ದ್ವಿರುಕ್ತಿಗಳು

ದ್ವಿರುಕ್ತಿಗಳು

Comments

ಬರಹ

ಸಾಮಾನ್ಯವಾಗಿ ನಾವು ಮಾತನಾಡುವಾಗ, ಊಟ-ಗೀಟ, ಕಥೆ-ಗಿಥೆ, ಹಣ್ಣು-ಗಿಣ್ಣು, ಹಾಡು-ಗೀಡು, ಹೂವು-ಗೀವು, ಮನೆ-ಗಿನೆ ಅಂತೆಲ್ಲ ಮಾತನಾಡುತ್ತಿರುತ್ತೇವೆ. ಈ ಎಲ್ಲ ಬಳಕೆಗಳಲ್ಲಿ `ಗ' ಕಾರವೇ ಹೆಚ್ಚಾಗಿ ಬಳಸುತ್ತೇವೆ. ಅದು ಏಕೆ?  ಇಂತಹ ಸಂದರ್ಭಗಳಲ್ಲಿ ಬೇರೆ ಅಕ್ಷರಗಳ ಬಳಕೆ ಏಕಿಲ್ಲ? ಈ ವಿಚಾರದ ಬಗ್ಗೆ ನನಗೆ ಕೊಂಚ  ಆಸಕ್ತಿ ಹುಟ್ಟಿ ಸಂಪದದಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಪ್ರಾಜ್ಞರು ಈ ಕುರಿತು ವಿವರಣೆ ನೀಡಿದಲ್ಲಿ ನನ್ನಲ್ಲಿ ಉಂಟಾಗಿರುವ ಈ ಹಸಿವೆ ಇಂಗಬಹುದೋ ಎನ್ನುವ ಆಶಯ. ಅಥವಾ ಇನ್ಯಾವುದಾದರೂ ಅಕ್ಷರ ಬಳಸಿರುವ ಉದಾಹರಣೆ ಇದೆಯೇ? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet