ಚಿತೆಯೇರಿದ ಚಿಂತೆ
ಚಿಂತೆಯ ಬಿಡಿಸು ಚಿತೆ ಏರಿದ ಮೇಲಾದರೂ
ಇದ್ದಾಗ ನಮ್ಮಿಬರ ಇಹದ ಚಿಂತೆ
ನೀ ಹೋದರು ನಿನ್ನ ಪರದ ಚಿಂತೆ
ಚಿಂತೆಯ ಪಯಣವ ಮುಗಿಸಿ ಹೊರಟಿರುವೆ ನೀನು
ಬಿಡಿಸಲೋಲ್ಲೆಯ ನನ್ನೀ ಇಹ ಪರದ ಚಿಂತೆಯ
ಜೋತೆಯೊಳಗೆ ಹಂಚಿದ್ದೆವು ಜೀವನದ ಚಿಂತೆ
ಚಿಂತೆಯೋಳಗಿರುವಾಗಲೇ ನೀ ಸಿಕ್ಕಿದು ಆ ಸಂತೆಯೊಳಗೆ
ಸಂತೆಯೊಳಗೆ ಕುಂತೆ ಮಾಡಿದ್ದೆವು ನಮಿಬ್ಬರ ಮುಂದಿನ ಚಿಂತೆ
ಚಿಂತೆಯ ಬಿಡಿಸು ಚಿತೆ ಏರಿದ ಮೇಲಾದರೂ
ಪಯಣದ ಉದ್ದಕ್ಕೂ ಓಮನಸ್ಸ ಚಿಂತೆ, ಮಕ್ಕಳ ಚಿಂತೆ,
ಮಂದಿಯ ಚಿಂತೆ, ಮನೆ ಕಟ್ಟುವ ಚಿಂತೆ,
ಮಕ್ಕಳ ಮದುವೆಯ ಚಿಂತೆ, ಎಂತೆಂಥ ಚಿಂತೆ,
ಅಂತೆಕಂಥೆಗಳದೆ ಮುಗಿಯಲಾರದ ದೊಡ್ಡ ಚಿಂತೆ
ಚಿತೆ ಏರುವ ಚಿಂತೆಯಲ್ಲಿ ಒಂಟಿಯಾದೆಯಲ್ಲ
ಬಿಡಿಸಲಾರೆಯ ನನ್ನೀ ಚಿಂತೆಯ
ಚಿಂತೆಯ ಬಿಡಿಸು ಚಿತೆ ಏರಿದ ಮೇಲಾದರೂ.
"ವಿಹಾರಿ"
Rating