ನಾನು ಅವರಿವರಂತಾದೊಡೆ?!

ನಾನು ಅವರಿವರಂತಾದೊಡೆ?!

ನನ್ನ ಕಾವ್ಯಸೃಷ್ಟಿ ನನ್ನ ಆತ್ಮಕ್ಕೆ ಆನಂದ ನೀಡಲಿ ಮೊದಲು
ಓದುವವರ ಮಟ್ಟಕ್ಕಲ್ಲ, ಬರೆವೆ ನಾನು ನನ್ನ ಮಟ್ಟ ತಲುಪಲು


ಪ್ರತಿಕ್ರಿಯೆಗಳೇ ಕಾವ್ಯಸೃಷ್ಟಿಗೆ ಕಾರಣವಾಗಿದ್ದಿದ್ದರೆ, ಕುವೆಂಪು
ಪಸರಿಸುತ್ತಿದ್ದರೆ ರಚಿಸಿ ಶ್ರೀರಾಮಾಯಣ ದರ್ಶನಂನ ಕಂಪು?


ಕಾಡಿರಲಿಲ್ಲವೇ ಅವರನ್ನೂ ಬ್ರಾಹ್ಮಣ-ಶೂದ್ರ ಎಂಬ ಹೊಯ್ದಾಟ?
ನಿಲ್ಲಿಸಿದ್ದರೇ ಹೇಳಿ ಕೊನೆ ಉಸಿರಿನವರೆಗೂ ಅವರು ತನ್ನ ಆಟ?


ಬಣ ಬೇಡ ಬಲ ಬೇಡ ಕೆಚ್ಚೆದೆಯ ಛಲವೊಂದೇ ಸಾಕು ನನಗೆ
ಸದಾ ಹುಮ್ಮಸ್ಸಿರಲಿ ಅಕ್ಷರರೂಪ ಕೊಡಲು ಭಾವನೆಗಳ ಸೆಲೆಗೆ


ಅವರಿವರ ಕಂಡು ನಾನವರಿವರಂತಾದೊಡೆ ನನ್ನದೇನಿಲ್ಲ ಇಲ್ಲಿ
ಎಲ್ಲರಂತೆ ಎಲ್ಲರೂ ಇದ್ದರೂ, ನನ್ನಂತೆ ಇನ್ನಾರೂ ಇಲ್ಲದಿರಲಿ!


*****************


ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments