,ವಿಪಿ ಸಿಂಗ್ ತನಗೆ ತಿಳಿಸದಂತೆ ತನಿಖೆಗೆ ಆದೇಶಿಸಿದ್ದಾರೆಂದು ಆರೋಪಿಸಿದರು ಮತ್ತು ಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು.ಸಿಂಗ್ ಇದು ಅವ್ಯವಹಾರವನ್ನು ಮುಚ್ಚಿಡಲು ನಡೆಸಿದ ಹುನ್ನಾರವೆಂದು ರಾಜಿನಾಮೆಯಿತ್ತರು.ಕೊನೆಗೆ ಸಿಂಗ್‍ರನ್ನು ಕಾಂಗ್ರೆಸ್ ಪಕ್ಷದಿಂದಲೇ ಉಚ್ಛಾಟಿಸಲಾಯಿತು.
http://expressbuzz.com/nation/cbis-move-to-close-quattrocchi-case-deferred/187244.html
ಈ ಪ್ರಸಂಗದ ನಂತರವೇ ವಿಪಿ ಸಿಂಗ್ ಜನ ಮೋರ್ಚಾ ಪಕ್ಷ ಕಟ್ಟಿದ್ದು ಅದು ನೋತರ "ಜನತಾ ದಳ"ದ ರೂಪ ಪಡೆದಿದ್ದು.ಇದರ ನಂತರ ನಡೆದ ಚುಣಾವಣೆಯಲ್ಲಿ ಕಾಂಗ್ರೆಸ್ 401 ರಿಂದ 193seatಗೆ ಇಳಿಯಲು ಈ ಮೇಲೆ ನಡೆದ ಘಟನೆಗಳೂ ಸಾಕಷ್ಟು ತೂಕ ಪಡೆಯುತ್ತವೆ.
೪.ಇನ್ನು ಇತ್ತೀಚೆಗೆ ಹೊರಬಂದಂತಹ ತೀರ್ಪು:ಬೊಪಾಲ್ ಅನಿಲ ದುರಂತ ಕಮಲ್ ನಾಥ್ ,ಅರ್ಜುನ್ ಸಿಂಗ್ ಆರೋಪದಿಂದ ಮುಕ್ತಿ.
ಹದಿನೈದು ಸಾವಿರಕ್ಕೂ ಹೆಚ್ಚು ಪ್ರಾಣಗಳನ್ನು ಬಲಿತೆಗೆದುಕೊಂಡದ್ದು ಈ ಘಟನೆ ತನಿಖೆ ಸಿಬಿಐನದ್ದೇ.
http://sify.com/news/bhopal-gas-tragedy-verdict-slated-for-june-7-news-national-kfnx4cbchdi.html
http://www.newsofap.com/newsofap-17590-25-bhopal-gas-tragedy-rajiv-gandhi-helped-warren-anderson-escape- newsofap.html
http://expressbuzz.com/nation/cbis-move-to-close-quattrocchi-case-deferred/187244.html
೫.ಮುಲಾಯಂ ವಿರುದ್ಧ ಬ್ರಷ್ಟಾಚಾರ ಹಾಗೂ ಲಲ್ಲೂ ವಿರುದ್ಧದ ಬಹುಕೋಟಿ ಮೇವು ಹಗರಣದ ತನಿಖೆ ನಡೆಸಿದ್ದವರೂ ಸಿಬಿಐ ನವರೇ.
ಮುಲಾಯಂಗೆ ಮುಕ್ತಿವೆಂಬುದು ಯುಪಿಎ ಬೆಂಬಲಕೊಟ್ಟಿ ಸಿಕ್ಕಿತು.ಇನ್ನೂ ಲಾಲೂ ರೈಲ್ವೇ ಮಂತ್ರಿಯಾದ ಕಥೆ ಎಲ್ಲರಿಗೂ ತಿಳಿದಿದ್ದೇ.
http://www.indianexpress.com/news/i-requested-upa-govt-to-exonerate-mulayam-in-da-case-amar/574566/
೬.ಬಹುಕೋಟಿ ನಕಲಿ ಛಾಪಾಕಾಗದ ಆರೋಪಿ ಕರೀಂಲಾಲ ತೆಲಗಿ ಏನಾದ.?ಪಾಪ ಅವನದ್ದೇ ಒಂದು ಪಕ್ಷ ಒಂದಷ್ಟು ಎಂಪಿಗಳಿಲ್ಲದಿರುವುದೇ ಅವನ ತಪ್ಪಾಯಿತೇನೋ?
