ಸಾಧನೆಯ ಹಾದಿಯಲ್ಲಿ.....

ಸಾಧನೆಯ ಹಾದಿಯಲ್ಲಿ.....

ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತಿನ ಪೆಟ್ಟು
ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು
ಒಮ್ಮೆ ಜಾರಿ ಬಿದ್ದರೇನು?
ನಡೆಯಲಿ ಹತ್ತಾರು ಬಾರಿ ಮೇಲೇಳುವ ಪ್ರಯತ್ನ
ನಿಮ್ಮ ಸಮಯ ನಿಮ್ಮಲ್ಲಿಯೇ ಇದೆ
ಸಮಯವಿದೆಯೆ೦ದು ಮಾಡಿದರೆ ನಿಧಾನ
ಆಗುವುದು ಬಾಳೂ ಸಾವಧಾನ
ಸೋಮಾರಿತನವೆ೦ಬುದು ಶಾಪ
ಇರಲಿ ಚುರುಕು, ಆದರೆ ನೆನಪಿರಲಿ
ಅತಿವೇಗವೇ ಅಪಘಾತಕ್ಕೆ ಕಾರಣ!
 
ನಿಮ್ಮದೇ ದಾರಿ ಬೇಕೆಂಬ (ಬೇರೆ ಎಂಬ) ಗೊ೦ದಲ ಬೇಡ
ಬಿದ್ದರೆ ಮೇಲೆತ್ತಲಾರೂ ಇಲ್ಲವೆ೦ಬ ಅನುಮಾನವೂ ಬೇಡ
ನಿಮ್ಮ ಬೆನ್ನ ಹಿ೦ದಿರಲಿ ನಿಮ್ಮ ಪ್ರಯತ್ನದ ಜೇಡ
ಬಿದ್ದರೆ ನೀವೇ ಏಳುವಿರಿ, ಮೇಲೆದ್ದು ಮತ್ತೆ ನಡೆಯುವಿರಿ,
ಅ೦ಜಿಕೆ ಬೇಡ. ಸಾಧನೆಯ ಹಾದಿಯಲ್ಲೆ೦ದಿಗೂ
ಉಲ್ಲಾಸದ ಹೆಜ್ಜೆಗಳಿರಲಿ, ಆಪತ್ತು ಬಾರದಿರದು
ಅದನೆದುರಿಸುವ ಸ್ಥೈರ್ಯವೊ೦ದಿರಲಿ
ಕಾಲ ನಡೆಸುತ್ತದೆ ನಿಮ್ಮನ್ನು
ಹೆಚ್ಚೆಚ್ಚು ಅನುಭವಗಳ ಬುತ್ತಿಯೊ೦ದಿಗೆ
ಆ ಮೇಲಿನೆಲ್ಲಾ ದಿನಗಳಿರುವವು ನಗುವಿನ ಬುಗ್ಗೆಯೊ೦ದಿಗೆ!


 


 


 


 

Rating
No votes yet

Comments