ನಿನ್ನ ನೆನಪಲ್ಲಾದರೂ ನಾ ಪೂರ್ಣವಾಗಿ ಸಾಯುತ್ತೇನೆ..!.

ನಿನ್ನ ನೆನಪಲ್ಲಾದರೂ ನಾ ಪೂರ್ಣವಾಗಿ ಸಾಯುತ್ತೇನೆ..!.

ಆದ್ಯಾಕೋ ಗೊತ್ತಾಗುತ್ತಿಲ್ಲ ಗೆಳತಿ.

ನೀ ನನ್ನ ಮನದೊಳಗೆ ಬಂದು

ಇಲ್ಲ ಸಲ್ಲದ ರಂಪಾಟವ ಮಾಡಿ  

ಸತ್ತುಹೋಗಿರುವ ನನ್ನ ಹೃದಯದ ಬಯಲಿನಲ್ಲಿ

ಮತ್ತೆ ಆಸೆಗಳ ಬೀಜಗಳನ್ನು ಬಿತ್ತಿ ಕಣ್ಣೀರು ಸುರಿದು

ಚಿಗುರು ಮೂಡುವಂತೆ ಮಾಡಿ ಹೋಗುತ್ತೀಯ...!.

 

 

ನಿನಗೆ ಗೊತ್ತು ನಾನು ಸತ್ತು  

ಗೋರಿಯಂತಾಗಿರುವೆನೆಂದು,

ನನ್ನೊಳಗೆ ನಿನ್ನ ಯಾವ ಅವಶೇಷವೂ ಉಳಿದಿಲ್ಲ,

ಆದರೂ ನೀ ನನ್ನ ಬಿಡದೆ  

ಕಾಡಿಸಿ ಪೀಡಿಸಿ ಸತಾಯಿಸುತ್ತೀಯಾ,

ನಾ ಮಾಡಿದ ಪಾಪವಾದರೂ ಏನೂ ?.

 

ನಿನ್ನ ಪ್ರೀತಿಗಾಗಿ ಹಗಳಿರುಳು ಕಾದು ಕುಳಿತೆ 

ಎಷ್ಟೊಂದು ಬೆಳದಿಂಗಳ ರಾತ್ರಿಗಳು ಕಳೆದು ಹೋದವು 

ಎಷ್ಟೊಂದು ಅಮವಾಸ್ಯೆಗಳು ಸೋರಿ ಹೋದವು

ನೀ ಬರದೆ, ನಿನ್ನ ನೆನಪಲ್ಲೆ ಪೂರ್ಣವಾಗಿ ಮುಳುಗಿ

ಸಾಯಲಾಗದೆ, ಬದುಕಲಾರದೆ, ಅಂತರ್ ಪಿಚಾಚಿಯಂತಾದೆ.

 

ನನ್ನ ಬಯಕೆಗಳು ಆಸೆಗಳೆಲ್ಲವೂ ಸತ್ತಮೇಲೆ  

ನಿನ್ನ ಪ್ರೀತಿಯ ಬಗ್ಗೆ ತಿಳಿಸಲು ನನ್ನ ಬಳಿ ತಾನೆ ಏನು ಉಳಿದಿದೆ ?.

ಈಗಲಾದರೂ ನಿನಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ.

ನೀ ನನ್ನ ಬಿಟ್ಟು ಹೊರಟು ಹೋಗು ...!..

ನಿನ್ನ ನೆನಪಿನಲ್ಲಾದರೂ ನಾ ಪೂರ್ಣವಾಗಿ ಸಾಯುತ್ತೇನೆ..!.

 

                                                                          ವಸಂತ್

 

Rating
No votes yet

Comments