ಕನ್ನಡ ಕೀಲಿ ಮಣೆ - Kannada Keelimane
ನಮಸ್ಕಾರ,
ನಮ್ಮಲ್ಲಿ ಹೆಚ್ಚಿನ ಜನಕ್ಕೆ ಅವರವರ ಕನ್ನಡಿಗ ಸ್ನೇಹಿತರಿಗೆ ಈ-ಮೇಯಿಲ್ ಕಳಿಸುವಾಗಲೋ ಅಥವಾ ಯಾವ್ದೋ ಒಂದು ಬರವಣಿಗೆಯನ್ನ ಕನ್ನಡದಲ್ಲಿಯೇ ಬರೆದು ಕಳುಹಿಸುವ ಆಸೆ ಇದ್ದೇ ಇರುತ್ತದೆ, ಯಾಕಂದ್ರೆ ನಮ್ಮ ಭಾಷೆಯ ಸೊಗಡು ಅಂತದ್ದು, ಭಾವನೆಗಳನ್ನ ಬೆಸೆಯುವ ಪದಗಳ ಮಾಧುರ್ಯ ಅಂತದ್ದು. ಆದ್ರೆ ಕಂಪ್ಯೂಟರ್ ತುಂಬ ಬರೀ ಇಂಗ್ಲೀಷ್ ಕೀಲಿಮಣೆಗಳೇ ತುಂಬ್ಕೊಂಡಿರೋವಾಗ ನಾವು ಕನ್ನಡದಲ್ಲಿ ಟೈಪ್ ಮಾದೋದ್ ಹೇಗೆ ಅನ್ನೋ ಪ್ರೆಶ್ನೆಯೇನಾದ್ರು ನಿಮ್ಮನ್ನ ಕಾಡ್ತಿದ್ರೆ, ಈ ಮಿಂಚೆ ನಿಮ್ಗೆ ಸಹಾಯ ಮಾಡುತ್ತೆ ಅಂದ್ಕೋತೀನಿ.
ಹೌದು ನಾನ್ ಮಾತಾಡ್ತಿರೋದು "ಬರಹ" ಎನ್ನುವ ಕನ್ನಡ ಬರವಣಿಗೆಯ ಸಾಫ್ಟ್ವೇರ್ ಬಗ್ಗೆನೆ. ಕಂಪ್ಯೂಟರ್ ಕೀಲಿಮಣೆ ಆಂಗ್ಲಭಾಷೆದೆ ಆದ್ರೂನು ನಾವು ಕನ್ನಡ ಪದಗಳನ್ನ ಸರಾಗವಾಗಿ ಟೈಪ್ ಮಾಡಬಹುದು. ಉದಾಹರಣೆ: "ನಾನು" ಅಂತ ಕನ್ನಡದಲ್ಲಿ ಟೈಪ್ ಮಾಡೋಕೆ ನೀವು ಕೀಲಿ ಮಣೆಯಲ್ಲಿ naanu ಅಂತ ಟೈಪ್ ಮಾಡ್ಬೇಕು, ಹಾಗೆ "ನೀನು" ಅಂತ ಬರ್ಬೇಕಾದ್ರೆ ಕೀಲಿ ಮಣೆಯಿಂದ neenu ಅಂತ ಮಾಡ್ಬೇಕು. ಎಷ್ಟು ಸುಲಭ ಅಲ್ವಾ?
"ಇಂಗ್ಲೀಷ್ ಕೀಲಿ ಮಣೆಯಿಂದ ಕನ್ನಡದಲ್ಲಿ ಟೈಪ್ ಮಾಡೋಕೆ ಮತ್ತು ಅದನ್ನು ಉಪಯೋಗಿಸುವ ಹೆಚ್ಚಿನ ಮಾಹಿತಿಗಾಗಿ ಇದೇ ಅಂತರ್ಜಾಲದಲ್ಲಿರುವ .Documents ನ್ನು ಓದಿ"
ಬರಹದ ಹೊಸ Version 9.2 ನಲ್ಲಿ ನಮಗೆ "ಬರಹ ಪ್ಯಾಡ್" ಕೂಡ ದೊರೆಯುತ್ತದೆ. ಇದು ನಮ್ಮ ವಿಂಡೋಸ್ ನಲ್ಲಿ ಬರುವ "Notepad" ನಂತೆ ಕನ್ನಡದಲ್ಲಿ ಬರೆಯಲು ಸಹಾಯ ಮಾಡುತ್ತದೆ. ಬರೆದ ಬರೆವಣಿಗೆಯನ್ನು ನೀವು ’ಕಾಪಿ’ ಮಾಡಿ ಈ-ಮೈಲ್ ನಲ್ಲೊ, ವರ್ಡ್ ಫೈಲ್ ನಲ್ಲೊ ಅಥವಾ ಇನ್ನಾವುದಾದ್ರೂ ಬರವಣಿಗೆಯಲ್ಲಿ ’ಪೇಸ್ಟ್’ ಮಾಡಬಹುದು. ಸಾಮಾನ್ಯವಾಗಿ ಎಲ್ಲಾ Windows XP SP3ಯಲ್ಲಿ Unicode Language Enable ಆಗಿರೋದ್ರಿಂದ ನಾವು ಪೇಸ್ಟ್ ಮಾಡಿದ ಅಕ್ಷರಗಳು ಬಾಕ್ಸ್ ಬಾಕ್ಸ್ ನಂತೆ ಬರುವುದಿಲ್ಲ ಮತ್ತು ಸಹಜವಾಗಿ ಕನ್ನಡದ ಅಕ್ಷರಗಳಲ್ಲಿ ಕಾಣುತ್ತದೆ.
ನಿಮ್ಮ ಕಂಪ್ಯೂಟರ‍್ನಲ್ಲೂ ಬರಹ Software Install ಮಾಡ್ಕೋಬೇಕ? ಹಾಗಿದ್ರೆ ಇಲ್ಲಿ Click ಮಾಡಿ ಅಥವಾ ಈ ಅಂತರ‍್ಜಾಲಕ್ಕೆ http://www.baraha.com/download.htm ಹೋಗಿ "Download Baraha 9.2" ಮೇಲೆ ಕ್ಲಿಕ್ ಮಾಡಿ Download ಮಾಡಬಹುದು.
ಹೊಸ ಬರಹ 9.2 Version ನೊಂದಿಗೆ ನೀವು ಪಡೆಯ ಬಹುದು:
Baraha, BarahaDirect, BarahaPad, FontConvert, BarahaConvert and BarahaSort programs. This package includes TrueType fonts for various Indian languages.
*-+-+- ತ್ವರೆ ಮಾಡಿ, ಈ offer ನೀವು install ಮಾಡೋವರ‍್ಗು ಮಾತ್ರ -+-+-*