ಐನಾತಿ ವೈದ್ಯರೂ.. ಮರೆಗುಳಿ ರೋಗಿಯೂ

ಐನಾತಿ ವೈದ್ಯರೂ.. ಮರೆಗುಳಿ ರೋಗಿಯೂ

                                  


ಡಾ ಕ್ಟರೇ ನನ್ನ ಮಗ
ಏನಾಯ್ತ್ರೀ ನಿಮ್ಮ ಮಗನಿಗೆ?
ಅವನು ತಾನು ನಾಯಿಮರಿ ಅಂತ ತಿಳ್ಕೊಂಡಿರ್ತಾನೆ
ಅದರಲ್ಲೇನು? ಈಗಿನ ಕಾಲ್ದಲ್ಲಿ ಮಕ್ಕಳ ಅನುಭವ ಯೋಚನೆ ಎಲ್ಲವೂ ಜಾಸ್ತಿ ಅದಕ್ಕೇ ಹಾಗಿರ್ತಾರೆ, ಏನೂ ತೊಂದರೆಯಿಲ್ಲ ಬಿಡಿ
ಹಾಗಲ್ಲಾ ಸಾರ್ , ಎಲ್ಲರೆದುರಿಗೆ ಹಾಗೆ ಕಾಲೆತ್ತಿ.... ........ಮಾಡೋದು, ಬಂದವರೆದುರಿಗೆ ಬೌ ವೌ ಅನ್ನೋದು ಸರಿಯಾಗಿರಲ್ಲವಲ್ಲ?
ಹ್ಜ್ಞಾ...


ಡಾಕ್ಟರೇ ನನ್ನ ಎರಡನೇ ಮಗ.....?
ಎನಾಯ್ತು ಅವನಿಗೆ?
ಅವನು ಯಾವಾಗಲೂ ತಾಯಿಗೆ ಫೋನ್ ಮಾಡ್ತಾ ಇರ್ತಾನೆ.
ಅದರಲ್ಲೇನ್ರೀ, ತಾಯಿಯನ್ನೇ ಕೆಲವು ಮಕ್ಕಳು ಹಚ್ಚಿಕೊಂಡಿರುತ್ತಾರೆ,  ಹಾಗಾಗತ್ತೆ,   ತೊಂದರೆಯಿಲ್ಲ
ಅಲ್ಲರೀ, ಹಗಲು ...ರಾತ್ರೆ.... ಯಾವಾಗೆಂದರೆ ಆಗ.... ಫೋನೇ ಮಾಡ್ತಾ ಇರ್ತಾನಲ್ಲ?
ತೊಂದರೆಯಿಲ್ಲ..... ಅಂದೆನಲ್ಲಾ..? ಅಂದ ಅವನ ಹಾಗೆ ತಾಯಿ ಎಲ್ಲಿದ್ದಾರೆ ? ಅಮೇರಿಕಾದಲ್ಲಾ?
ಅಲ್ಲ  ಡಾಕ್ಟರೇ , ಅವಳು ತೀರಿ ಹೋಗಿ ಸುಮಾರು ಹತ್ತು ವರ್ಷ ಆಯ್ತು.
ಹ್ಜ್ಞಾ...


ಡಾಕ್ಟರೇ ನನ್ನ ಮೂರನೇ ಮಗ...
ಅವನಿಗೇನಾಯ್ತು ಹೇಳಿ? ಅವನಿಗೇನೂ ಆಗಿಲ್ಲಾ, ಅವನು ತಾನು ಒಂದು ಫ್ರಿಡ್ಜ್ ಅಂದ್ಕೊಂಡಿದ್ದಾನೆ
ಅದರಲ್ಲೇನು ಕೆಲವರು ಹಾಗೇ ಅಂದ್ಕೊಳ್ತಾರೆ, ಅದರಲ್ಲೇನು ತಪ್ಪಿಲ್ಲ, ಇರಲಿ ಬಿಡಿ
ಹಾಗಲ್ಲ ಸಾರ್ , ಅದಕ್ಕೆ ...ರಾತ್ರೆ ನನ್ ಎರಡನೇ ಹೆಂಡ್ತಿಗೆ ನಿದ್ದೇನೇ ಬರಲ್ಲ ಅಂತೀನಿ
ಯಾಕೆ ? ಅವನು ತನ್ನನ್ನ ಫ್ರಿಡ್ಜ್ ಅಂದ್ಕೊಳ್ಳೋಕೂ ಅವರಿಗೆ ನಿದ್ದೆ ಬಾರದೇ ಇರೋಕ್ಕೂ ಎನ್ರೀ ಸಂಭಂಧ?
ಅಲ್ಲಾರಿ ಅವನು ರಾತ್ರೆ ಬಾಯಿ ತೆರೆದುಕೊಂಡು ನಿದ್ದೆ ಮಾಡ್ತಾನಲ್ಲಾ... ಅದಕ್ಕೇ....
ಅದಕ್ಕೇ....?
ಆ ಫ್ರಿಡ್ಜ್ ಬೆಳಕಿನಿಂದ ಅವಳಿಗೆ ರಾತ್ರೆಯೆಲ್ಲಾ ನಿದ್ದೆನೇ ಬರಲ್ಲಾರಿ..
ಹ್ಜ್ಞೋ.........

