ಮದುವೆ ಮತ್ತು ಹೆಣ್ಣು.. ಎರಡು ಚುಟುಕುಗಳು
ಮದುವೆ
ಮದುವೆ
ಒಬ್ಬರಿಗೆ ಆಸರೆ
ಇನ್ನೊಬ್ಬರಿಗೆ ಕೈಸೆರೆ
ಒಬ್ಬರಿಗೆ ಬರೀ ಮುಸುರೆ
ಮಗುದೊಬ್ಬರಿಗೆ
ಬರೀ
ಕಣ್ಣೀರ ಮುಸಲಧಾರೆ
ಆಗದಿರಲಿ
ಅದು ಕವಲುದಾರಿ.....).......(
ಒಬ್ಬೊಬ್ಬರಿಗೆ ಅದು
ಜೀವಾವಧಿ ರಕ್ಷೆಯಾದರೆ
ಇನ್ನೊಬ್ಬರಿಗೆ ಅದು
ಜೀವಾವಧಿ ಶಿಕ್ಷೆ.
ಆಗದಿರಲಿ
ಅದು ನಿರಾಶೆಯ ನೀಲ ನಕ್ಷೆ..
*******
ಸ್ಫೂರ್ತಿ:
(ಈ ಆ೦ಗ್ಲ ಸೂಕ್ತಿ: Marriage is not a word. It is a sentence—a life
sentence.!)
**************
ಒಬ್ಬ ಹೆಣ್ಣಿನ ಅಳಲು
ಹುಟ್ಟಿದರೆ
ಹೆಣ್ಣಾಗಿ ಹುಟ್ಟಬಾರದು
ಹೆಣ್ಣಾಗಿ ಹುಟ್ಟಿದರೆ
ಮದುವೆಯಾಗಬಾರದು
ಮದುವೆಯಾದರೆ
ಮಕ್ಕಳಾಗಬಾರದು
ಮಕ್ಕಳಾದರೆ
ಜೀವ ಗಟ್ಟಿಯಿರುವಾಗಲೇ
ಸಾಯಬೇಕು
ಸಾಯಬಾರದೆ೦ದರೆ
ಅಸಲು
ನಾನು.. ನಾನು
ಹುಟ್ಟಲೇ ಬಾರದು!..
****
ಒಬ್ಬ ಹೆಣ್ಣಿನ ಅಳಲು
Rating
Comments
ಉ: ಮದುವೆ ಮತ್ತು ಹೆಣ್ಣು.. ಎರಡು ಚುಟುಕುಗಳು