ಎಲ್ಲಿಹ ಇವ ಈ ದಾತ ..?

ಎಲ್ಲಿಹ ಇವ ಈ ದಾತ ..?



ಅರೆ ಹೊಟ್ಟೆಯ ಮಂದಿ ಬದುಕು ಜಟಕಾ ಬಂಡಿ
ಇಲಿವೃತ್ತದ ಜಗಸಂತೆ
ಪರದಾಟ ಗೋಳು ಅತಿವೃಷ್ಠಿ ಅನಾವೃಷ್ಠಿಯ
ಹೇರು, ಎಲ್ಲಿದ್ದಾನೆ ಆತ?

ಮೇರೆತ್ತರದ ಮಹಲುಗಳು,
ದೊಡ್ಡ ದೊಡ್ಡ ಕಾರ್ಯಾಲಯಗಳು
ಸಾವಿರ ಲಕ್ಷ ಕಾರ್ಮಿಕರು
ಎಲ್ಲವೂಸಿದ್ಧ, ನಿಯಮ ಬದ್ಧ

ಕಾಯಕ ಕಾಯಕ, ಮಾನವತೆಯಿಲ್ಲದೆಡೆ
ಎಲ್ಲರ ಕೌತುಕ, ಸುಂದರ ಆಸನದಾತ
ಮೇಜು ಶ್ರಂಗಾರದ ಗಾಜು,
ಎಲಿದ್ದಾನೆ ಆತ!! ಎಲ್ಲರ ದಾತ?

ಖಾಲಿ ಮನೆ ಮನದ ಅರೆಹೊಟ್ಟೆಯ ಕಾರ್ಮಿಕರು
ಕಪಿಮುಷ್ಠಿಯ ಆಢಳಿತ ಕಾಡಿನ ನ್ಯಾಯ
ಬವಳಿ ಕಂಗೆಟ್ಟ ಜನ  
ಇನ್ನೂ ಬರಲಿಲ್ಲ ಆತ

ಸಿಟಿಗೆದ್ದೆ ನಾನು ಕೇಳಿಯೇ ಬಿಟ್ಟೆ
ಎಲ್ಲಿಹ ಇವನು ಈ ದಾತ?
ಈ ಎಲ್ಲರ ನೋವು ಕಳೆಯುವಾತ
ಇದಿರವ ಬೆರಗು ಗಣ್ಣಲ್ಲೇ ನುಡಿದ
ಇದೇನು ತಮಾಷೆ ಇನ್ಯಾರು ನೀವೇ!!



Rating
No votes yet

Comments