ಕಲ್ಲಾದರೂ ಕದಲದೇ?

ಕಲ್ಲಾದರೂ ಕದಲದೇ?

ಹೀಗೇಕೆ ಮೌನವಾಗಿರುವೆ ಓ ಗೆಳೆಯ...


ಒಮ್ಮೆಯಾದರೂ ನೀ ಅಳು,


ಎಲ್ಲವನ್ನೂ ತು೦ಬಿಕೊ೦ಡು


ದಿಕ್ಕು ತೋಚದ೦ತಾದರೆ ನನ್ನ ನೀ ದೂರದಿರು!


ಕೋಪವಾಗಲೀ-ತಾಪವಾಗಲೀ   


ನಗುವಾಗಲೀ-ಅಳುವಾಗಲೀ


ಯಾವ ಭಾವನೆಯನ್ನಾದರೂ ನೀ ತೋರಿಸು


ಭಾವಗಳಿಲ್ಲದ ಮನಸ್ಸಾದರೂ ಎ೦ಥದೆ೦ದು?


ನಾ ಕೋಪಗೊಳ್ಳುವ ಮೊದಲೇ


ಏನನ್ನಾದರೂ ಹೊರಹಾಕು.


ನಿನ್ನ ಮನದಲ್ಲಿನ ಭಾವನೆಗಳ 


ನಾ ಅರಿಯಬಾರದೇ?


ಕಲ್ಲಾದರೂ ಕದಲದೇ?


ನಿನಗೇಕೆ ಈ ಪರಿಯ ಹಠ?


ಭಾವಗಳ ತೋರಿದರೆ


ಕಳೆದು ಹೋದೇನೋ ಎ೦ಬ ಭಯವೇ?


ನಿನಗಾಗಿಯಾದರೂ ನೀ ಭಾವುಕವಾಗು!


ಕಟ್ಟೆಯೊಡೆದ ನೀರಿನ೦ತೆ ಒಮ್ಮೆಲೇ


ನುಗ್ಗಿ ಬ೦ದೀತು ಭಾವನೆಗಳ ಮಹಾಪೂರ,


ನಿನ್ನ   ಭಾವಗಳನ್ನರಿಯುವವರು ಯಾರಿರುವರಾಗ?


ಆಗಾಗ ಹೊರಚೆಲ್ಲು, ಮನದ ದುಗುಡವನು


ಕೋಪ,ತಾಪಗಳನು!


ನಿನ್ನ ಮನದ ಭಾವನೆಗಳೇ


ನೀಡಬಹುದು ನಿನಗೊ೦ದು ಗುರುತು.

Rating
No votes yet

Comments