ಒಂದೆಂತೂ ಸ್ಪಷ್ಟ.ಸಿಬಿಐ ನನ್ನು ಕೇಂದ್ರ ಆಡಳಿತ ಪಕ್ಷ ರಾಜಕೀಯ ಬಲೆಯಂತೆ ಉಪಯೋಗಿಸಿಕೊಳ್ಳುತ್ತಿರುವುದು.ಹಾಗಾದಲ್ಲಿ ನಮ್ಮ ರಾಜ್ಯದಲ್ಲಿ ಈಗ ಎಲ್ಲೆಲ್ಲೂ.. ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆ ಆಗಲಿ.!ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆ ಆಗಲಿ.! ಎಂದು ಎದ್ದಿರುವ ಸಿಬಿಐ ಹವೆಯ ಒಳ ಉದ್ದೇಶವೇನು? ತನಿಖೆ ಸಿಬಿಐ ಗೆ ವಹಿಸಿದಲ್ಲಿ ನಿಶ್ಪಕ್ಷವಾದ ತನಿಖೆ ಖಂಡಿತವಾಗಿಯೂ ನಡೆಯುತ್ತದೆಯೇ?ಕೇವಲ ರೆಡ್ಡಿಗಳನ್ನು ತನಿಖೆಯಿಂದ ಬಗ್ಗಿಸಿ ಅವರಿಂದ ಲಾಭ(Party Fund)
ಪಡೆಯುವುದಿಲ್ಲವೆಂದೂ,ಅವರನ್ನೇ ಒಂದು ರಾಜಕೀಯ ಗಾಳ ಮಾಡಿಕೊಳ್ಳುವುದಿಲ್ಲವೆಂದೂ ಏನು ಗ್ಯಾರಂಟಿ?
ದೇವೇಗೌಡರು ಹೇಳುವಂತೆ ಸಿಬಿಐ congress bureau of investigation ಆಗಿದೆಯೇ?
ಪ್ರಶ್ನೆ ಒಂದು ಕಾಡುತ್ತೆ! ವಿರೋಧ ಪಕ್ಷದ ನಾಯಕರಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ನಿಜವಾದ ಕಳಕಳಿ ಇದೆಯೇ?! ಇದ್ದಲ್ಲಿ ಪ್ರಾಮಾಣಿಕ ತನಿಖೆ ಜೊತೆಗೆ ಗಣಿಗಾರಿಕೆಯನ್ನು ರಾಷ್ಟ್ರೀಕರಣ ಗೊಳಿಸಿ ಬರುವ ಲಾಭ ನೇರವಾಗಿ ಸರ್ಕಾರಕ್ಕೆ ಸೇರಲಿ ಎಂಬ ಬೇಡಿಕೆ ಇಡಬಹುದಲ್ಲವೇ?.ಸಮಗ್ರ ಗಣಿಗಾರಿಕೆಯಿಂದ ಆಗುತ್ತಿರುವ ಪರಿಸರ ಅಸಮತೋಲನ ಬಗ್ಗೆ ಕೂಡ ಗಮನ ಹರಿಸಬಹುದಲ್ಲವೇ?
ಸಣ್ಣವನಿದ್ದಾಗ ನೋಡಿದ ಸಿಬಿಐ ಶಂಕರ್ ಸಿನಿಮಾ ಶಂಕರ್ ನಾಗ್ ಮೇಲಿನ ಅಬಿಮಾನದ ಜೊತೆಗೆ ಸಿಬಿಐ ಅಧಿಕಾರಿಯಾಗಬೇಕೆಂಬ ಆಸೆಯೂ ಮೂಡಿಸಿತ್ತು.ಆದರೆ ಆ ಆಸೆ ಏಕೋ ಈಗಿಲ್ಲ.
(ಮೊದಲ ಬರಹ ತಪ್ಪುಗಳಿದ್ದಲ್ಲಿ ಕ್ಷಮೆ ಇರಲಿ.ತಿಳಿಸಿಕೊಟ್ಟಲ್ಲಿ ತಿದ್ದುಕೊಳ್ಳುವೆ)
--ಮನು
Comments
ಉ: ಸಿ ಬಿ ಐ--ಆಡಳಿತ ಪಕ್ಷದ ರಾಜಕೀಯ ಬಲೆಯಾಗಿದೆಯೇ
In reply to ಉ: ಸಿ ಬಿ ಐ--ಆಡಳಿತ ಪಕ್ಷದ ರಾಜಕೀಯ ಬಲೆಯಾಗಿದೆಯೇ by manju787
ಉ: ಸಿ ಬಿ ಐ--ಆಡಳಿತ ಪಕ್ಷದ ರಾಜಕೀಯ ಬಲೆಯಾಗಿದೆಯೇ
ಉ: ಸಿ ಬಿ ಐ--ಆಡಳಿತ ಪಕ್ಷದ ರಾಜಕೀಯ ಬಲೆಯಾಗಿದೆಯೇ