ಬಸಿರು

ಬಸಿರು

ಮಿಂಚಿನ ಜಗದೊಳಗೆ

ಕಂಚಿನ ಕಡಲೊಂದು

ಬೆಂದು ಬಸಿರಾಯಿತೆ

ಅದಾವ ಕಾರಣಕ್ಕೆ ಅದು ಉಸಿರಾಯಿತೆ

ಬಯಸಿತ್ತೆ ಹಡೆಯುವ ಜೀವ

ಬಯಸಿತ್ತೆ ಉಸಿರಾದ ಜೀವ

ಅದಾವ ಕಾರಣಕ್ಕೆ ಅದು ಉಸಿರಾಯಿತೆ

ಎಲ್ಲಿದೋ ಕಡಲು ಎಲ್ಲಿದೋ ಕಡಲು

ಎಲ್ಲಿದೋ ಕಾನನ ನಿಲ್ಲದ ಒತ್ತರದ ಮಿಲನ

ಬಯಸಿತ್ತೆ ಹಡೆಯುವ ಜೀವ

ಅದಾವ ಕಾರಣಕ್ಕೆ ಅದು ಉಸಿರಾಯಿತೆ

ಮೂಡಣದ ಕಿರಣ ಮೈಯ ಸೊಂಕಿತ್ತೆಚರ

ನೆತ್ತರದ ಮಡುವಳಗೆ ಮಿಂದೆ ಸೂರ್ಯೋದಯ

ಯಾರದೋ ಬಯಕೆಯಲ್ಲಿ ನಂದಿತ್ತೆ ನನ್ನ ಒಲವು

ಮಾರುವವರು, ಮುದುಕರು, ಹುಡುಗರು, ಕುರುಡರು,

ಕುಂಟರು ಕತ್ತಲ ಬೆತ್ತಲೊಳಗೆ ಎಲ್ಲರು ಒಂದೇ

ನುಸಿ ಚಳಿಯ ಸಂಜೆಯಲ್ಲಿ ಒಂಟಿ ಎತ್ತಿನಂತೆಮನೆಗೆ ಹೊರಟಿದ್ದೆ ತಪ್ಪೇ

ಬಯಸಿತ್ತೆ ಹಡೆಯುವ ಜೀವ ಬಯಸಿತ್ತೆಉಸಿರಾದ ಜೀವ

ಅದಾವ ಕಾರಣಕ್ಕೆ ಅದು ಉಸಿರಾಯಿತೇ.

Rating
No votes yet

Comments