೪.

ಸರಿ ನಿಮ್ಮ ಬಗ್ಗೆ ಹೇಳಿ

ನನಗೆ ಸುಮಾರು ೨-೩ ತಿಂಗಳಿಂದ ಸರಿಯಾಗಿ ನೆನಪಿರೋಲ್ಲ, ಮರೆವು  ನಾನೇನು ಮಾಡ್ತೀನಿ ನಂಗೇ ಗೊತ್ತಿರಲ್ಲ, ಒಮ್ಮೆ ರಾತ್ರೆ ಪಕ್ಕದ ಮನೆಗೋಗಿ ಅಲ್ಲೇ ಇದ್ದೆನಂತೆ.ಊಟ್ ತಿಂಡಿ ಎಲ್ಲಾ ಮರೆತೋಗತ್ತೆ. ಏನ್ ಮಾಡೋದೆಂತ ಗೊತ್ತಾಗೊಲ್ಲ.
ಸರಿ ನೀವೇನ್ ಚಿಂತೆ ಮಾಡ್ಬೇಡಿ, ಹೊಸ ಒಂದು ಇಂಜೆಕ್ಷನ್ ಬಂದಿದೆ ಹಣ ಸ್ವಲ್ಪ ಜಾಸ್ತಿನೇ, ಒಂದೈವತ್ತು ಸಾವಿರ ಆಗಬಹುದು. ಆದರೆ ತುಂಬಾ ಪರಿಣಾಮಕಾರಿ, ಅದನ್ನು ಕೊಡಲಾ?
ಅದೆಷ್ಟಾದರು ಪರವಾಗಿಲ್ಲ ಸಾರ್ , ಒಮ್ಮೆ ನನ್ನ  ಈ ರೋಗ ವಾಸಿಮಾಡಿ ಅಷ್ಟೇ.
ಈಗ ಕೊಟ್ಟಿದ್ದೇನಲ್ಲ ಆ ಇಂಜೆಕ್ಷನ್ ಒಳ್ಳೆಯ ಪರಿಣಾಮಕಾರಿ ಅಯ್ತಾ, ತಕ್ಷಣ ಗುಣಕೊಡತ್ತೆ.
ಹೌದಲ್ಲಾ ನಾನು ತುಂಬಾ ಬದಲಾದ ಹಾಗೇ ಅನ್ನಿಸುತ್ತೆ..


ಸರಿ ಹಾಗಾದರೆ ನನ್ನ ಫೀಸು ಕೊಡಿ.
ಯಾವ ಫೀಸು..?
ನೀವು ...   ನಾನು..... ನಿಮಗೆ ಔಷಧಿ ಕೊಟ್ಟದ್ದು.....ನಿಮ್ಮ ಮರೆವು..?

ಏನಾಗಿದೆ  ಡಾಕ್ಟರೇ   ನಿಮಗೆ?  ನನಗಾ ಮರೆವು ನಿಮಗಾ..?  ನನಗೇನಾಗಿಲ್ಲ ,ನಾನು ಗುಂಡು ಕಲ್ಲಿನ ಹಾಗೆ ಇದ್ದೇನೆ , ನೀವೇ  ಒಂದು ಒಳ್ಳೆಯ ಡಾಕ್ಟರಿಗೆ ತೋರಿಸಿಕೊಳ್ಳೋದು ಒಳ್ಳೆಯದು, ಆಯ್ತಾ....ಬರ್ತೀನಿ

Rating
No votes yet

Comments