ಮಂಜುನಾಥ ಹೊಳೆನರಸೀಪುರರವರಿಗೆ..

ಮಂಜುನಾಥ ಹೊಳೆನರಸೀಪುರರವರಿಗೆ..

 

    ಜನ್ಮ ದಿನಕ್ಕಾಗಿ........

 

        ಹುಟ್ಟು ಹಬ್ಬದ ಗಳಿಗೆ ನೂರ್ ಕಾಲ ಬರಲಿ

        ನೆಮ್ಮದಿಯ ಕ್ಷಣಗಳಿವು ಸಂತಸವ ತರಲಿ

        ಹೊಸ  ಕ್ಷಣದ ಹೊಸತನದ ಹೊಸ ಜೀವತಂತು

        ಆತ್ಮೀಯ ಒಡನಾಟ ಅದು ಮರೆವುದೆಂತು

 

 

         ನಿಮ್ಮ ಕನಸಿನ ಒರತೆ ಜಿನುಗುತಲಿ ಸತತ

         ದೂರದೂರಲಿ ನೀವು  ಕಾಯಕದಿ ನಿರತ

         ಈ ನೆಲದ ಭಾಂದವ್ಯ ಮಧುರತೆಯ ನಡೆಯು

         ಇರಲೆಂದು ಶಾಶ್ವತದಿ ಸುಖಶಾಂತಿ ಸುಧೆಯು

Rating
No votes yet

Comments