ಜನ್ಮದಿನ

ಜನ್ಮದಿನ

ಸುರೇಶ್, ಮಂಜಣ್ಣನವರ ಜನ್ಮ ದಿನಗಳು

ಸಂಪದದಲ್ಲಿ ಹರಿಸಿವೆ ಸಂತಸದ ಹೊನಲು

ಮಿತ್ರರು ಬರೆದರು ಕವನಗಳನ್ನು, ಲೇಖನಗಳನ್ನು

ಬಂದವು ನೂರಾರು ಶುಭಾಷಯದ ಪತ್ರಗಳು

ಹರುಷ ವ್ಯಕ್ತ ಪಡಿಸಿದ ಮಿತ್ರದ್ವಯರು

ನಿಮ್ಮೆಲ್ಲರ ಸ್ನೇಹ ಹೀಗೆ ಇರಲಿ ಎಂದೆಂದೂ.

 

ಒಬ್ಬಾತ ಇರುವುದು ಕರುನಾಡಲ್ಲಿ

ಮತ್ತೊಬ್ಬ ಇರುವುದು ಮರಳುಗಾಡಿನಲ್ಲಿ

ಇವರಿಬ್ಬರ ನಂಟು ಎಲ್ಲರೂ ತಿಳಿಯರು

ತಿಳಿದಿರುವುದು ಕೆಲವರಿಗೇ ಮಾತ್ರ

 

ಎಲ್ಲರೂ ತಿಳಿಯಲೇ ಬೇಕೇ?

ನಡೆಯಬೇಕು ಆತ್ರೇಯರ

ಮತ್ತೊಂದು ಸಮ್ಮಿಲನ

 

ಇವರೀರ್ವರ ಜನ್ಮ ದಿನಾಚರಣೆ

ನಡೆದದ್ದು ಬರೀ ಅಕ್ಷರದಲ್ಲಿ

ಸ್ನೇಹಿತರಿಗೆ ಸಿಹಿ ಇಲ್ಲವೆ?

ಅಕ್ಷರದಲ್ಲೇ ಸಿಹಿ ನೀಡಿದ್ದೇವೆ

ಮತ್ಯಾಕೆ ಮತ್ತೊಂದು ಸಿಹಿ

ಅಸುಮನ,ಮಂಜಣ್ಣ ಹೌದಲ್ಲವೇ?

ಇದುವೇ ಸಿಹಿ ಮನಕ್ಕೆ -ನಾಲಿಗೆಗೆ!

 

Rating
No votes yet

Comments