ಕನಿಷ್ಠ ಶಬ್ದಗಳು, ಗರಿಷ್ಠ ಭಾವನೆಗಳು

ಕನಿಷ್ಠ ಶಬ್ದಗಳು, ಗರಿಷ್ಠ ಭಾವನೆಗಳು

 



"ಎಷ್ಟು ಸುಂದರವಾಗಿದೆ ಈ ಗುಡ್ಡ"


ನಾನಾಗಲೇ ಹೇಳಿದೆ ನಿನಗೆ" ಅವನೆಂದ ಚಹಾ ಹೀರುತ್ತಾ.


"ಹ್ಮ್ ಹ್ಮ್"


"ನಾವು ಯಾವುದಕ್ಕಾಗಿ ಬಂದಿದ್ದೆವೆಯೋ ಅದಕ್ಕೆ ಇದು ಪ್ರಶಸ್ತವಾದ ಸ್ಥಳ"  


"ಹೌದು ನಿರ್ಜನ ಪ್ರದೇಶ"


 "ಸುಂದರ ನಿಸರ್ಗ"  


"ರೋಮಾಂಟಿಕ್"


"ಆದರೆ ಈ ಸ್ಥಳ ರೋಮಾಂಟಿಕ್ ಆಗೋ ಅವಶ್ಯಕತೆ ಇರಲಿಲ್ಲ"


"ಸರಿ, ನಾವೇನು ಮಾಡೋಣ?"


ಆಕೆಯ ಪರ್ಸನ್ನು ಆಕೆಗೆ ಮರಳಿಸಿದಾಗ ಆಕೆ ಅದರ ಒಳಗೆ ನೋಡಿದಳು.


"ಇದರೊಳಗೇನೂ ಕಾಣ್ತಾ ಇಲ್ಲ ನನಗೆ"


"ಸರಿಯಾಗಿ ನೋಡು"


"ಇದ್ದರೆ ನನಗೆ ಕಾಣೋದಿಲ್ವಾ?


ಆಕೆ ಸರಿಯಾಗೇ ನೋಡಿದಳು, ಏನೂ ಕಾಣದಾದಾಗ ಬ್ಯಾಗನ್ನು ಬರಿದುಗೊಳಿಸಿದಳು, ಎಲ್ಲವನ್ನೂ ಕೆಳಕ್ಕೆ ಸುರಿದಳು  


ಇದೋ ಇಲ್ಲಿ ಎಂದು ಅವನು ಒಂದನ್ನು ಕೈಗೆತ್ತಿ ಕೊಂಡನು, ಅವಳಿಗೂ ಸಿಕ್ಕಿತು ಒಂದು.   


"ನನಗೆ ಈ "ನೀರ್ಗುಳ್ಳೆ" ಯೊಂದಿಗೆ ಆಡುವುದೆಂದರೆ ತುಂಬಾ ಇಷ್ಟ" ಎಂದಳು ಹುಬ್ಬನ್ನು ಹಾರಿಸುತ್ತಾ.


ಮೂಲ: ಆಂಗ್ಲ ಬ್ಲಾಗೊಂದರಲ್ಲಿ ಸಿಕ್ಕಿದ್ದು.


 


 

Rating
No votes yet

Comments