ಮನದೊಳ ಮಾತು.. ಪುಟ್ಟ ಜೀವಕೆ ಆಸರೆ ನೀನಾದೆ

ಮನದೊಳ ಮಾತು.. ಪುಟ್ಟ ಜೀವಕೆ ಆಸರೆ ನೀನಾದೆ

ಈ ಪುಟ್ಟ ಜೀವಕೇ ಆಸರೆ ನೀನಾದೆ,
ನನ್ನ ಈ ಭಾವಕೆ ಹೆಸರು ನೀನಾದೆ
ಬರಿದಾದ ಈ ದೇಹಕೆ ಉಸಿರನು ನೀ ತಂದೆ
ನಿನ್ನ ಹೆಸರಿಟ್ಟು ಕೂಗುವ ಮುನ್ನ ಕೈಬಿಟ್ಟು ಹೋಗೆಂದೆ...

ಕಾಣದ ಜೀವಕೆ ಕಣ್ಣುಗಳನು ನೀ ಕೊಟ್ಟೆ
ಕನಸಿನ ಲೋಕದಲಿ ಮೈ ಮರೆಸಿ ಬಿಟ್ಟೆ
ಮನಸಿನ ಅಂಗಳಕೆ ಬೆಳದಿಂಗಳನು ಕೊಟ್ಟೆ
ಇನ್ಯಾಕೆ ನನ್ನನ್ನು ಒಬ್ಬನೇ ಮಾಡಿಬಿಟ್ಟೆ?

ಹಸಿಯಾದ ಹಣ್ಣಿಗೆ ರಸವನು ನೀ ತಂದೆ
ಹಸಿವನು ಮರೆಸಿ ನೀನೇ ನನಗೆ ಉಸಿರೆಂದೆ
ಹತ್ತು ಜನರೆದುರಲ್ಲಿ ನನ್ನನ್ನು ಕಣ್ಮುಚ್ಚಿ ತಬ್ಬಿಕೊಂಡೆ
ಇನ್ಯಾಕೆ ನನ್ನನ್ನು ದೂರ ಮಾಡಿಕೊಂಡೆ

Rating
No votes yet