ಮೂಢ ಉವಾಚ -23

ಮೂಢ ಉವಾಚ -23

      ಮೂಢ ಉವಾಚ -23


ಆರು ಅರಿಗಳನು ಅರಿಯದವರಾರಿಹರು?|
ದೇವಕಾಮದ ಫಲವಲ್ಲವೇ ಚರಾಚರರು||
ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ|
ಕಾಮನಾಧೀನರಾಗಿಹರು ನರರು ಮೂಢ||


 


ಆತ್ಮನೇ ತಾನೆಂಬ ಅರಿವು ಮರೆಯಾಗಿ|
ತನು-ಮನವೆ ತಾವೆಂದು ಭ್ರಮಿತರಾಗಿರಲು||
ತುಂಬಿದಜ್ಞಾನದಿಂ ಜನಿಸುವುದು ಕಾಮ|
ಕಾಮಫಲಿತಕ್ಕಾಗಿ ಕರ್ಮಗೈವರೋ ಮೂಢ||

Rating
No votes yet

Comments