ಮುಖ್ಯಮಂತ್ರಿ ಬಂದಾಗ ಅಧಿಕಾರಿಗಳ ತಳಮಳ - ಪಕ್ಷಿ ನೋಟ
ಯಡಿಯೂರಪ್ಪನವರು ನಾಳೆ ಬರುತ್ತಾರೆಂದರೆ, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಿಂದಿನ ದಿನವೇ ಸಣ್ಣದಾಗಿ ಹೊಟ್ಟೆ ನೋವು ಆರಂಭವಾಗಿರುತ್ತೆ. ಇದರಲ್ಲಿ ಹಲವರು ತಪ್ಪಿಸಿಕೊಳ್ಳುವುದೇ ಹೆಚ್ಚು. ಕಾರಣ ನಮಗೆ ಗೊತ್ತಿಲ್ಲದ ಮಾಹಿತಿಯನ್ನು ಎಲ್ಲಿ ಕೇಳುತ್ತಾರೋ, ಎಲ್ಲರೆದುರು ಕ್ಯಾಕರಿಸಿ ಉಗಿಯುತ್ತಾರೋ ಎಂದು. ಹಾಗಾಗಿ ಕೆಲವೊಮ್ಮೆ ಸಣ್ಣ ಅಧಿಕಾರಿಗಳನ್ನು ಮುಖ್ಯಮಂತ್ರಿಗಳ ಮೀಟಿಂಗ್ ಗೆ ಕಳಿಸುವುದುಂಟು.
ಎಲ್ರೀ ಆ ರಸ್ತೆ ಕಾಮಗಾರಿ ಏನಾಯ್ತು.
ಸರ್ ಅದು ಈಗಾಗಲೆ ಟೆಂಡರ್ ಕರೆದು, ಮುಂದಿನ ವಾರದಿಂದ ಕೆಲಸ ಶುರು ಮಾಡುವಂತೆ ಹೇಳಿದೀವಿ ಸರ್.
ಅಲ್ರೀ ಮಳೆಗಾಲದಲ್ಲಿ ಮಾಡಿದ್ರೆ ಹಾಳಾಗಲ್ವಾ.
ಹೌದು ಸರ್. ಸರಿ ಬೇಡ ಅಂತಾ, ಮಳೆಗಾಗಲ ಮುಗಿದ ಮೇಲೆ ಶುರು ಮಾಡಕ್ಕೆ ಹೇಳ್ತೀನಿ ಸರ್. ಅಷ್ಟೊತ್ತಿಗೆ ಅವರ ಆಪ್ತರೊಬ್ಬರು ಮಧ್ಯ ಬಾಯಿ ಹಾಕಿ ಸರ್ ಬೇಸಿಗೆ ಎಂದರೆ ಬಾಳ ಲೇಟಾಗುತ್ತೆ. ಮಳೆ ಏನೂ ಸತತವಾಗಿ ಬರುವುದಿಲ್ಲ ಸುರು ಮಾಡ್ಲಿ ಬಿಟಿ ಸಾರ್.
ಸರ್ ಸುರು ಮಾಡಿಸ್ರಿ. ಆಯ್ತು ಸರ್.
ಕೆರೆ ರಿವಿಟ್ ಮೆಂಟ್ ಏಲ್ಲಿ ತನಕ ಬಂದಿದೆ
ಸರ್ 90% ಕೆಲಸ ಮುಗಿದಿದೆ. ಮಿಕ್ಕಿದ್ದು ಮಾಡು ಎಂದರೆ ದುಡ್ಡು ಬಂದ ಮೇಲೆ ಮಾಡ್ತೀನಿ ಅಂತಾನೆ ಸರ್. ಏ ಯಾರ್ರೀ ಕಂಟ್ರಾಕ್ಟರ್. ನೋಡಿ ಪಾ. ಇಂತಹುದಕ್ಕೆ ಎಲ್ಲಾ ತಡ ಮಾಡ್ಬೇಡಿ. ಮುಂದಿನ ವಾರ ಬೆಂಗಳೂರಿಗೆ ಬಂದು ಬಿಲ್ಗೆ ಸೈನ್ ಮಾಡ್ಸಿಕೊಂಡು ಹೋಗಿ.
ರೀ ಸೇತುವೆ ಮತ್ತೆ ಕುಸಿದಿದೆ ಅಂತಲ್ರೀ. ಹೊಸದಾಗಿ ಮಾಡಿದ್ದು ಅಲ್ವಾ.
ಸರ್ ಅದು ಗಟ್ಟಿ ಮುಟ್ಟಾಗೇ ಇತ್ತು. ಆದರೆ ನೀರಿನ ರಭಸಕ್ಕೆ ಒಂದೆರಡು ಪಿಲ್ಲರ್ ಮಾತ್ರ ಬಿದ್ದಿದೆ. ಅಷ್ಟೆ. ಇದರ ರಿಪೇರಿಗೆ ಸುಮಾರು ಒಂದು ಕೋಟಿ ಬೇಕಾಗುತ್ತೆ. ಸರಿ ಬೆಂಗಳೂರಿಗೆ ಬಂದು ಜ್ಞಾಪಿಸಿ.
ತಹಸೀಲ್ದಾರ್ ಎಲ್ಲಿ. ಆ ಜಮೀನು ಒತ್ತುವರಿ ಬಗ್ಗೆ ಹೇಳಿದ್ದನ್ನೆಲ್ಲಾ ಏನಾಯ್ತು.
ಸಾರ್ ಅವರಿಗೆ ಈಗಾಗಲೆ ಎನ್ 1 ಕೊಟ್ಟಿದೀವಿ. ಕೋರ್ಟ್ ಗೆ ಹೋಗಿದಾರೆ.
ಅಯ್ಯೂ ಕೂತು ಬಗೆಹರಿಸಿ ಅಪ್ಪಾ. ಆಮೇಲೆ ಸಂಧ್ಯಾ ಸುರಕ್ಷಾ, ವಿಧವಾ ವೇತನಕ್ಕೆ ಸಮಸ್ಯೆ ಇಲ್ಲವಾ.
ಎಲ್ಲಾ ಸರಿ ಇದೆ ಸಾರ್. ಆದರೆ ಅರ್ಜಿ ಹೆಚ್ಚಾಗ್ತಾ ಇದೆ.
ಹೀಗೆ ಚರ್ಚೆಗಳು ನಡೆಯುತ್ತಾ ಇರುತ್ತದೆ. ಇದರಲ್ಲಿ ಅಧಿಕಾರಿಗಳು ಯಾವುದೋ ದಾಖಲೆಗೆ ಯಾವುದೋ ತಂದಿರುತ್ತಾರೆ. ವಿಷಯದ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹೆದರಿಕೆಯಿಂದಲೋ ಅಥವಾ ಮರೆತೋ ಒಟ್ಟಿಗೆ ಹೀಗೆ ಇರುತ್ತದೆ. ಅವರು ಹೊರಡುತ್ತಾರೆ ಅನ್ನುತ್ತಿದ್ದ ಹಾಗೆನೇ ಅಧಿಕಾರಿಗಳು ಮೊಗದಲ್ಲಿ ನಗು. ಸದ್ಯ ಬದುಕಿದೆಯಾ ಬಡ ಜೀವವೇ ಎಂದು. ಇನ್ನು ಸಾಕಷ್ಟು ಇದೆ. ಮುಂದಿನ ಕಂತಿನಲ್ಲಿ.
Comments
ಉ: ಮುಖ್ಯಮಂತ್ರಿ ಬಂದಾಗ ಅಧಿಕಾರಿಗಳ ತಳಮಳ - ಪಕ್ಷಿ ನೋಟ